ಬ್ರೇಕಿಂಗ್ ನ್ಯೂಸ್
11-09-21 09:37 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆ.11: ಕಳೆದ ಆರು ತಿಂಗಳಲ್ಲಿ ಬಿಜೆಜಿ ನಾಲ್ಕು ಮುಖ್ಯಮಂತ್ರಿಗಳನ್ನು ಬದಲಿಸಿ, ಮತ್ತೊಬ್ಬರನ್ನು ನೇಮಕ ಮಾಡಿದ್ದು, ರಾಷ್ಟ್ರ ಮಟ್ಟದಲ್ಲಿ ತಮ್ಮದೇ ಪಾರುಪತ್ಯ ಅನ್ನುವುದನ್ನು ತೋರಿಸಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಧಿಕಾರ ಕಳೆದುಕೊಂಡ ನಾಲ್ಕನೇ ಮುಖ್ಯಮಂತ್ರಿಯಾಗಿದ್ದಾರೆ.
ಉತ್ತರಾಖಂಡ, ಗುಜರಾತ್ ಮತ್ತು ಕರ್ನಾಟಕದಲ್ಲಿ ನಾಲ್ಕು ಪ್ರಮುಖ ನಾಯಕರನ್ನು ಬದಲಿಸಿ, ಬೇರೊಬ್ಬರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂರಿಸಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಉತ್ತರಾಖಂಡ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಬದಲಿಸಿ, ಸಂಸದರಾಗಿದ್ದ ತೀರತ್ ಸಿಂಗ್ ರಾವತ್ ಅವರನ್ನು ಸಿಎಂ ಸ್ಥಾನಕ್ಕೇರಿಸಿದ್ದರು. ಆದರೆ, ತೀರತ್ ಸಿಂಗ್ ಅಧಿಕಾರಕ್ಕೇರಿ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಅವರನ್ನೂ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಆನಂತರ, ಎರಡು ಬಾರಿಯ ಶಾಸಕ ಪುಷ್ಕರ್ ಸಿಂಗ್ ಭಾಮಿ ಅವರನ್ನು ಸಿಎಂ ಸ್ಥಾನಕ್ಕೆ ಬದಲಿಸಲಾಗಿತ್ತು.
ಉತ್ತರಾಖಂಡದ ಬಳಿಕ ಕರ್ನಾಟಕದಲ್ಲಿ ಅಜಾತಶತ್ರು ಎನಿಸಿಕೊಂಡಿದ್ದ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಸುದೀರ್ಘ ಕಾಲದಿಂದ ಬಿಜೆಪಿಯ ಅದ್ವಿತೀಯ ನಾಯಕರೆನಿಸಿದ್ದ ಯಡಿಯೂರಪ್ಪ ಅವರನ್ನು ವಯಸ್ಸಿನ ಕಾರಣ ಮತ್ತು ಮಗನ ಭ್ರಷ್ಟಾಚಾರದ ಕಾರಣ ಮುಂದಿಟ್ಟು ಬದಲಾವಣೆ ಮಾಡಿ, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ತರಲಾಗಿತ್ತು. ಇದೀಗ ಗುಜರಾತಿನಲ್ಲಿ ವಿಜಯ್ ರೂಪಾನಿ ಅವರನ್ನು ಬದಲಿಸಿದ್ದು ಹೊಸ ನಾಯಕನ ತಲಾಶೆಯಲ್ಲಿ ಬಿಜೆಪಿ ತೊಡಗಿದೆ. ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಈ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ನಾಯಕತ್ವ ಬದಲಾವಣೆಗೂ ಮುನ್ನ ಸಹಜವಾಗೇ ರಾಜಕೀಯ ಚಟುವಟಿಕೆಗಳು ನಡೆಯುತ್ತವೆ. ರಾಜ್ಯದ ಮಟ್ಟಿಗೆ ತಕ್ಕಷ್ಟು ಸದ್ದು ಕೂಡ ಮಾಡುತ್ತವೆ. ಆದರೆ, ಈ ಬಾರಿ ಗುಜರಾತ್ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಅಲ್ಲಿನ ಶಾಸಕರನ್ನೇ ಹುಬ್ಬೇರಿಸಿದೆ. ಮುಖ್ಯಮಂತ್ರಿ ಬದಲಿಸಬೇಕೆಂದು ಒಂದು ಬಣ ಬೇಡಿಕೆ ಮುಂದಿಟ್ಟಿದ್ದು ನಿಜ. ಹಾಗೆಂದು ಇಷ್ಟು ಬೇಗ ಅವರನ್ನು ಬದಲಿಸುತ್ತಾರೆ ಅಂದುಕೊಂಡಿರಲಿಲ್ಲ. ವಿಜಯ ರೂಪಾನಿ ರಾಜಿನಾಮೆ ನೀಡಿದಾಗಲೇ ಕೇಂದ್ರ ನಾಯಕರ ಸೂಚನೆ ಬಂದಿರುವುದು ಗೊತ್ತಾಗಿದ್ದು ಎಂದು ಅಲ್ಲಿನ ಹಿರಿಯ ಶಾಸಕರೊಬ್ಬರು ಹೇಳುತ್ತಾರೆ.
ಕರ್ನಾಟಕದಲ್ಲಿಯೂ ಯಡಿಯೂರಪ್ಪ ಅವರನ್ನು ಬದಲಿಸುತ್ತಾರೆ ಎನ್ನುವುದು ಒಂದು ವರ್ಷದಿಂದಲೇ ಕೇಳಿಬಂದಿತ್ತು. ಆನಂತರ ಕೊನೆಯ ನಾಲ್ಕು ತಿಂಗಳಲ್ಲಿ ಖಚಿತವಾಗಿದ್ದರೂ, ಯಡಿಯೂರಪ್ಪ ತಮ್ಮದೇ ಸಮಯ ನೋಡಿಕೊಂಡು ಮೂರ್ನಾಲ್ಕು ಬಾರಿ ಕೇಂದ್ರ ನಾಯಕರನ್ನು ಭೇಟಿಯಾಗಿದ್ದು ಕೊನೆಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಇದೇ ರೀತಿ, ಉತ್ತರಾಖಂಡದಲ್ಲಿಯೂ ಮುಖ್ಯಮಂತ್ರಿ ಬದಲಿಸುವ ಮುನ್ನ ಎರಡು ಬಾರಿ ವೀಕ್ಷಕರನ್ನು ಅಲ್ಲಿಗೆ ಕಳಿಸಲಾಗಿತ್ತು. ಅಲ್ಲಿನ ಸ್ಥಿತಿಗತಿ ಅಧ್ಯಯನ ಮಾಡಿಕೊಂಡು ಆನಂತರ ಬದಲಾವಣೆ ಮಾಡಲಾಗಿತ್ತು. ಆದರೆ, ಗುಜರಾತ್ ಬಗ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ತಮ್ಮದೇ ರಾಜ್ಯ ಆಗಿರುವುದರಿಂದ ಅಲ್ಲಿನ ಪರಿಸ್ಥಿತಿಯ ಅರಿವಿದ್ದ ಕಾರಣವೋ ಏನೋ, ಅನಿರೀಕ್ಷಿತ ಎನ್ನುವಂತೆ ಮುಖ್ಯಮಂತ್ರಿಯನ್ನೇ ಕೆಳಗಿಳಿಸಿ ಅಲ್ಲಿನ ಮಂದಿಗೇ ಅಚ್ಚರಿ ಮೂಡಿಸಿದ್ದಾರೆ.
Vijay Rupani became the fourth BJP's chief minister to be replaced in the last six months. In a surprise move, Rupani on Saturday resigned as Chief Minister of Gujarat almost 15 months before state polls, becoming fourth chief minister to be changed in six months in three states - Uttarakhand, Karnataka and Gujarat. In March, the saffron party replaced Uttarkhand then chief minister Trivendra Singh Rawat with Lok Sabha member Tirath Singh Rawat. In July, four months after being made chief minister, Tirath Singh Rawat was replaced by two time MLA Pushkar Singh Dhami. After Uttarakhand, BJP replaced B.S. Yediyurappa with B.S. Bommai.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
26-11-24 09:43 pm
HK News Desk
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
26-11-24 11:23 pm
Udupi Correspondent
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
Mangalore, Police Anupam Agarwal IPS, DYFI; ಸ...
26-11-24 05:37 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm