ಬ್ರೇಕಿಂಗ್ ನ್ಯೂಸ್
28-10-21 11:59 am Mangaluru Correspondent ದೇಶ - ವಿದೇಶ
ಕೋಲ್ಕತ್ತಾ, ಅ.28: ಪಶ್ಚಿಮ ಬಂಗಾಳದ ಸುಂದರ್ ಬನ್ ನದಿಯಲ್ಲಿ ಬಲೆಗೆ ಬಿದ್ದ 78 ಕೆಜಿ ತೂಕದ ದೈತ್ಯ ಮೀನೊಂದು 36 ಲಕ್ಷ ರೂಪಾಯಿಗೆ ಹರಾಜಾಗಿದ್ದು ದೊಡ್ಡ ಸುದ್ದಿಯಾಗಿದೆ. 7 ಅಡಿ ಉದ್ದ ಮತ್ತು 78.4 ಕಿಲೋ ತೂಕದ ದೈತ್ಯಾಕಾರದ ಟೆಲಿಯಾ ಭೋಲಾ ಹೆಸರಿನ ಮೀನು ಭಾರೀ ಹಣಕ್ಕೆ ಮಾರಾಟ ಆಗಿದ್ದು ಮೀನುಗಾರರನ್ನು ಅಚ್ಚರಿಗೊಳಿಸಿದೆ.
ಮೀನುಗಾರರು ತಮ್ಮ ಬಲೆಗೆ ಸಿಕ್ಕಿಬಿದ್ದ ಬೃಹತ್ ಮೀನುಗಳನ್ನ ಕೊಲ್ಕತ್ತಾದ ಕ್ಯಾನಿಂಗ್ ಮಾರುಕಟ್ಟೆಗೆ ಹರಾಜಿಗಾಗಿ ತಂದಿದ್ದರು. ಟೆಲಿಯಾ ಭೋಲಾ ಎಂಬ ಒಂದು ಮೀನನ್ನು 36,53,605 ರೂಪಾಯಿಗೆ ಹರಾಜು ಮಾಡಲಾಗಿದ್ದು, ಕೆಎಂಪಿ ಎಂಬ ಮೀನು ವ್ಯಾಪಾರ ಕಂಪನಿ ಅದನ್ನು ಖರೀದಿಸಿತ್ತು.
ಕ್ಯಾನಿಂಗ್ ಮಾರುಕಟ್ಟೆಯಲ್ಲಿ ಅಂತಹ ದೈತ್ಯ ಮೀನನ್ನು ನಾವು ನೋಡಿರಲಿಲ್ಲ. ಹರಾಜಿನಲ್ಲಿ ಪ್ರತಿ ಕಿಲೋಗೆ ರೂ.47,880 ದರದಲ್ಲಿ ಮೀನನ್ನು ಮಾರಾಟ ಮಾಡಲಾಗಿದೆ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ಈ ಮೀನು ತುಂಬಾ ದುಬಾರಿ ಯಾಕೆ?
ಮೀನುಗಾರರ ಪ್ರಕಾರ, ಆಡುಮಾತಿನಲ್ಲಿ ಟೆಲಿಯಾ ಭೋಲಾ ಎಂದು ಕರೆಯಲ್ಪಡುವ ಈ ದೈತ್ಯ ಮೀನು ಅಪಾರ ಪ್ರಮಾಣದ ಔಷಧೀಯ ಮೌಲ್ಯವನ್ನು ಹೊಂದಿದೆ. ಮೀನಿನ ಹೊಟ್ಟೆಯಲ್ಲಿ ಕೆಲವು ಅಮೂಲ್ಯವಾದ ಸಂಪನ್ಮೂಲಗಳಿವೆ ಎಂದು ಹೇಳಲಾಗುತ್ತದೆ. ಹಾಗಾಗಿ ತುಂಬಾ ದುಬಾರಿಯಾಗಿದೆ. ಈ ಮೀನಿಗೆ ಸಾಗರೋತ್ತರ ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದಿದ್ದಾರೆ.
ಇತ್ತೀಚೆಗೆ, ಮಹಾರಾಷ್ಟ್ರದ ಪಾಲ್ಘರ್‍ನಲ್ಲಿ ಮೀನುಗಾರರೊಬ್ಬರು 1.33 ಕೋಟಿ ಮೌಲ್ಯದ 157 ಘೋಲ್ ಮೀನುಗಳನ್ನು ಹಿಡಿದಿದ್ದರು. ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಘೋಲ್ ಮೀನು ವಿಶ್ವದ ಅತ್ಯಂತ ದುಬಾರಿ ಸಮುದ್ರ ಮೀನುಗಳಲ್ಲಿ ಒಂದಾಗಿದೆ.
Fisherman Bikash Barman and several others of his team have been fishing in the rivers of the Sunderbans, in 24 Parganas of West Bengal, for a long time. That is how they chanced upon a giant ‘Telia Bhola’ fish. The fishermen had to pool in all their strength to haul up this gigantic fish caught in their net. As soon as it was caught, they brought the fish to the wholesale market. The price of the fish rose steeply in the market. Almost 7 feet in length, the ‘Telia Bhola’ fish was ultimately sold for Rs 36 lakh. The fish was bought by an organisation called KMP in Kolkata. It was sold at Rs 49,300 per kg. But why did the fish become so expensive? It is said that the fish has some valuable resources in its stomach, which is what makes it so pricey.
25-04-25 07:32 pm
Bangalore Correspondent
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
Pahalgam Attack, Shivamogga, Manjunath: ಉಗ್ರರ...
24-04-25 10:13 pm
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
25-04-25 06:37 pm
HK News Desk
ಪಹಲ್ಗಾಮ್ ದುಷ್ಕೃತ್ಯ ; ಐದು ವರ್ಷ ಕಾಲ ಪಾಕಿನಲ್ಲಿದ್...
25-04-25 02:54 pm
BSF jawan, Pakistan: ಗಡಿಯಲ್ಲಿ ಬಿಕ್ಕಟ್ಟು ; ಪಾಕ...
25-04-25 01:16 pm
Melted plastic, Kollam, Hazard: ವಲಸೆ ಕಾರ್ಮಿಕರ...
24-04-25 09:00 pm
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
25-04-25 10:49 pm
Giridhar Shetty, Mangalore Correspondent
Bhatkal News, Pakistani Origin Mangalore: ಭಟ್...
25-04-25 07:43 pm
Mangalore News, Facebook post, Pahalgam Terro...
24-04-25 11:08 pm
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm