ಬ್ರೇಕಿಂಗ್ ನ್ಯೂಸ್
22-07-21 11:27 am Headline Karnataka News Network ದೇಶ - ವಿದೇಶ
ಆಂಧ್ರಪ್ರದೇಶ, ಜುಲೈ 22: ಕೋವಿಡ್ನಿಂದ ಅದೇಷ್ಟೋ ಜನರು ತಮ್ಮ ಸಂಬಂಧಿಗಳು, ತಂದೆ-ತಾಯಿ ಕಳೆದುಕೊಂಡು ಸಂಕಷ್ಟಕ್ಕಿಡಾಗಿದ್ದಾರೆ. ಆದರೆ ಇಲ್ಲೊಬ್ಬ ಪ್ರೇಮಿ ತನ್ನ ಪ್ರಿಯತಮೆ ಕೋವಿಡ್ನಿಂದ ಮೃತಪಟ್ಟಿದ್ದಾಳೆಂದು ಆತ್ಮಹತ್ಯೆಗೆ ಶರಾಣಗಿರುವ ಘಟನೆ ಇಲ್ಲಿನ ಗಾಜುವಾಕ ಕಣಿತಿ ನಗರದಲ್ಲಿ ನಡೆದಿದೆ.
ಹೌದು, ತಾನು ಇಷ್ಟಪಟ್ಟಿದ್ದ ಯುವತಿ ಕೋವಿಡ್ ಸೊಂಕಿನಿಂದಾಗಿ ಕಳೆದ ಮೂರು ದಿನಗಳ ಹಿಂದೆ ಗುಂಟೂರಿನಲ್ಲಿ ಮೃತಪಟ್ಟಿದ್ದಾಳೆ. ಈ ವಿಷಯವನ್ನು ಜೀರ್ಣಿಸಿಕೊಳ್ಳದ ರೋಹಿತ್ ಕುಮಾರ್ (25) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪರವಾಡ ತಾಲೂಕಿನ ದೇಶಪಾತ್ರುನಿಪಾಲೇ ಗ್ರಾಮದ ನಿವಾಸಿ ದಟ್ಟಿ ಕೃಷ್ಣಾರಾವು, ಶಾಂತಿ ದಂಪತಿ ಮಗ ರೋಹಿತ್ ಕುಮಾರ್ ಇಂಟರ್ ಮೀಡಿಯೆಟ್ ವರೆಗೆ ವ್ಯಾಸಂಗ ಮುಗಿಸಿದ್ದಾರೆ. ಹೋಟೆಲ್ ಆನ್ಲೈನ್ ಪಾರ್ಸಲ್ ಸರ್ವಿಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರು ಸ್ನೇಹಿತರೊಡನೆ ಸೇರಿ ರೋಹಿತ್ ಕಣಿತಿ ರಸ್ತೆ ನಗರದಲ್ಲಿ ವಾಸಿಸುತ್ತಿದ್ದನು. ಮಧ್ಯಾಹ್ನದವರೆಗೆ ಪಾರ್ಸಲ್ ನೀಡಿ ಬಂದಿದ್ದಾರೆ. ಮಧ್ಯಾಹ್ನ 2.30ರ ಸಮಯಕ್ಕೆ ನೇರ ರೂಂಗೆ ತೆರಳಿ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಜೆ ಸ್ನೇಹಿತರೆಲ್ಲರೂ ಕಾರ್ಯ ಮುಗಿಸಿಕೊಂಡು ರೂಂಗೆ ಬಂದಾಗ ರೋಹಿತ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಈ ಸಂಗತಿಯನ್ನು ಮೃತ ರೋಹಿತ್ ಪೋಷಕರಿಗೆ ತಿಳಿಸಿದರು.
ಅನಕಾಪಲ್ಲಿಯ ಯುವತಿಯನ್ನು ರೋಹಿತ್ ಪ್ರೀತಿಸುತ್ತಿದ್ದನು. ಕಳೆದ ಮೂರು ದಿನಗಳ ಹಿಂದೆ ಆಕೆ ಕೋವಿಡ್ನಿಂದ ಮೃತಪಟ್ಟಿದ್ದಾಳೆ. ಬೇರೆ ಯುವತಿಯೊಂದಿಗೆ ಮದುವೆ ಮಾಡುವುದಾಗಿ ಹೇಳಿದ್ದೇವೆ. ಆದ್ರೆ ಇದನ್ನೇ ನೆನಪು ಮಾಡಿಕೊಂಡು ರೋಹಿತ್ ತನ್ನ ಪ್ರಾಣ ಕಳೆದುಕೊಳ್ಳುತ್ತಾನೆ ಎಂದು ತಿಳಿದಿರಲಿಲ್ಲ ಅಂತಾ ಮೃತ ರೋಹಿತ್ ತಂದೆ ಕೃಷ್ಣರಾವು ಕಣ್ಣೀರು ಹಾಕಿದ್ದಾರೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ರವಾನಿಸಿದರು. ಈ ಘಟನೆ ಕುರಿತು ಗಾಜುವಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
29-04-25 04:28 pm
HK News Desk
Praveen Nettaru, Mohsin Shukur, Karwar Police...
29-04-25 01:04 pm
Siddaramaiah Angry, Belagavi, Police: ಸಿಎಂ ಭಾ...
28-04-25 10:15 pm
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 05:45 pm
Mangalore Correspondent
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
29-04-25 02:53 pm
Mangalore Correspondent
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm