ಬ್ರೇಕಿಂಗ್ ನ್ಯೂಸ್
03-11-21 10:28 pm Headline Karnataka News Desk ದೇಶ - ವಿದೇಶ
ನವದೆಹಲಿ, ನ.3: ದೇಶಾದ್ಯಂತ ನಡೆದ ಉಪ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿಗೆ ಹಿನ್ನಡೆ ಆದ ಬೆನ್ನಲ್ಲೇ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಸಿದ್ದು ದೀಪಾವಳಿ ಕೊಡುಗೆ ನೆಪದಲ್ಲಿ ಜನರ ಮೇಲಿನ ಹೊರೆಯನ್ನು ತಗ್ಗಿಸಿದೆ.
ಪೆಟ್ರೋಲ್ ಮೇಲಿನ ಸುಂಕದಲ್ಲಿ ಐದು ರೂ. ಇಳಿಸಿದ್ದರೆ, ಡೀಸೆಲ್ ತೆರಿಗೆಯಲ್ಲಿ ಹತ್ತು ರೂ. ಇಳಿಕೆ ಮಾಡಿದೆ. ಕೇಂದ್ರ ಸರಕಾರದ ಸುಂಕದಲ್ಲಿ ಇಳಿಕೆಯಾಗಿದ್ದರಿಂದ ಅದಕ್ಕೆ ಅನುಸರಿಸಿ ಪೆಟ್ರೋಲ್ ಮತ್ತು ಡೀಸೆಲ್ ಲೀಟರ್ ದರದಲ್ಲಿಯೂ ಅಷ್ಟೇ ಇಳಿಕೆಯಾಗಲಿದೆ. ಕಡಿಮೆಯಾದ ದರ ನ.4 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.
ಕಳೆದ ಎರಡು ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಏರಿಕೆಯಾದ ನೆಪದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಭಾರೀ ಏರಿಕೆಯಾಗಿತ್ತು. ಕರ್ನಾಟಕದಲ್ಲಿ ಪೆಟ್ರೋಲಿಗೆ 112 ರೂ. ಆಗಿದ್ದರೆ, ಡೀಸೆಲಿಗೆ 105 ರೂ. ಆಗಿತ್ತು. ಈ ಪೈಕಿ 60 ಶೇ. ಭಾಗ ಕೇಂದ್ರ ಮತ್ತು ರಾಜ್ಯ ಸರಕಾರದ ತೆರಿಗೆಯೇ ಇದ್ದರೂ, ಅದನ್ನು ಇಳಿಸಬೇಕೆಂದು ದೇಶಾದ್ಯಂತ ಒತ್ತಾಯ ಕೇಳಿಬಂದಿದ್ದರೂ ಸರಕಾರ ಕಿವಿಕೊಟ್ಟಿರಲಿಲ್ಲ. ಇದೀಗ ದೇಶದ ವಿವಿಧ ರಾಜ್ಯಗಳಲ್ಲಿ ಉಪ ಚುನಾವಣೆ ನಡೆದಿದ್ದು ಬಿಜೆಪಿಗೆ ಬಹುತೇಕ ಕಡೆ ಹಿನ್ನಡೆಯಾಗಿದೆ. ಬಿಜೆಪಿ ಹೊಂದಿದ್ದ ಸಂಸದ ಕ್ಷೇತ್ರವೂ ಕಾಂಗ್ರೆಸ್ ಪಾಲಾಗಿತ್ತು. ಹಿಮಾಚಲ ಪ್ರದೇಶದಲ್ಲಿ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಈ ಫಲಿತಾಂಶದ ಬೆನ್ನಲ್ಲೇ ಕೇಂದ್ರ ಸರಕಾರ ಜನರ ಮೇಲಿನ ತೆರಿಗೆ ಹೊರೆಯನ್ನು ತಗ್ಗಿಸಿದೆ.
ಇದೇ ವೇಳೆ, ಆಯಾ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು ಇಳಿಸುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೊಳಗಾದ ಜನರಿಗೆ ಸ್ವಲ್ಪ ಮಟ್ಟಿಗೆ ಆಸರೆ ಆಗಲಿದೆ ಎಂದು ಕೇಂದ್ರ ಸರಕಾರ ಉಚಿತ ಸಲಹೆಯನ್ನೂ ನೀಡಿದೆ.
In a move to provide a fillip to the economy, the Central government has taken a decision to make significant cuts in excise duty on petrol and diesel starting tomorrow. On the eve of Diwali, the government decided to reduce the central excise duty of ₹5 on petrol and ₹10 on diesel, according to people familiar with the matter. The prices of fuel and diesel will come down accordingly across the country.
25-02-26 01:48 pm
Supritha Jain | ಸುಪ್ರೀತಾ ಜೈನ್
ಕೊಪ್ಪಳ ; ಅಲ್ಪಸಂಖ್ಯಾತ ಇಲಾಖೆಯ ವಸತಿ ನಿಲಯದ ಶೌಚಾಲಯ...
25-02-26 12:30 pm
ಧಾರವಾಡದಲ್ಲಿ ಬೀದಿಗಿಳಿದ ಸಾವಿರಾರು ಉದ್ಯೋಗಾಕಾಂಕ್ಷಿ...
24-02-26 08:06 pm
ಮಲಯಾಳಿಗಳ ಬಹುಕಾಲದ ಬೇಡಿಕೆಗೆ ಕೊನೆಗೂ ಅಸ್ತು ಎಂದ ಕೇ...
24-02-26 07:54 pm
ಬೆಂಗಳೂರಿನ ತರಕಾರಿಗಳಲ್ಲಿ ಅತಿ ಹೆಚ್ಚು ರಾಸಾಯನಿಕ ಪತ...
24-02-26 03:51 pm
25-02-26 03:38 pm
HK News Staffer
ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ; ಮತ್ತೆ ಭುಗಿಲೆ...
24-02-26 01:21 pm
ನೀವು ಮೋದಿಯನ್ನು ನಿಂದಿಸುತ್ತೀರಿ, ಕಂಬಳಿ ಪಡೆಯಲು ಹಕ...
23-02-26 06:57 pm
ಕಠ್ಮಂಡು ಬಳಿ ಭೀಕರ ಬಸ್ ದುರಂತ ; ತ್ರಿಶೂಲಿ ನದಿಗೆ ಬ...
23-02-26 04:45 pm
ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ತಮಿಳುನಾಡು,...
22-02-26 06:19 pm
25-02-26 11:21 am
HK News Staffer
ಬೆಂಗಳೂರು ಬಿಟ್ಟು ಮಂಗಳೂರಿನತ್ತ ಐಟಿ ಉದ್ಯೋಗಿಗಳ ಚಿತ...
25-02-26 09:42 am
ಆನ್ಲೈನ್ ಹೂಡಿಕೆ ಹೆಸ್ರಲ್ಲಿ 19.06 ಲಕ್ಷ ರೂ. ವಂಚನ...
24-02-26 10:39 pm
Mangalore Ullal, Ratnagiri Accident: ಮಹಾರಾಷ್ಟ...
24-02-26 09:50 pm
Vitla News, Mangalore: ವಿಟ್ಲ ಬಳಿಯ ಗುರುಕುಲ ವಿದ...
23-02-26 08:20 pm
24-02-26 10:07 pm
Mangaluru Staffer
ಕ್ರಿಕೆಟ್ ಆಟದ ದ್ವೇಷದಲ್ಲಿ ಸಹಪಾಠಿಗೆ ಹಲ್ಲೆ ; ಎಸ್ಸ...
24-02-26 06:01 pm
ನೀಟ್ ಪರೀಕ್ಷೆಗೆ ಒತ್ತಡ ಹೇರಿದ್ದಕ್ಕೆ ತಂದೆಯನ್ನೇ ಕೊ...
24-02-26 01:50 pm
ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಮರ್ಡರ್ ; ಗಾಂಜ...
24-02-26 01:34 pm
ಐಡಿಎಫ್ಸಿ ಫಸ್ಟ್ ಬ್ಯಾಂಕಿನಲ್ಲಿ 590 ಕೋಟಿ ಹಗರಣ ;...
23-02-26 10:44 pm