ಬ್ರೇಕಿಂಗ್ ನ್ಯೂಸ್
25-08-21 10:47 pm Headline Karnataka News Network ದೇಶ - ವಿದೇಶ
ಬರ್ಲಿನ್, ಆಗಸ್ಟ್ 25: ಅಫ್ಘಾನಿಸ್ತಾನದಲ್ಲಿ ಸಚಿವರಾಗಿದ್ದವರು ಈಗ ಜರ್ಮನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಫೋಟೊಗಳು ವೈರಲ್ ಆಗಿದ್ದು ಸಚಿವರಾಗಿದ್ದ ವ್ಯಕ್ತಿ ಡೆಲಿವರಿ ಬಾಯ್ ಆಗಿದ್ದಾರೆಯೇ ಎಂದು ಹುಬ್ಬೇರಿಸುವಂತಾಗಿದೆ.
ಅಫ್ಘಾನಿಸ್ತಾನದ ಮಾಹಿತಿ ಹಾಗೂ ಐಟಿ ಸಚಿವರಾಗಿದ್ದ ಸೈಯದ್ ಅಹಮ್ಮದ್ ಶಾ ಸಾದತ್ ಈಗ ಜರ್ಮನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. 2018 ರಲ್ಲಿ ಸೈಯದ್ ಅಹಮ್ಮದ್ ಶಾ ಸಾದತ್, ಅಶ್ರಫ್ ಘನಿ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಇದ್ದರು. ಎರಡು ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವರಾಗಿದ್ದ ಸೈಯದ್, 2020 ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ 2020 ರ ಡಿಸೆಂಬರ್‌ನಲ್ಲಿ ಜರ್ಮನಿಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಜರ್ಮನಿಯ ಲೀಪ್‌ಜಿಂಗ್‌ನಲ್ಲಿ ಆಹಾರವನ್ನು ಪೂರೈಸುವ ಸಂಸ್ಥೆಯೊಂದರಲ್ಲಿ ಡೆಲಿವರಿ ಬಾಯ್ ಆಗಿದ್ದಾರೆ ಎನ್ನಲಾಗುತ್ತಿದೆ.
ಜರ್ಮನಿಯಲ್ಲಿ ಸೈಯದ್ ಅಹಮ್ಮದ್ ತನ್ನ ಗ್ರಾಹಕರಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಸಂದರ್ಭ ಸ್ಥಳೀಯ ಮಾಧ್ಯಮದ ವರದಿಗಾರರು ಅಪ್ಘಾನ್ ಮಾಜಿ ಸಚಿವರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ.
ಪ್ರಸ್ತುತ ಸೈಯದ್ ಅಹಮ್ಮದ್ ಶಾ ಫೋಟೊಗಳು ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವೊಂದು ಪೋಸ್ಟ್‌ಗಳನ್ನು ಅಲ್ ಜಜೀರಾ ಅರೇಬಿಯಾ ಪೋಸ್ಟ್ ಮಾಡಿದೆ. ಕೆಲವು ಸ್ಥಳೀಯ ಮಾಧ್ಯಮಗಳು ಸೈಯದ್ ಅಹಮ್ಮದ್ ಶಾ ಸಾದತ್ ಜರ್ಮನಿಯ ಲೀಪ್‌ಜಿಂಗ್‌ನಲ್ಲಿ ಬೈಸಿಕಲ್‌ನಲ್ಲಿ ಆಹಾರವನ್ನು ಡೆಲಿವರಿ ಮಾಡುತ್ತಿದ್ದಾರೆ ಎಂದು ಫೋಟೋ ಜೊತೆಗೆ ವರದಿ ಮಾಡಿದೆ.
Afghanistan's former Communications and IT Minister Syed Ahmad Shah Saadat was recently spotted delivering pizzas in Germany's Leipzig. It was only a year ago that he held his ministry in Afghanistan and had reportedly stepped down after differences with the country's then President, Ashraf Ghani. Following that, he left Afghanistan and settled in Leipzig, Germany. He ran out of money soon after moving, and is since then delivering pizzas. He was spotted in an orange suit on a bicycle in the city.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm