ಬ್ರೇಕಿಂಗ್ ನ್ಯೂಸ್
05-09-21 05:00 pm Headline Karnataka News Network ದೇಶ - ವಿದೇಶ
ಕೊಚ್ಚಿ, ಸೆ.5 : ಅತ್ಯಾಚಾರಕ್ಕೀಡಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತ ಯುವತಿಯೊಬ್ಬಳು ಆಸ್ಪತ್ರೆಗೆ ತೆರಳಿದ್ದ ವೇಳೆ ಹೊಟ್ಟೆ ನೋವೆಂದು ಟಾಯ್ಲೆಟ್ ಗೆ ಹೋಗಿ ಪ್ರೌಢಾವಸ್ಥೆಗೆ ಬಾರದ ಶಿಶುವನ್ನು ಹೆತ್ತು ಟಾಯ್ಲೆಟ್ ಗುಂಡಿಯಲ್ಲೇ ಬಿಟ್ಟು ಬಂದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
20 ವರ್ಷದ ಯುವಕನಿಂದ ಲೈಂಗಿಕ ಕಿರುಕುಳಕ್ಕೀಡಾಗಿದ್ದ ಅಪ್ರಾಪ್ತ ಯುವತಿ ಕಳೆದ ಬುಧವಾರ ತಾಯಿ ಜೊತೆ ಕೊಚ್ಚಿಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿದ್ದಳು. ಆಸ್ಪತ್ರೆಯಲ್ಲಿ ಟೆಸ್ಟಿಂಗ್ ತೆರಳಿದ್ದಾಗಲೇ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಾಯಿಯನ್ನು ಬಿಟ್ಟು ಹುಡುಗಿ ಟಾಯ್ಲೆಟಿಗೆ ತೆರಳಿದ್ದಳು. ಅಲ್ಲಿದ್ದಾಗಲೇ ಭ್ರೂಣಾವಸ್ಥೆಯಲ್ಲಿದ್ದ ಶಿಶು ತಾಯಿ ಹೊಟ್ಟೆಯಿಂದ ಹೊರಬಂದಿದ್ದು, ಯುವತಿ ಅದನ್ನು ಫ್ಲಷ್ ಮಾಡಿ ಟಾಯ್ಲೆಟ್ ಗುಂಡಿಗೆ ಹೋಗುವಂತೆ ಮಾಡಿದ್ದಾಳೆ. ಆದರೆ, ಅದು ಹೋಗದೇ ಅಲ್ಲಿಯೇ ಬಾಕಿಯಾಗಿತ್ತು. ಹುಡುಗಿ ಹಾಗೆಯೇ ಮರಳಿದ್ದು, ಆಸ್ಪತ್ರೆ ಸ್ಕ್ಯಾನಿಂಗ್ ಸೆಂಟರಿಗೆ ತೆರಳಿದ್ದಳು.
ಆನಂತರ ಸ್ವಲ್ಪ ಹೊತ್ತಲ್ಲಿ ಬೇರೆ ಪೇಶಂಟ್ ಒಬ್ಬರು ಟಾಯ್ಲೆಟ್ ತೆರಳಿದ್ದಾಗ, ಅಲ್ಲಿ ನವಜಾತ ಶಿಶುವಿನ ರೀತಿಯ ಭ್ರೂಣ ಕಂಡುಬಂದಿದ್ದು, ಆಸ್ಪತ್ರೆ ಸಿಬಂದಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಬಂದಿದ್ದು, ಸಿಸಿಟಿವಿ ಆಧರಿಸಿ ಚೆಕ್ ಮಾಡಿದಾಗ ಅಪ್ರಾಪ್ತ ಯುವತಿ ಟಾಯ್ಲೆಟ್ ಹೋಗಿದ್ದನ್ನು ತಿಳಿದು ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಡೆಸಿದಾಗ ತನಗೆ ಹೆರಿಗೆಯಾಗಿದ್ದನ್ನು ಪೊಲೀಸರಲ್ಲಿ ಒಪ್ಪಿಕೊಂಡಿದ್ದಾಳೆ.
ಆಬಳಿಕ 20 ವರ್ಷದ ಯುವಕ ತನ್ನ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯ ತಾಯಿ ನೀಡಿದ ದೂರಿನಂತೆ, ವಯನಾಡ್ ಜಿಲ್ಲೆಯ ಮೂಲದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
A minor rape survivor -- who was pregnant -- delivered a premature baby inside the washroom of a private hospital in Kerala’s Kochi, police said, adding that she, however, flushed down the newborn. As per reports, the minor girl was allegedly raped by a 20-year-old youth. A minor rape survivor -- who was pregnant -- delivered a premature baby inside the washroom of a private hospital in Kerala’s Kochi, police said, adding that she, however, flushed down the newborn.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm