ಬ್ರೇಕಿಂಗ್ ನ್ಯೂಸ್
21-08-21 04:07 pm Headline Karnataka News Network ದೇಶ - ವಿದೇಶ
ಕಾಬೂಲ್, ಆಗಸ್ಟ್ 21: ಅಫ್ಘಾನಿಸ್ತಾನದ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ರಾಜಧಾನಿ ಕಾಬೂಲ್ ನಲ್ಲಿರುವ ಏರ್ಪೋರ್ಟ್ ಬಳಿಯಿಂದ 150ರಷ್ಟು ಭಾರತೀಯರನ್ನು ತಾಲಿಬಾನಿ ಪಡೆಗಳು ಅಪಹರಿಸಿವೆ ಎನ್ನುವ ಮಾಹಿತಿ ಹೊರಬಿದ್ದಿದೆ. ಆದರೆ, ಈ ವರದಿಯನ್ನು ಭಾರತ ಸರಕಾರ ನಿರಾಕರಿಸಿದ್ದು, ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ. ಅಲ್ಲದೆ, ತಾಲಿಬಾನ್ ವಕ್ತಾರರು ಕೂಡ ಇದೇ ಮಾತನ್ನು ಹೇಳಿದ್ದು, ಯಾವುದೇ ಭಾರತೀಯರನ್ನು ನಾವು ಅಪಹರಿಸಿಲ್ಲ ಎಂದಿದ್ದಾರೆ.
ಅಫ್ಘಾನಿಸ್ತಾನದ ಪತ್ರಕರ್ತರು ಈ ಕುರಿತು ಸುದ್ದಿ ಹರಿಯಬಿಟ್ಟಿದ್ದಾರೆ. 100ರಿಂದ 150ರಷ್ಟು ಮಂದಿ ಭಾರತೀಯರನ್ನು ಹಮೀದ್ ಕರ್ಜಾಯಿ ಏರ್ಪೋರ್ಟ್ ಬಳಿಯಿಂದ ತಾಲಿಬಾನಿಗಳು ಕಿಡ್ನಾಪ್ ಮಾಡಿದ್ದಾಗಿ ತಿಳಿಸಿದ್ದಾರೆ. ಈ ಸುದ್ದಿ ಬಿತ್ತರವಾಗುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿಬಂದಿದೆ. ಆನಂತರ ಸ್ಥಳೀಯ ಕೆಲವು ಮಾಧ್ಯಮಗಳು, ಹಾಗೇನೂ ನಡೆದಿಲ್ಲ. ಅವರನ್ನು ಸುರಕ್ಷಿತವಾಗಿ ಏರ್ಪೋರ್ಟ್ ಆವರಣದಲ್ಲಿ ಬಿಡಲಾಗಿದೆ. ತಾಲಿಬಾನ್ ಪಡೆಗಳು ವಿಚಾರಣೆಗಾಗಿ ಹಲವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ ಎಂದು ಹೇಳಿವೆ.
ಆದರೆ, ಈ ವಿಚಾರದಲ್ಲಿ ಅಮೆರಿಕದ ನ್ಯಾಟೋ ಪಡೆಗಳಾಗಲೀ, ಭಾರತ ಸರಕಾರದಿಂದಾಗಲೀ ಅಧಿಕೃತ ಹೇಳಿಕೆ ಬಂದಿಲ್ಲ. ಭಾರತ ಸರಕಾರ ಒಟ್ಟು ವಿಚಾರದ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಅಫ್ಘಾನಿಸ್ತಾನದ ಪ್ರಜೆಗಳು, ಭಾರತೀಯರು ಸೇರಿ 150ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಅಫ್ಘನ್ ಸಿಖ್ಖರು ಕೂಡ ಇದ್ದಾರೆ. ಇದೇ ವೇಳೆ, ಭಾರತ ಮೂಲದ ಒಬ್ಬಾತ ತನ್ನ ಪತ್ನಿಯ ಜೊತೆಗೆ ಅವರ ಕೈಯಿಂದ ತಪ್ಪಿಸಿಕೊಂಡು ಬಂದಿದ್ದು, ಈ ಬಗ್ಗೆ ಹೊರಗಿನವರಿಗೆ ತಿಳಿಸಿದ್ದಾನೆ ಎನ್ನಲಾಗುತ್ತಿದೆ.
ಇವರೆಲ್ಲ ಇಂದು ಮಧ್ಯಾಹ್ನ ಏರ್ಪೋರ್ಟ್ ಒಳಹೋಗಲು ಯತ್ನಿಸಿದ್ದರು. ಅಲ್ಲಿ ಸೂಕ್ತ ಸಂವಹನ ಸಾಧ್ಯವಾಗದೆ, ಒಳಗೆ ಬಿಟ್ಟಿರಲಿಲ್ಲ. ಇದೇ ವೇಳೆ, ಒಂದಷ್ಟು ಶಸ್ತ್ರ ರಹಿತ ತಾಲಿಬಾನ್ ಸದಸ್ಯರು ಅಲ್ಲಿಗೆ ಬಂದಿದ್ದು ಅಲ್ಲಿದ್ದವರಿಗೆ ಥಳಿಸಿ ಕಾಬೂಲಿನ ತರಾಖಿಲ್ ಎಂಬಲ್ಲಿಗೆ ಕರೆದೊಯ್ದಿದ್ದಾರೆ. ಇದೇ ವೇಳೆ, ಇಬ್ಬರು ಗುಂಪಿನಿಂದ ಹೊರಬಂದಿದ್ದು, ಅಲ್ಲಿಂದ ಪಾರಾಗಿದ್ದಾರೆ. ಉಳಿದವರ ಬಗ್ಗೆ ಹೆಚ್ಚು ಗೊತ್ತಿಲ್ಲ. ಇನ್ನೊಂದು ಗೇಟ್ ಮೂಲಕ ಹೊರಕ್ಕೆ ಒಯ್ದಿದ್ದಾರೆ ಎಂದು ತಿಳಿಸಿದ್ದಾನೆ.
All Indians citizens in Kabul awaiting evacuation are safe. They were offered lunch and have now left for Kabul airport: Government sources
— ANI (@ANI) August 21, 2021
Taliban have denied reports that they have captured 150 people, most of them Indian nationals, from near Hamid Karzai International Airport in Kabul. All Indians are safe, Indian government sources said.
26-11-24 06:11 pm
HK News Desk
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
26-11-24 05:37 pm
Mangaluru Correspondent
Mangalore Astra Group, lucky draw: ಕಾರು, ಫ್ಲಾ...
25-11-24 11:14 pm
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm