ಬ್ರೇಕಿಂಗ್ ನ್ಯೂಸ್
09-09-21 05:11 pm Headline Karnataka News Network ದೇಶ - ವಿದೇಶ
ತಿರುವನಂತಪುರಂ, ಸೆ.9: ವ್ಯವಸ್ಥಿತವಾಗಿ ನಡೆಯುವ ಲವ್ ಜಿಹಾದ್ ಮತ್ತು ನಾರ್ಕೋಟಿಕ್ ಜಿಹಾದ್ ತಂತ್ರಕ್ಕೆ ಕೇರಳದಲ್ಲಿ ಕೆಥೋಲಿಕ್ ಯುವತಿಯರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಕೆಥೋಲಿಕ್ ಯುವ ಜನಾಂಗ ಎಚ್ಚತ್ತುಕೊಳ್ಳಬೇಕಿದೆ ಎಂದು ಸಿರೋ ಮಲಬಾರ್ ಚರ್ಚ್ ಪಾಲ ಡಯೋಸಿಸ್ ಬಿಷಪ್ ಮಾರ್ ಜೋಸೆಫ್ ಕಲ್ಲರಂಗಾಟ್ ಹೇಳಿದ್ದಾರೆ.
ಡಯಾಸಿಸ್ ಒಳಪಟ್ಟ ಕೊಟ್ಟಾಯಂ ಜಿಲ್ಲೆಯ ಕುರುವಿಳಂಗಾಡು ಎಂಬಲ್ಲಿ ಚರ್ಚ್ ಸೆಲೆಬ್ರೇಶನ್ ಕಾರ್ಯಕ್ರಮದಲ್ಲಿ ಲವ್ ಜಿಹಾದ್ ಷಡ್ಯಂತ್ರದ ಬಗ್ಗೆ ಬಿಷಪ್ ಮೊದಲ ಬಾರಿಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಜನರನ್ನು ತಮ್ಮೆಡೆಗೆ ಸೆಳೆಯಲು ಎಲ್ಲ ಕಡೆ ಶಸ್ತ್ರಗಳನ್ನು ಬಳಕೆ ಮಾಡುವುದಿಲ್ಲ. ನಾರ್ಕೋಟಿಕ್ ಡ್ರಗ್ಸ್ ಬಳಸಿ, ಯುವಜನರನ್ನು ತಮ್ಮ ಷಡ್ಯಂತ್ರಕ್ಕೆ ತಳ್ಳುತ್ತಿದ್ದಾರೆ. ಈ ಷಡ್ಯಂತ್ರಕ್ಕೆ ಕೇರಳದಲ್ಲಿ ಹೆಚ್ಚಾಗಿ ಕೆಥೋಲಿಕ್ ಯುವತಿಯರು ಬಲಿಯಾಗುತ್ತಿದ್ದಾರೆ. ಈ ರೀತಿ ಯುವತಿಯರನ್ನು ಷಡ್ಯಂತ್ರಕ್ಕೆ ತಳ್ಳುವ ಕಾರ್ಯದಲ್ಲಿ ಸಂಘಟನೆಯೊಂದು ಕೇರಳದಲ್ಲಿ ವ್ಯವಸ್ಥಿತವಾಗಿ ನಿರತವಾಗಿದೆ. ಈ ಬಗ್ಗೆ ಅರ್ಥ ಮಾಡಿಕೊಳ್ಳಲು ಹೆಚ್ಚೇನು ಅಧ್ಯಯನ ಮಾಡಬೇಕಿಲ್ಲ. ಐಸಿಸ್ ಸಂಘಟನೆಗಳಲ್ಲಿ ಇತರ ಧರ್ಮೀಯ ಯುವತಿಯರು ಹೇಗೆ ಬಂದಿದ್ದಾರೆ ಅನ್ನುವ ಬಗ್ಗೆ ಚಿಂತಿಸಿದರೆ ಇವರ ತಂತ್ರಗಾರಿಕೆ ನಮಗೆ ಅರ್ಥವಾಗುತ್ತದೆ.
ಕೆಥೋಲಿಕ್ ಯುವಜನರು ಡ್ರಗ್ಸ್ ಬಳಸುವುದರಲ್ಲಿ ಹೆಚ್ಚಿದ್ದಾರೆ. ಅದೇ ತಂತ್ರವನ್ನು ಬಳಸಿಕೊಂಡು ಯುವತಿಯರನ್ನು ಲವ್ ಜಿಹಾದ್ ಕೂಪಕ್ಕೆ ತಳ್ಳುತ್ತಿದ್ದಾರೆ. ಯುವತಿಯರನ್ನು ಪ್ರೀತಿಸಿ, ಲವ್ ಜಿಹಾದ್ ಹೆಸರಲ್ಲಿ ಮತಾಂತರ ಮಾಡಲಾಗುತ್ತಿದೆ. ಈ ರೀತಿ ಮಾಡುತ್ತಿರುವುದರಲ್ಲಿ ಯಾರು ಕೂಡ ಮುಸ್ಲಿಮೇತರ ವ್ಯಕ್ತಿಗಳು ಇಲ್ಲ. ಇದಕ್ಕಾಗಿ ಕಾರ್ಯಾಚರಿಸುವ ಪ್ರತ್ಯೇಕ ಗ್ರೂಪ್ ಸಕ್ರಿಯವಾಗಿದ್ದು ಈ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಿದೆ ಎಂದು ಜೋಸೆಫ್ ಕಲ್ಲರಂಗಾಟ್ ಹೇಳಿದ್ದಾರೆ.
ಕೇರಳದಲ್ಲಿ ಲವ್ ಜಿಹಾದ್ ಆಳವಾಗಿ ಬೇರೂರಿದೆ ಎನ್ನುವುದನ್ನು ಯಾವುದೇ ರೀತಿಯಲ್ಲೂ ನಿರಾಕರಿಸುವಂತಿಲ್ಲ. ಸ್ಥಾಪಿತ ಹಿತಾಸಕ್ತಿಗಳು ನಿಗದಿತ ಅಜೆಂಡಾ ಇಟ್ಟುಕೊಂಡು ಲವ್ ಜಿಹಾದ್ ಕೃತ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಿವೆ. ಕಣ್ಣು ತೆರೆದು ನೋಡಿದರೆ ಈ ರೀತಿಯ ಪ್ರಕರಣಗಳು ನಮ್ಮ ಕಣ್ಣಿಗೆ ರಾಚುತ್ತವೆ. ಮುಸ್ಲಿಮ್ ಮಾನಸಿಕತೆಯನ್ನು ಬಲವಂತದಿಂದ ತುಂಬುವ ಕೆಲಸ ಆಗುತ್ತಿದೆ. ಈ ಬಗ್ಗೆ ಕೆಥೋಲಿಕ್ ಯುವ ಜನಾಂಗ ಎಚ್ಚರದಿಂದ ಗಮನಿಸಬೇಕಿದೆ ಎಂದು ಜೋಸೆಫ್ ಹೇಳಿದ್ದಾರೆ.
ಕಳೆದ ಬಾರಿ 2016ರಲ್ಲಿ ಕಾಸರಗೋಡಿನಲ್ಲಿ 21 ಮಂದಿ ನಾಪತ್ತೆಯಾಗಿದ್ದು, ಆನಂತರ ವಿವಿಧ ತನಿಖಾ ತಂಡಗಳ ತಪಾಸಣೆಯ ಬಳಿಕ ಅವರೆಲ್ಲ ಐಸಿಸ್ ಸಂಘಟನೆ ಸೇರಿದ್ದು ಸ್ಪಷ್ಟವಾಗಿತ್ತು. ಅದರಲ್ಲಿ 10 ಪುರುಷರಾಗಿದ್ದರೆ, 9 ಯುವತಿಯರು ಇದ್ದರು. ಯುವತಿಯರ ಪೈಕಿ ಹೆಚ್ಚಿನವರು ಹಿಂದು ಮತ್ತು ಕ್ರಿಸ್ತಿಯನ್ನಿಂದ ಮತಾಂತರ ಆಗಿದ್ದವರೇ ಇದ್ದರು. ಇದೇ ಹಿನ್ನೆಲೆಯಲ್ಲಿ ಕೆಥೋಲಿಕ್ ಚರ್ಚ್ ಡಯಾಸಿಸ್ ಬಿಷಪ್ಪರು ಬಹಿರಂಗವಾಗಿ ಮೊದಲ ಬಾರಿಗೆ ಆತಂಕ ವ್ಯಕ್ತಪಡಿಸಿದ್ದಾರೆ.
Bishop Mar Joseph Kallarangatt of the Pala diocese of the Syro-Malabar Church has stated that young Christian boys and girls of Kerala are being targeted for not just ‘Love Jihad’ but for ‘Narcotics Jihad’ too. As per a report in Kerala Kaumudi, the Bishop has been vocal about the targeting of young Christian by Islamist groups for conversion and exploitation.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
26-11-24 09:43 pm
HK News Desk
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
26-11-24 11:23 pm
Udupi Correspondent
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
Mangalore, Police Anupam Agarwal IPS, DYFI; ಸ...
26-11-24 05:37 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm