ಬ್ರೇಕಿಂಗ್ ನ್ಯೂಸ್
16-10-21 06:12 pm Headline Karnataka News Network ದೇಶ - ವಿದೇಶ
ತಿರುವನಂತಪುರ, ಅ.16: ಕೇರಳದ ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾರಿನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಕಾರು ಸಹಿತ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಇಡುಕ್ಕಿ, ಕೊಟ್ಟಾಯಂ ಸೇರಿದಂತೆ ಕೇರಳದ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಡುಕ್ಕಿ ಜಿಲ್ಲೆಯಲ್ಲಿ ಕಾರಿನಲ್ಲಿ ಸಾಗುತ್ತಿದ್ದಾಗಲೇ ಒಮ್ಮಿಂದೊಮ್ಮೆಲೇ ರಸ್ತೆಯಲ್ಲಿ ನೀರು ಉಕ್ಕೇರಿದ್ದು, ಪ್ರವಾಹದಲ್ಲಿ ಕಾರು ತೇಲಿ ಹೋಗಿದೆ. ಒಂದೂವರೆ ಕಿಮೀ ಉದ್ದಕ್ಕೆ ಕಾರು ತೇಲಿ ಹೋಗಿದ್ದು, ಅದರಲ್ಲಿದ್ದ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇಡುಕ್ಕಿ ಜಿಲ್ಲೆಯ ಹಲವೆಡೆ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ.
ಕೊಟ್ಟಾಯಂ ಜಿಲ್ಲೆಯ ಕೂತ್ತಿಕ್ಕಲ್ ಎಂಬಲ್ಲಿ ಭೂಕುಸಿತ ಸಂಭವಿಸಿದ್ದು, 12 ಮಂದಿ ಕಾಣೆಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗುಡ್ಡ ಕುಸಿತದಿಂದಾಗಿ ಆ ಜಾಗಕ್ಕೆ ರಕ್ಷಣಾ ತಂಡ ತೆರಳಲು ಸಾಧ್ಯವಾಗಿಲ್ಲ. ಸಿಎಂ ಪಿಣರಾಯಿ ವಿಜಯನ್ ಮುಂದಿನ 24 ಗಂಟೆಗಳ ಕಾಲ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೈ ಎಲರ್ಟ್ ಘೋಷಿಸಿದ್ದಾರೆ. ಮಧ್ಯ ಕೇರಳ ಭಾಗದ ಇಡುಕ್ಕಿ, ಕೊಟ್ಟಾಯಂ, ಪತ್ತನಂತಿಟ್ಟ, ತೃಶೂರು, ಎರ್ನಾಕುಲಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಶನಿವಾರ ಮತ್ತು ಭಾನುವಾರ ಮಧ್ಯ ಮತ್ತು ಉತ್ತರ ಕೇರಳದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ನದಿ ದಡದ ಪ್ರದೇಶಗಳ ನಿವಾಸಿಗಳು ಕಟ್ಟೆಚ್ಚರದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.
As many as five districts in Kerala are on red alert as heavy rainfall lashed the state on Saturday. An orange alert has been issued in at least seven other districts, too. Kerala chief minister Pinarayi Vijayan called an emergency meeting in the evening to take stock of the situation while the state authorities have banned night-time movement in hilly areas of the state.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am