ಬ್ರೇಕಿಂಗ್ ನ್ಯೂಸ್
23-07-21 09:59 pm Headline Karnataka News Network ದೇಶ - ವಿದೇಶ
ಬಾಲಾಸೋರ್, ಜುಲೈ 23: ಒಡಿಶಾ ರಾಜ್ಯದ ಬಾಲಾಸೋರ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಅಬಕಾರಿ ದಳ ಜಂಟಿ ಕಾರ್ಯಾಚರಣೆ ನಡೆಸಿದ್ದು ವಿವಿಧ ಕಡೆ ಅಕ್ರಮ ಸಾರಾಯಿ ಘಟಕಗಳನ್ನು ಪತ್ತೆ ಮಾಡಿದ್ದಾರೆ. ಅಲ್ಲದೆ, 85 ಸಾವಿರ ಲೀಟರ್ ಅಕ್ರಮ ಸಾರಾಯಿಯನ್ನು ವಶಕ್ಕೆ ಪಡೆದಿದ್ದಾರೆ.
ಬಾಲಾಸೋರ್ ಎಸ್ಪಿ ಸುಧಾಂಶು ಮಿಶ್ರಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಜಿಲ್ಲಾ ಕೇಂದ್ರದಿಂದ ಹೊರಭಾಗದ ಪುರುನಾ ಬಾಲಾಸೋರ್ ಎಂಬಲ್ಲಿ ಅಕ್ರಮ ಸಾರಾಯಿ ತಯಾರಿ ಘಟಕ ಪತ್ತೆ ಮಾಡಲಾಗಿತ್ತು. ಆ ಪ್ರದೇಶದಲ್ಲಿ ಮಾಹುಲಿ ಹೆಸರಿನಲ್ಲಿ ಕಂಟ್ರಿ ಲಿಕ್ಕರ್ ಸೇಲ್ ಮಾಡಲಾಗ್ತಿತ್ತು. ಈ ಭಾಗದ ಮೂರನೇ ಒಂದು ಭಾಗದಷ್ಟು ಮಂದಿ ಅಕ್ರಮ ಸಾರಾಯಿ ತಯಾರಿ ಅಥವಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆ ಆವರಣದ ಹೊಂಡಗಳಲ್ಲಿ ಬಚ್ಚಿಡಲಾಗಿದ್ದ ಸೀಲ್ ಹಾಕಿದ್ದ ಕಂಟ್ರಿ ಲಿಕ್ಕರ್ ಬಾಟಲಿಗಳು, ಕ್ಯಾನ್ ಗಳು ಪತ್ತೆಯಾಗಿವೆ.
ಪುರುನಾ ಏರಿಯಾ ಕಂಟ್ರಿ ಲಿಕ್ಕರ್ ಮಾರಾಟ ಮತ್ತು ತಯಾರಿಯಲ್ಲಿ ದೊಡ್ಡ ಇತಿಹಾಸ ಹೊಂದಿದೆ. ಲಾಕ್ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಕ್ರೈಂ ಆಗಿದ್ದ ಈ ಏರಿಯಾದ ಬಗ್ಗೆ ಖಚಿತ ಮಾಹಿತಿ ಪಡೆದೇ ದಾಳಿ ನಡೆಸಲಾಗಿತ್ತು. ಪೊಲೀಸರ ಐದು ತುಕಡಿಗಳನ್ನು ಸೇರಿಸಿಕೊಂಡು ದಾಳಿ ಸಂಘಟಿಸಲಾಗಿತ್ತು. 70 ಸಾವಿರ ಲೀಟರ್ ಸಾರಾಯಿ ಮದ್ಯ ತಯಾರಿಸಲು ಬೇಕಾದ ಮಹುವಾ ಹೆಸರಿನ ಸ್ಪಿರಿಟನ್ನು ವಶಕ್ಕೆ ಪಡೆದು ಅದನ್ನು ನಾಶ ಪಡಿಸಲಾಗಿದೆ. ರೆಡಿ ಮಾಡಿದ್ದ 12 ಸಾವಿರ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಸುಧಾಂಶು ಮಾಹಿತಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ಏರಿಯಾದಲ್ಲಿ ಪೊಲೀಸರು ದಾಳಿ ನಡೆಸಿ, 50 ಸಾವಿರ ಲೀಟರ್ ಕಂಟ್ರಿ ಮದ್ಯವನ್ನು ವಶಕ್ಕೆ ಪಡೆದಿದ್ದರು. ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದರು.
The Balasore Police in Odisha along with excise department officials launched an operation and raided several illegal country liquor manufacturing units on Tuesday. Acting on reliable information, the Balasore Police led by Superintendent of Police (SP) Sudhanshu Mishra and excise sleuths raided the units in Puruna Balasore area and confiscated more than 85,000 litres of country liquor. Two individuals were arrested.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm