ಬ್ರೇಕಿಂಗ್ ನ್ಯೂಸ್
08-09-21 02:04 pm Headline Karnataka News Network ದೇಶ - ವಿದೇಶ
ಕಾಬೂಲ್, ಸೆ.8: ಅಫ್ಘಾನಿಸ್ತಾನದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ದೇಶಾದ್ಯಂತ ಷರೀಯತ್ ಕಾನೂನನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ. 20 ವರ್ಷಗಳ ಹಿಂದೆ ತಾಲಿಬಾನ್ ಸರಕಾರದಲ್ಲಿ ಅಳವಡಿಸಿದ್ದ ಷರೀಯತ್ ಕಾನೂನನ್ನೇ ದೇಶದ ಎಲ್ಲ ವಿಭಾಗದಲ್ಲಿಯೂ ಜಾರಿಗೊಳಿಸುವುದಾಗಿ ಹೊಸ ಸರಕಾರ ಹೇಳಿಕೊಂಡಿದೆ.
ಯಾರು ಕೂಡ ತಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡುವ ಅಗತ್ಯ ಇಲ್ಲ. ನಮ್ಮ ಮೊದಲ ಆದ್ಯತೆ ಈಗಿರುವ ಎಲ್ಲ ರೀತಿಯ ಸಮಸ್ಯೆಗಳನ್ನು ಸರಿಪಡಿಸುವುದೇ ಆಗಿರುತ್ತದೆ. ಆದರೆ, ಇವೆಲ್ಲವನ್ನೂ ಷರೀಯತ್ ಕಾನೂನು ಪ್ರಕಾರವೇ ನಾವು ವ್ಯವಹರಿಸಲಿದ್ದೇವೆ. ಆದರೆ, 20 ವರ್ಷಗಳ ಸುದೀರ್ಘ ಹೋರಾಟದಲ್ಲಿ ವಿದೇಶಿಗರನ್ನು ಇಲ್ಲಿಂದ ಹೊರ ಹಾಕುವುದು ಮುಖ್ಯ ಗುರಿಯಾಗಿತ್ತು. ದೇಶದಲ್ಲಿ ಸ್ಥಿರ ಸರಕಾರ ರಚನೆ, ಸೆಂಟ್ರಲ್ ಇಸ್ಲಾಮಿಕ್ ಸಿಸ್ಟಮ್ ಜಾರಿಗೆ ತರಲಿದ್ದೇವೆ. ಇದರ ಪ್ರಕಾರ, ದೇಶದ ಎಲ್ಲ ವಿಭಾಗದ ಆಡಳಿತ ವ್ಯವಸ್ಥೆ ಮತ್ತು ಅದರ ನಿಯಮಗಳು ಷರೀಯತ್ ಕಾನೂನು ಪ್ರಕಾರವೇ ಇರಲಿದೆ ಎಂದು ತಾಲಿಬಾನ್ ಸಂಘಟನೆಯ ಸುಪ್ರೀಂ ಲೀಡರ್ ಎಂದು ಹೇಳಲಾಗುತ್ತಿರುವ ಮೌಲವಿ ಹೈಬತುಲ್ಲಾ ಅಖುಂಡಝ ಹೊಸ ಸರಕಾರದ ನೀತಿ ವ್ಯವಸ್ಥೆಯನ್ನು ಪ್ರಕಟಿಸಿದ್ದಾನೆ.


ತಾಲಿಬಾನ್ ಸಂಘಟನೆಯ ನೀತಿ ನಿರ್ಧಾರಕ ಮಂಡಳಿ ರೆಹ್ ಬಾರಿ ಶೂರ ಇದರ ಪ್ರಮುಖನಾಗಿರುವ ಮುಲ್ಲಾ ಮಹಮ್ಮದ್ ಹಸನ್ ಅಖುಂಡ್ ಪ್ರಧಾನಿ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ಈವರೆಗೂ ಅಧ್ಯಕ್ಷ ಪದವಿಗೇರಲಿದ್ದಾನೆ ಎಂದು ಹೇಳಲಾಗಿದ್ದ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನದಲ್ಲಿ ಇರಲಿದ್ದಾನೆ ಎಂದು ತಾಲಿಬಾನ್ ವಕ್ತಾರ ಝಬೀವುಲ್ಲಾ ಮುಜಾಹಿದ್ ಹೇಳಿಕೆ ನೀಡಿದ್ದಾನೆ. 33 ಮಂದಿ ಸಚಿವರನ್ನು ಒಳಗೊಂಡ ಹೊಸ ಸರಕಾರವನ್ನು ತಾಲಿಬಾನ್ ಅಸ್ತಿತ್ವಕ್ಕೆ ತಂದಿದೆ. ಆದರೆ, ಜಾಗತಿಕ ಉಗ್ರರೆಂದು ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಮತ್ತು ಹಕ್ಕಾನಿ ನೆಟ್ವರ್ಕ್ ನಲ್ಲಿ ಸಕ್ರಿಯರಾಗಿರುವ ಉಗ್ರರಿಗೆ ಸರಕಾರದಲ್ಲಿ ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ.
The Taliban have also issued a policy statement to assure the Afghans that “no one should be worried about the future" and also added that they will follow Sharia law for all matters.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
25-07-26 07:34 pm
HK News Staffer
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
ಮತ್ತೆ ಪ್ರತಿಭಟನೆಗೆ ಬಂದ್ರೆ ಜೇಬಿನಲ್ಲಿ 50 ಗ್ರಾಂ ಡ...
23-07-26 06:26 pm
25-07-26 07:32 pm
HK News Staffer
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
ನೀಟ್ ಪರೀಕ್ಷೆ ; ಮಂಗಳೂರಿನಲ್ಲೂ ಮೊಳಗಿದ ವಿದ್ಯಾರ್ಥಿ...
24-07-26 10:37 pm
Surathkal Brdige, Thokottu, Mangalore: ಸುರತ್ಕ...
23-07-26 10:27 pm
25-07-26 07:36 pm
HK News Staffer
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm
Astra Group Fraud, Lanchu Lal, Mangalore: ‘ಅಸ...
24-07-26 05:30 pm