ಬ್ರೇಕಿಂಗ್ ನ್ಯೂಸ್
09-07-21 05:31 pm Headline Karnataka News Network ದೇಶ - ವಿದೇಶ
ನವದೆಹಲಿ, ಜುಲೈ 9: ಚೀನಾ - ಭಾರತದ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಇರುವಂತೆಯೇ ಚೀನಾ ಸೇನೆ ಗಡಿಭಾಗದಲ್ಲಿ ನಿಯೋಜಿಸಲೆಂದೇ ಟಿಬೆಟ್ ಯುವಕರನ್ನು ಸೇನೆಗೆ ಸೇರ್ಪಡೆಗೊಳಿಸಿ, ತರಬೇತು ಮಾಡುತ್ತಿರುವ ವಿಚಾರವನ್ನು ಭಾರತದ ಗುಪ್ತಚರ ಇಲಾಖೆ ಪತ್ತೆ ಮಾಡಿದೆ. ಭಾರತ– ಚೀನಾ ಮಧ್ಯದ ವಾಸ್ತವಿಕ ಗಡಿ ರೇಖೆಯ (ಎಲ್ಎಸಿ) ಉದ್ದಕ್ಕೂ ನಿಯೋಜನೆ ಮಾಡಲೆಂದೇ ಸ್ಥಳೀಯ ಟಿಬೆಟ್ ಮೂಲದ ಯುವಕರನ್ನು ಚೀನಾ ತನ್ನ ಸೇನೆಗೆ ಸೇರಿಸಿಕೊಳ್ಳುತ್ತಿದೆ.
ಟಿಬೆಟ್ ಯುವಕರನ್ನು ಬೇರೆ ಬೇರೆ ರೀತಿಯ ಪರೀಕ್ಷೆಗೆ ಒಳಪಡಿಸಿ, ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಮುಖ್ಯವಾಗಿ ಪರೀಕ್ಷೆ ಪಾಸ್ ಆಗಬೇಕಿರುವುದು ಚೀನಾದ ಪ್ರಮುಖ ಭಾಷೆ ಚೀನೀ ಭಾಷೆಯನ್ನು ಅರಿತುಕೊಂಡಿರುವುದು ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ವಿಧೇಯನಾಗಿರುವುದು. ಟಿಬೆಟ್ ಮೂಲದವನೇ ಆಗಿದ್ದರೂ, ಆತ ದಲಾಯಿ ಲಾಮಾ ಇನ್ನಿತರ ಗುರುಗಳ ತತ್ವವನ್ನು ಪಾಲಿಸದೇ ಚೀನೀ ಕಮ್ಯುನಿಸ್ಟ್ ಪಕ್ಷದ ತತ್ವಗಳನ್ನೇ ಅನುಸರಿಸಬೇಕಾದ್ದು ಕಡ್ಡಾಯ.
ಕಳೆದ ವರ್ಷ ಮೇ ತಿಂಗಳಲ್ಲಿ ಗಡಿಯಲ್ಲಿ ಚೀನಾ- ಭಾರತದ ಯೋಧರ ನಡುವೆ ಸಂಘರ್ಷ ನಡೆದಿತ್ತು. ಅಂದಿನ ಗಡಿ ಸಂಘರ್ಷದಲ್ಲಿ ಭಾರತ ಸೇನೆಯ ವಿಶೇಷ ವಿಭಾಗ, ಸ್ಪೆಷಲ್ ಫ್ರಂಟಿಯರ್ ಫೋರ್ಸ್ ನಲ್ಲಿದ್ದ ಟಿಬೆಟ್ ಮೂಲದ ಯೋಧರ ಸಾಹಸವನ್ನು ನೋಡಿದ್ದ ಕಾರಣವೋ ಏನೋ ಈಗ ಚೀನಾ ಸೇನೆಯೂ ಟಿಬೆಟ್ ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ಗಡಿಯಲ್ಲಿ ಭಾರತದ ಸೇನೆಯೊಂದಿಗೆ ಕಾದಾಡುವುದಕ್ಕಾಗಿಯೇ ಟಿಬೆಟ್ ದೇಶದ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುತ್ತಿದ್ದು, ಎಲ್ಎಸಿಯಲ್ಲಿ ಸೆಣಸುವಂತೆ ಸಜ್ಜು ಮಾಡುತ್ತಿದ್ದಾರೆ.
1962ರ ಚೀನಾ – ಭಾರತ ಯುದ್ಧದ ಬಳಿಕ ಭಾರತೀಯ ಸೇನೆ ಮತ್ತು ಅಮೆರಿಕದ ಸಿಐಎ ವಿಭಾಗದ ಯೋಧರು ಜಂಟಿ ತರಬೇತು ನೀಡಿ, ಸ್ಪೆಷಲ್ ಫ್ರಂಟಿಯರ್ ಫೋರ್ಸ್ ಎನ್ನುವ ವಿಶೇಷ ತುಕಡಿ ರೆಡಿ ಮಾಡಿದ್ದರು. ಎಲ್ಎಸಿಯಲ್ಲಿ ಚೀನಾ ಯೋಧರ ಜೊತೆ ಕಾದಾಡುವುದಕ್ಕಾಗಿಯೇ ರೆಡಿ ಮಾಡಿದ್ದ ಆ ತಂಡದಲ್ಲಿ ಹೆಚ್ಚಾಗಿ ಟಿಬೆಟ್ ಮೂಲದ ಯೋಧರೇ ಹೆಚ್ಚಿದ್ದಾರೆ. ಹಿಮಾಚ್ಛಾದಿತ ಟಿಬೆಟ್ ದೇಶದಿಂದ ಗಡೀಪಾರಾಗಿ ಭಾರತಕ್ಕೆ ಬಂದು ಗಡಿಯಲ್ಲಿ ನೆಲೆಸಿದ್ದ ಯುವಕರನ್ನು ಸೇರಿಸಿಕೊಂಡು ಪ್ರತ್ಯೇಕ ಯೂನಿಟ್ ರಚಿಸಲಾಗಿತ್ತು. ಇದೀಗ ಭಾರತಕ್ಕೆ ಎದುರಾಗಿ ಅದೇ ರೀತಿಯಲ್ಲಿ ಟಿಬೆಟ್ ಯುವಕರನ್ನು ಸೇರಿಸಿಕೊಂಡು ಪ್ರತ್ಯೇಕ ತಂಡ ರಚಿಸಲು ಚೀನಾ ಮುಂದಾಗಿದೆ.
ಈ ರೀತಿ ಟಿಬೆಟ್ ಯುವಕರನ್ನು ಸೇರಿಸಿಕೊಂಡು ಪ್ರತ್ಯೇಕ ತಂಡ ಮಾಡುವುದರಿಂದ ಚೀನಾ ಎರಡು ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಗುರಿ ಇರಿಸಿಕೊಂಡಿದೆ. ಲಡಾಖ್ ನಂತಹ ಪರ್ವತ ಪ್ರದೇಶಗಳಿಗೆ ದೂರದ ಚೀನಾ ಪ್ರಮುಖ ನೆಲೆಯಿಂದ ಆಗಾಗ ಬರುವುದು, ಚೀನಾ ಯೋಧರನ್ನು ನಿಯೋಜನೆ ಮಾಡುವ ಅಗತ್ಯ ನಿವಾರಣೆಯಾಗುತ್ತದೆ. ಅದರ ಜೊತೆಗೆ, ಚೀನಾ ಅಧೀನದಲ್ಲಿ ಸ್ವಾಯತ್ತ ಪ್ರದೇಶವಾಗಿರುವ ಟಿಬೆಟಿಯನ್ನರಿಗೆ ಸೇನೆಯಲ್ಲಿ ಕೆಲಸ ನೀಡಿದಂತಾಗುತ್ತದೆ. ಆಮೂಲಕ ಭಾರತಕ್ಕೆ ಅದೇ ರೀತಿಯ ಮುಯ್ಯಿ ತೀರಿಸಿದಂತಾಗುತ್ತದೆ ಎನ್ನುವ ದೂರಗಾಮಿ ಚಿಂತನೆಯನ್ನು ಇಟ್ಟುಕೊಂಡಿದೆ.
ಕಳೆದ ಬಾರಿ ಚೀನಾ ಗಡಿಯಲ್ಲಿ ಯುದ್ಧದ ವಾತಾವರಣ ನೆಲೆಸಿದ್ದಾಗ, ಭಾರತೀಯ ಸೇನೆ ಅಲ್ಲಿನ ಎಸ್ಎಫ್ಎಫ್ ಯೂನಿಟ್ ಜೊತೆಗೆ ಗಡಿಯಲ್ಲಿ ಮುನ್ನುಗ್ಗಿತ್ತು. ಚೀನಾ ಸೇನೆಯು ಪಾಂಗೊಂಗ್ ತ್ಸೊ ಕಣಿವೆಯ ಮೇಲೇರಿದಾಗ, ಭಾರತದ ಸ್ಪೆಷಲ್ ಫ್ರಂಟಿಯರ್ ಫೋರ್ಸ್ ಇನ್ನೊಂದು ಕಡೆಯಿಂದ ಮೋಖ್ ಪಾರಿ, ಬ್ಲಾಕ್ ಟಾಪ್ ಇನ್ನಿತರ ಎತ್ತರದ ಕಣಿವೆಗಳ ಮೇಲೇರಿ ನಿಂತಿದ್ದು ಚೀನಾದ ಕಣ್ಣು ಕುಕ್ಕುವಂತೆ ಮಾಡಿತ್ತು. ಕಳೆದ ಬಾರಿಯ ಸಂಘರ್ಷ, 1962ರ ಯುದ್ಧದ ಬಳಿಕ ಚೀನಾ – ಭಾರತದ ನಡುವೆ ಅತಿಹೆಚ್ಚು ಸೈನಿಕರನ್ನು ನಿಯೋಜನೆ ಮಾಡಿದ್ದಲ್ಲದೆ, ಅದೇ ರೀತಿಯ ಯುದ್ಧದ ಸನ್ನಿವೇಶವನ್ನು ನಿರ್ಮಾಣ ಮಾಡಿತ್ತು.
The Chinese army is recruiting Tibetan youth in its territory and training them for operations along the Line of Actual Control (LAC) with India. "We have been receiving intelligence inputs that the Chinese Army is recruiting Tibetan youth for carrying out special operations along the LAC with India and they have been holding regular exercises to prepare them for such Operations,"
26-11-24 11:52 am
HK News Desk
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm