ಆಗ್ರಾಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮತ್ತೆ ಪೊಲೀಸ್ ವಶಕ್ಕೆ

20-10-21 09:36 pm       Headline Karnataka News Network   ದೇಶ - ವಿದೇಶ

ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.

ಲಕ್ನೋ, ಅ.20: ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಲಾಕಪ್ ಡೆತ್ ಆಗಿರುವ ಯುವಕನ ಮನೆಗೆ ಭೇಟಿ ನೀಡುವುದಕ್ಕಾಗಿ ತೆರಳುತ್ತಿದ್ದ ಪ್ರಿಯಾಂಕ ಗಾಂಧಿ ಅವರನ್ನು ಲಕ್ನೋ- ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಅಡ್ಡಗಟ್ಟಿ ಲಕ್ನೋ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಾನು ಆಗ್ರಾಕ್ಕೆ ಹೋಗಬಾರದಂತೆ. ಎಲ್ಲಿಗೆ ಹೋದರೂ ಅಡ್ಡ ಹಾಕುತ್ತಿದ್ದಾರೆ. ನಾನು ಹೊಟೇಲ್, ರೆಸ್ಟೋರೆಂಟ್ ನಲ್ಲಿಯೇ ಕುಳಿತಿರಬೇಕೇ.. ನಾನು ಅವರ ಕುಟುಂಬಸ್ಥರನ್ನು ಭೇಟಿಯಾಗಬೇಕು. ಏನಾಗಿದೆ ಅನ್ನೋದನ್ನು ತಿಳ್ಕೊಬೇಕು. ಯಾರೋ ಒಬ್ಬರು ಸತ್ತಿದ್ದಾರೆ, ಸಾಯುತ್ತಿದ್ದಾರೆ ಅಂದ್ರೆ ಇಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಬರುತ್ತದೆ. ನಾನು ಅಲ್ಲಿನ ಜಿಲ್ಲಾಧಿಕಾರಿಗೇ ಇದೇ ಪ್ರಶ್ನೆಯನ್ನು ಕೇಳಿದ್ದೇನೆ. ನಾನು ಲಕ್ನೋ ಗೆಸ್ಟ್ ಹೌಸಲ್ಲೇ ಇರಬೇಕಾ ಎಂದು ಎಎನ್ಐ ಬಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಜಗದೀಶಪುರ ಪೊಲೀಸ್ ಠಾಣೆಯಲ್ಲಿ 25 ಲಕ್ಷ ಕಳವು ಪ್ರಕರಣದಲ್ಲಿ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ ಅರುಣ್ ವಾಲ್ಮೀಕಿ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾಗ ಆರೋಗ್ಯ ಏರುಪೇರಾಗಿ ಸಾವು ಕಂಡಿದ್ದ. ಆತನ ಮನೆಗೆ ಪೊಲೀಸರು ದಾಳಿ ನಡೆಸಿ, ಕದ್ದ ಹಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾಗ ಅಚಾನಕ್ಕಾಗಿ ತಲೆ ತಿರುಗಿ ಬಿದ್ದಿದ್ದ. ಆನಂತರ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದರು. ಆರೋಪಿ ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟಿದ್ದು ಸ್ಥಳೀಯರ ಸಂಶಯಕ್ಕೆ ಕಾರಣವಾಗಿದೆ. ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ, ಲಕ್ನೋದಲ್ಲಿದ್ದ ಪ್ರಿಯಾಂಕ ಗಾಂಧಿ ಅಲ್ಲಿಗೆ ತೆರಳಿದ್ದರು. ಆದರೆ, ಆ ಪ್ರದೇಶದಲ್ಲಿ 144 ಸೆಕ್ಷನ್ ಹಾಕಿರುವುದಾಗಿ ಹೇಳಿ ಪೊಲೀಸರು ಆಕೆಯ ಭೇಟಿಯನ್ನು ತಡೆದಿದ್ದಾರೆ.

ಇತ್ತೀಚೆಗೆ ಲಖೀಮ್ ಪುರ್ ಖೇರಿಯಲ್ಲಿ ರೈತರ ಮೇಲಿನ ದಾಳಿಯ ಸಂದರ್ಭದಲ್ಲಿಯೂ ಸಂತ್ರಸ್ತರನ್ನು ಭೇಟಿಯಾಗಲು ತೆರಳಿದ್ದ ಪ್ರಿಯಾಂಕ ಗಾಂಧಿಯನ್ನು ಪೊಲೀಸರು ಬಂಧಿಸಿದ್ದರು. ಪದೇ ಪದೇ ಈ ರೀತಿಯ ಘಟನೆಗಳಾಗುತ್ತಿರುವುದು ಉತ್ತರ ಪ್ರದೇಶದಲ್ಲಿ ರಾಜಕೀಯ ದ್ವೇಷಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳ ನಾಯಕರು ರಾಜ್ಯ ಸರಕಾರವನ್ನು ಟೀಕಿಸುತ್ತಿದ್ದಾರೆ. 

Congress leader Priyanka Gandhi Vadra and three others have been allowed to go to Agra to meet the family of a man who died while in the custody of Uttar Pradesh Police. Ms Gandhi Vadra was earlier detained by the cops - for a second time in less than a month - after she was stopped en route to Agra. Her car had been stopped at the first toll plaza on the Lucknow-Agra Expressway.