ಬ್ರೇಕಿಂಗ್ ನ್ಯೂಸ್
10-09-21 04:54 pm Headline Karnataka News Network ದೇಶ - ವಿದೇಶ
ದೆಹಲಿ, ಸೆ.10: ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದಿಂದ ನಾಯಕರು ತೊರೆದು ಬೇರೆ ಪಕ್ಷಗಳಿಗೆ ಸೇರುತ್ತಿರುವುದು ಹೆಚ್ಚುತ್ತಿದೆ. ಕಳೆದ ಏಳು ವರ್ಷಗಳಲ್ಲಿ ಕಾಂಗ್ರೆಸ್ ತೊರೆಯುವವರ ಸಂಖ್ಯೆ ಹೆಚ್ಚಿದ್ದು, ಗಣನೀಯ ಪ್ರಮಾಣದಲ್ಲಿ ಅಭ್ಯರ್ಥಿಗಳು, ಸಂಸದರು, ಶಾಸಕರು ಪಕ್ಷ ಬಿಟ್ಟು ಹೋಗಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.
ಗುರುವಾರ ಬಿಡುಗಡೆಯಾದ ವರದಿಯ ಪ್ರಕಾರ 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸಿನ ಅತಿ ಹೆಚ್ಚು ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

2014 - 21ರ ನಡುವೆ ನಡೆದ ವಿವಿಧ ಚುನಾವಣೆಗಳ ಸಂದರ್ಭದಲ್ಲಿ ಒಟ್ಟು 222 ಅಭ್ಯರ್ಥಿಗಳು ಕಾಂಗ್ರೆಸ್ ತೊರೆದು ಇತರ ಪಕ್ಷಗಳನ್ನು ಸೇರಿದ್ದಾರೆ. ಇದೇ ಅವಧಿಯಲ್ಲಿ 177 ಸಂಸದರು ಮತ್ತು ಹಲವು ಶಾಸಕರು ಪಕ್ಷವನ್ನು ತೊರೆದಿದ್ದಾರೆ ಎಂದು ರಾಷ್ಟ್ರೀಯ ಚುನಾವಣೆ ಮತ್ತು ರಾಜಕೀಯ ಅಧ್ಯಯನ ಸಂಸ್ಥೆ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ - ಎಡಿಆರ್’ ತಿಳಿಸಿದೆ.

2014ರಿಂದ ಈವರೆಗಿನ ಚುನಾವಣೆಗಳಲ್ಲಿ 111 ಅಭ್ಯರ್ಥಿಗಳು ಬಿಜೆಪಿ ತೊರೆದಿದ್ದಾರೆ. 33 ಸಂಸದರು ಮತ್ತು ಶಾಸಕರನ್ನು ಬಿಜೆಪಿ ಕಳೆದುಕೊಂಡಿದೆ. ಆದರೂ, 253 ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು 173 ಸಂಸದರು ಮತ್ತು ಶಾಸಕರು ಬಿಜೆಪಿಯನ್ನು ಸೇರಿದ್ದಾರೆ ಎಂದು ಎಡಿಆರ್ ವರದಿಯಲ್ಲಿ ಹೇಳಲಾಗಿದೆ. ಈ ಮೂಲಕ ಏಳು ವರ್ಷಗಳಲ್ಲಿ ಬಿಜೆಪಿ ಅತಿ ಹೆಚ್ಚು ನಾಯಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಸಫಲವಾಗಿದೆ.
ಕಳೆದ ಏಳು ವರ್ಷಗಳಲ್ಲಿ 399 ನಾಯಕರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರೂ, 115 ಅಭ್ಯರ್ಥಿಗಳು, 61 ಸಂಸದರು ಮತ್ತು ಶಾಸಕರು ಇತರ ಪಕ್ಷಗಳಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ಎಡಿಆರ್ ವರದಿಯು 1,133 ಅಭ್ಯರ್ಥಿಗಳು ಮತ್ತು 500 ಸಂಸದರು–ಶಾಸಕರ ಚುನಾವಣಾ ಅಫಿಡವಿಟ್‌ಗಳ ವಿಶ್ಲೇಷಣೆಯನ್ನು ಆಧರಿಸಿದೆ. 2014ರಿಂದ ಈ ವರೆಗೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ನಡೆದ ಚುನಾವಣೆಗಳನ್ನು ಆಧರಿಸಿ ಅಧ್ಯಯನ ಮಾಡಲಾಗಿದೆ.

ಕಾಂಗ್ರೆಸ್ ನಂತರ, ಉತ್ತರ ಪ್ರದೇಶದ ಮಾಯಾವತಿಯ ಬಹುಜನ ಸಮಾಜ ಪಕ್ಷವನ್ನು (ಬಿಎಸ್ಪಿ) ಗಣನೀಯ ಸಂಖ್ಯೆಯ ನಾಯಕರು ತೊರೆದಿದ್ದಾರೆ.
2014ರಿಂದ ಈ ವರೆಗೆ 153 ಅಭ್ಯರ್ಥಿಗಳು ಮತ್ತು 20 ಸಂಸದ–ಶಾಸಕರು ಇತರೆ ಪಕ್ಷ ಸೇರಲು ಬಿಎಸ್‌ಪಿ ತೊರೆದಿದ್ದಾರೆ. ಆದಾಗ್ಯೂ, ಬಿಎಸ್‌ಪಿ 65 ಅಭ್ಯರ್ಥಿಗಳು ಮತ್ತು 12 ಸಂಸದ– ಶಾಸಕರನ್ನು ತನ್ನ ತೆಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) 31 ಅಭ್ಯರ್ಥಿಗಳು, 26 ಸಂಸದ– ಶಾಸಕರು ಕಳೆದ ಏಳು ವರ್ಷಗಳಲ್ಲಿ ಬೇರೆ ಪಕ್ಷವನ್ನು ಸೇರಿದ್ದಾರೆ. ಒಟ್ಟು 23 ಅಭ್ಯರ್ಥಿಗಳು ಮತ್ತು 31 ಸಂಸದ–ಶಾಸಕರು ಈ ಅವಧಿಯಲ್ಲಿ ಪಕ್ಷ ಸೇರಿದ್ದಾರೆ.
Congress lost Highest number of Leaders to other Parties Since 2014 BJP Big Gainer Report.
07-04-26 07:26 pm
HK News Staffer
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ; ಬಳ್ಳಾರಿ,...
07-04-26 12:37 pm
ಇನ್ನೆರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ, ಹೈಕಮಾಂಡ್...
06-04-26 08:51 pm
ದಟ್ಟ ಕಾಡಿನ ಮಧ್ಯೆ ದಾರಿ ತಪ್ಪಿದ್ದ ಶರಣ್ಯ ಕಡೆಗೂ ಪತ...
05-04-26 10:45 pm
07-04-26 10:44 pm
HK News Staffer
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
Pakistan News, Fuel Crisis: ಇಂಧನ ಬಿಕ್ಕಟ್ಟು ;...
07-04-26 08:01 pm
ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನ...
07-04-26 11:45 am
ಟ್ರಂಪ್ ವಾರ್ನಿಂಗ್ ಗೆ ಇರಾನ್ ಟಕ್ಕರ್ ; ವಿದ್ಯುತ್ ಸ...
07-04-26 11:42 am
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
07-04-26 10:15 pm
HK News Staffer
Arif Murder Case, Mangalore: ಟ್ಯಾಬ್ಲೆಟ್ ಆರೀಫ್...
07-04-26 06:18 pm
ಚಿಕ್ಕಮಗಳೂರು ; ಭದ್ರಾ ನದಿಗೆ ಹಾರಿ ಶಿವಮೊಗ್ಗದ ನರ್ಸ...
07-04-26 04:04 pm
ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ-ಮಗನಿಗೆ ಚಿತ್ರಹಿಂಸೆ...
07-04-26 10:08 am
ತಮಿಳಿನ ಖ್ಯಾತ ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಹ್...
06-04-26 05:40 pm