ಬ್ರೇಕಿಂಗ್ ನ್ಯೂಸ್
14-11-21 01:33 pm HK News Desk ದೇಶ - ವಿದೇಶ
ನವದೆಹಲಿ, ನ.14: ಮಣಿಪುರದಲ್ಲಿ ನಡೆದಿರುವ ಉಗ್ರರ ದಾಳಿಯನ್ನು ಅತ್ಯಂತ ಪೂರ್ವಯೋಜಿತ ಮತ್ತು ವ್ಯವಸ್ಥಿತವಾಗಿ ನಡೆಸಲಾಗಿತ್ತು ಎಂಬುದನ್ನು ಸೇನಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಪೀಪಲ್ಸ್ ಲಿಬರೇಶನ್ ಆರ್ಮಿ ಮತ್ತು ಮಣಿಪುರ್ ನಾಗಾ ಪೀಪಲ್ಸ್ ಫ್ರಂಟ್ ಎನ್ನುವ ಎರಡು ಉಗ್ರವಾದಿ ಸಂಘಟನೆಗಳು ದಾಳಿ ಹೊಣೆಯನ್ನು ಹೊತ್ತುಕೊಂಡಿವೆ.
15ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಪಡೆಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ಮೂರು ಐಇಡಿ ಬಾಂಬ್ ಬ್ಲಾಸ್ಟ್ ಮಾಡಲಾಗಿತ್ತು ಎನ್ನುವುದನ್ನು ಪತ್ತೆ ಮಾಡಲಾಗಿದೆ. ಮ್ಯಾನ್ಮಾರ್ ಗಡಿಭಾಗ ಮಣಿಪುರ ರಾಜ್ಯದ ಚೂರಾಚಂದ್ ಜಿಲ್ಲೆಯ ಶೆಹ್ಖಾನ್ ಗ್ರಾಮದಲ್ಲಿ ಭಾರತದ ಸೇನಾ ಯೋಧರು ಗಸ್ತಿನಲ್ಲಿದ್ದಾಗ ದಾಳಿ ನಡೆಸಲಾಗಿತ್ತು. ಅಸ್ಸಾಂ ರೈಫಲ್ಸ್ ರೆಜಿಮೆಂಟಿನ ಖೂಗಾ ಬೆಟಾಲಿಯನ್ ವಿಭಾಗದ ಕಮಾಂಡಿಂಗ್ ಆಫೀಸರ್ ಕರ್ನಲ್ ವಿಪ್ಲವ್ ತ್ರಿಪಾಠಿ ಸೇರಿದಂತೆ ಏಳು ಮಂದಿ ಸಾವು ಕಂಡಿದ್ದರು. ನಾಲ್ವರು ಯೋಧರು, ವಿಪ್ಲವ್ ತ್ರಿಪಾಠಿಯವರ ಪತ್ನಿ ಮತ್ತು ಆರು ವರ್ಷದ ಪುತ್ರನೂ ಘಟನೆಯಲ್ಲಿ ದುರಂತ ಸಾವು ಕಂಡಿದ್ದಾರೆ.
ಆದರೆ, ವಿಪ್ಲವ್ ತ್ರಿಪಾಠಿ ಕುಟುಂಬಸ್ಥರು ಅಲ್ಲಿ ಯಾಕೆ ಬಂದಿದ್ದರು ಅನ್ನುವುದು ತಿಳಿದುಬಂದಿಲ್ಲ. ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಗಡಿಜಿಲ್ಲೆಯ ಕುಗ್ರಾಮದಲ್ಲಿ ಸೇನಾ ಯೋಧರು ಗಸ್ತಿನಲ್ಲಿದ್ದಾಗ ಏಕಕಾಲದಲ್ಲಿ ಎರಡೂ ಕಡೆಯಿಂದ ನುಗ್ಗಿದ್ದ ಉಗ್ರರು ತೀವ್ರವಾಗಿ ದಾಳಿ ನಡೆಸಿದ್ದರಲ್ಲದೆ, ಐಇಡಿ ಬಾಂಬ್ ಗಳನ್ನು ಸ್ಫೋಟಿಸಿದ್ದಾರೆ. ಇದರಿಂದ ಸೇನಾ ವಾಹನದಲ್ಲಿದ್ದ ಯೋಧರು ಪ್ರತಿ ದಾಳಿ ನಡೆಸಲಾಗದೆ ಸಾವು ಕಂಡಿದ್ದಾರೆ ಎನ್ನುವ ಮಾಹಿತಿಗಳಿವೆ.
ಗಡಿಭಾಗದ ಜಿಲ್ಲೆಯನ್ನು ಸೇನಾ ಯೋಧರು ಸುತ್ತುವರಿದಿದ್ದು ಯಾವುದೇ ಕಾರಣಕ್ಕೂ ಉಗ್ರರನ್ನು ಪರಾರಿಯಾಗಲು ಬಿಡುವುದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ತಿಳಿಸಿದ್ದಾರೆ. ಉಗ್ರರ ದಾಳಿಯನ್ನು ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಎಲ್ಲರೂ ತೀವ್ರವಾಗಿ ಖಂಡಿಸಿದ್ದಾರೆ. ಮಣಿಪುರದಲ್ಲಿ ಹಿಂದಿನಿಂದಲೂ ಸ್ಥಳೀಯ ಉಗ್ರರ ಚಟುವಟಿಕೆ ಇತ್ತಾದರೂ, ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿರಲಿಲ್ಲ. ಸದ್ದಿಲ್ಲದೆ ಸೇನಾ ಯೋಧರ ಮೇಲೆ ದಾಳಿ ನಡೆಸಿರುವುದು ಆಕ್ರೋಶ ಮೂಡಿಸಿದೆ.
ಮಗನೇ ಹುಟ್ಟುಹಬ್ಬಕ್ಕೆ ಬರುತ್ತೇನೆಂದಿದ್ದ
ಘಟನೆಯಲ್ಲಿ ಸಾವನ್ನಪ್ಪಿದ ಅಸ್ಸಾಂ ರೈಫಲ್ಸ್ ವಿಭಾಗದ ಸುಮನ್ ಸ್ವರ್ಗೀಯರಿ ಎಂಬ ಯೋಧ ಅಸ್ಸಾಂ ಬುಡಕಟ್ಟು ವಿಭಾಗದ ತೀರಾ ಬಡ ಕುಟುಂಬದಿಂದ ಬಂದಿದ್ದವರು. ಅವರ ತಂದೆಯನ್ನು 2007ರಲ್ಲಿ ಉಗ್ರರು ದಾಳಿ ನಡೆಸಿ ಕೊಂದಿದ್ದರು. ಆನಂತರ, ತಾನು ಕೂಡ ಯೋಧನಾಗಬೇಕೆಂದು ಬಯಸಿ 2011ರಲ್ಲಿ ಸೇನಾ ಪಡೆ ಸೇರಿದ್ದರು. ಶನಿವಾರ ಉಗ್ರರ ದಾಳಿ ಆಗೋದಕ್ಕೂ ಒಂದು ಗಂಟೆ ಮುನ್ನ ಸುಮನ್ ತನ್ನ ಪತ್ನಿ ಜೂರಿಗೆ ಕರೆ ಮಾಡಿ ಮಾತನಾಡಿದ್ದರು. ಡಿಸೆಂಬರ್ ನಲ್ಲಿ ಮಗುವಿನ ಮೂರವೇ ವರ್ಷದ ಹುಟ್ಟಹಬ್ಬಕ್ಕೆ ರಜೆ ಪಡೆದು ಬರುತ್ತೇನೆ ಎಂದು ಸುಮನ್ ಹೇಳಿದ್ದರು.
ಕಳೆದ ಜುಲೈನಲ್ಲಿ ಒಂದು ವಾರದ ರಜೆಯಲ್ಲಿ ಬಂದು ಹೋಗಿದ್ದ ಸುಮನ್ ಈಗ ಶವವಾಗಿ ಮನೆಗೆ ಬಂದಿದ್ದು ಅಸ್ಸಾಂ ರಾಜ್ಯದ ಬಾಕಾ ಜಿಲ್ಲೆಯ ತೆಕರಕುಚ್ಚಿ ಗ್ರಾಮದಲ್ಲಿ ಶೋಕ ಸಾಗರವನ್ನೇ ಸೃಷ್ಟಿಸಿದೆ. ಸುಮನ್ ಏಕೈಕ ಮಗನಾಗಿದ್ದು, ಮೂವರು ಸೋದರಿಯರು ಇದ್ದರು. ಮೂರು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಸುಮನ್ ತಂದೆಯ ರೀತಿಯಲ್ಲೇ ಉಗ್ರರ ದಾಳಿಯಲ್ಲಿ ಸಾವು ಕಂಡಿದ್ದು ಕುಟುಂಬದಲ್ಲಿ ತೀವ್ರ ರೋದನಕ್ಕೆ ಕಾರಣವಾಗಿದೆ.
An initial investigation in the dastardly attack on the convoy of the commanding officer of an Assam Rifles unit by militants in Manipur’s Singhat has shown that it was “well-planned", sources said, adding that its difficult to believe that two proscribed militant organisations - the People’s Liberation Army (PLA) and the Manipur Naga People’s Front (MNPF) - were not aware of the presence of Colonel Viplav Tripathi’s eight-year-old son and wife in the targeted convoy.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am