ಬ್ರೇಕಿಂಗ್ ನ್ಯೂಸ್
19-08-21 04:31 pm Headline Karnataka News Network ದೇಶ - ವಿದೇಶ
ಅಹಮದಾಬಾದ್, ಆಗಸ್ಟ್ 19: ಮಕ್ಕಳ ಬೆಳವಣಿಗೆಯಲ್ಲಿ ತಮ್ಮ ಖುಷಿಯನ್ನು ಕಾಣುವವರು ಅಪ್ಪ ಅಮ್ಮ. ತಮ್ಮ ಮಕ್ಕಳು ಉನ್ನತ ಸ್ಥಾನಕ್ಕೇರುತ್ತಿದ್ದಂತೆಯೇ ಹೆತ್ತವರು ತಮ್ಮೆಲ್ಲಾ ಕಷ್ಟವನ್ನು ಮರೆಯುತ್ತಾರೆ. ಖುಷಿಯಿಂದ ಮಕ್ಕಳ ಅಭಿವೃದ್ಧಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಅದಕ್ಕೇ ಹೆತ್ತವರಿಗೆ ದೇವರ ಸ್ಥಾನ ಇರುವುದು. ಇದು ಕೂಡಾ ಅಂತಹದ್ದೇ ಒಂದು ಭಾವನಾತ್ಮಕ ದೃಶ್ಯ. ಇಲ್ಲೊಬ್ಬರು ತಾಯಿ ತನ್ನ ಪುತ್ರನಿಗೆ ಸೆಲ್ಯೂಟ್ ಮಾಡಿ ಖುಷಿಪಟ್ಟಿದ್ದಾರೆ. ಈ ಭಾವನಾತ್ಮಕ ಕ್ಷಣವನ್ನು ಕಂಡಾಗಲೇ ಹೃದಯ ತುಂಬಿ ಬರುತ್ತದೆ.
ಇತ್ತೀಚೆಗೆ ಹಿರಿಯ ಅಧಿಕಾರಿಯಾಗಿದ್ದ ಪುತ್ರಿಗೆ ತಂದೆ ಸೆಲ್ಯೂಟ್ ಮಾಡಿದ್ದ ಫೋಟೋವೊಂದು ವೈರಲ್ ಆಗಿತ್ತು. ಈ ಕ್ಷಣಕ್ಕೆ ಎಲ್ಲರೂ ಮನಸೋತಿದ್ದರು. ಇದೀಗ ಇಂತಹದ್ದೇ ಇನ್ನೊಂದು ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಪುತ್ರನಿಗೆ ಅಮ್ಮ ಹೆಮ್ಮೆಯಿಂದ ಸೆಲ್ಯೂಟ್ ಮಾಡುವ ಅದ್ಭುತ ದೃಶ್ಯ.
ಗುಜರಾತ್‌ನಲ್ಲಿ ಸೆರೆಯಾದ ದೃಶ್ಯ ಇದು. ಎಎಸ್‌ಐ ಆಗಿರುವ ತಾಯಿಯೊಬ್ಬರು ಡಿವೈಎಸ್‌ಪಿ ಹುದ್ದೆಯಲ್ಲಿರುವ ತನ್ನ ಪುತ್ರನಿಗೆ ಸೆಲ್ಯೂಟ್ ಮಾಡುವ ಫೋಟೋ ಇದು. ಅಮ್ಮನ ವಂದನೆಗೆ ಪ್ರತಿಯಾಗಿ ಪುತ್ರ ಕೂಡಾ ಸೆಲ್ಯೂಟ್ ಮಾಡುವ ಈ ಕ್ಷಣವನ್ನು ನೋಡುವಾಗಲೇ ಹೃದಯ ತುಂಬಿ ಬರುತ್ತದೆ. ಈ ತಾಯಿ ಮತ್ತು ಮಗ ಗುಜರಾತ್ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸೆರೆಯಾದ ದೃಶ್ಯ ಇದು. ವಿಶಾಲ್ ರಬಾರಿ ಅವರು ಅರಾವಳಿಯಲ್ಲಿ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶಾಲ್ ಅವರ ತಾಯಿ ಮಧುಬೆನ್ ರಬಾರಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೊನ್ನೆ ಆಗಸ್ಟ್ 15ರಂದು ಜುನಾಗಡ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸಲಾಗಿತ್ತು. ಇದರಲ್ಲಿ ಡಿವೈಎಸ್‌ಪಿ ವಿಶಾಲ್ ರಬಾರಿ ಪರೇಡ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಮೆರವಣಿಗೆಯಲ್ಲಿ ಇವರ ತಾಯಿ ಮಧುಬೆನ್ ಅವರು ಕೂಡ ಕರ್ತವ್ಯದಲ್ಲಿದ್ದರು. ಈ ವೇಳೆ ಇಬ್ಬರು ಮುಖಾಮುಖಿಯಾಗಿದ್ದರು. ಜತೆಗೆ, ತನಗಿಂತ ಉನ್ನತ ಸ್ಥಾನದಲ್ಲಿರುವ ಪುತ್ರನಿಗೆ ತಾಯಿ ಸೆಲ್ಯೂಟ್ ಮಾಡಿ ಗೌರವಿಸಿದರು. ಪ್ರತಿಯಾಗಿ ಪುತ್ರ ಕೂಡಾ ತಾಯಿಗೆ ಸೆಲ್ಯೂಟ್ ಮಾಡಿದ್ದರು. ಈ ಅಪೂರ್ವ ಕ್ಷಣಕ್ಕೆ ಅಲ್ಲಿದ್ದವರು ಸಾಕ್ಷಿಯಾಗಿದ್ದರು. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಎಲ್ಲರೂ ಈ ಅಪೂರ್ವ ಕ್ಷಣವನ್ನು ಕಂಡು ಖುಷಿಪಟ್ಟಿದ್ದಾರೆ. ಸಹಜವಾಗಿಯೇ ಈ ಫೋಟೋ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಾಯಿ ಮತ್ತು ಮಗನ ಈ ಹೆಮ್ಮೆಯ ಕ್ಷಣ ಎಲ್ಲರ ಮನಸ್ಸಿಗೂ ಆನಂದ ನೀಡಿದೆ.
Heartwarming Picture of a ASI Mother Salutes DYSP Son is going viral on Social Media.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 02:45 pm
Mangalore Correspondent
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm