ಬ್ರೇಕಿಂಗ್ ನ್ಯೂಸ್
19-11-21 11:01 am HK NEWS DESK ದೇಶ - ವಿದೇಶ
ನವದೆಹಲಿ, ನ.19: ಕಳೆದ ಒಂದು ವರ್ಷದ ಪರ್ಯಂತ ದೆಹಲಿ, ಪಂಜಾಬ್, ಹರ್ಯಾಣ, ಪಶ್ಚಿಮ ಉತ್ತರ ಪ್ರದೇಶದ ಭಾಗದಲ್ಲಿ ಪ್ರತಿಭಟನೆ ನಿರತರಾಗಿರುವ ರೈತರಿಗೆ ಪ್ರಧಾನಿ ಮೋದಿ ಸಿಹಿಸುದ್ದಿ ನೀಡಿದ್ದಾರೆ. ವರ್ಷದ ಹಿಂದೆ ಸಂಸತ್ತಿನಲ್ಲಿ ಅಂಗೀಕರಿಸಿದ್ದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಮೋದಿ ಘೋಷಣೆ ಮಾಡಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಣ್ಣ ರೈತರ ನೆರವಿಗಾಗಿ ಈ ಕೃಷಿ ಕಾಯ್ದೆಗಳನ್ನು ರೂಪಿಸಿದ್ದೆವು. ಆದರೆ, ಕೃಷಿಕರನ್ನು ಮನವೊಲಿಸಲು ಸಾಧ್ಯವಾಗದೆ ಇರುವ ಬಗ್ಗೆ ದೇಶದ ಜನರ ಕ್ಷಮೆ ಕೋರುತ್ತೇನೆ. ಇದೇ ತಿಂಗಳಲ್ಲಿ ನಡೆಯುವ ಸಂಸತ್ತಿನ ಅಧಿವೇಶನದಲ್ಲಿ ಮಸೂದೆಯನ್ನು ಪೂರ್ತಿಯಾಗಿ ಹಿಂಪಡೆಯುವ ಪ್ರಕ್ರಿಯೆ ನಡೆಸುವುದಾಗಿ ಹೇಳಿದರು.
ಅಲ್ಲದೆ, ಪ್ರತಿಭಟನೆ ನಿರತರಾಗಿರುವ ಮಂದಿ ಕೂಡಲೇ ತಮ್ಮ ಮನೆಗಳಿಗೆ ಹಿಂತಿರುಗಬೇಕು, ಪ್ರತಿಭಟನೆಯನ್ನು ಕೈಬಿಡಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ 2020ರ ಜೂನ್ ತಿಂಗಳಲ್ಲಿ ಮೂರು ಕೃಷಿ ವಿಧೇಯಕ ಜಾರಿಗೊಳಿಸುವ ಬಗ್ಗೆ ಕೇಂದ್ರ ಸರಕಾರ ಸುಗ್ರೀವಾಜ್ಞೆ ಜಾರಿಗೆ ತಂದಿತ್ತು. ಆನಂತರ, ಸೆಪ್ಟಂಬರ್ ತಿಂಗಳಲ್ಲಿ ನಡೆದ ಅಧಿವೇಶನದಲ್ಲಿ ವಿಧೇಯಕವನ್ನು ಪ್ರತಿಪಕ್ಷಗಳು ಮತ್ತು ರೈತರ ವಿರೋಧದ ಮಧ್ಯೆಯೇ ಮಂಡಿಸಿ, ಅನುಮೋದನೆ ಪಡೆದಿತ್ತು. ಕೃಷಿ ಉತ್ಪಾದನೆ ಮತ್ತು ವ್ಯಾಪಾರ ಕಾಯ್ದೆ, ಕೃಷಿ ವಸ್ತುಗಳಿಗೆ ಬೆಲೆ ನಿಗದಿ ಮತ್ತು ಬೆಳೆಯ ರಕ್ಷಣಾ ವಿಧೇಯಕ, ಅಗತ್ಯ ವಸ್ತುಗಳ ಬೆಲೆ ತಿದ್ದುಪಡಿ ಕಾಯ್ದೆ – ಈ ಮೂರು ಕೃಷಿ ಕಾಯ್ದೆಗಳಾಗಿದ್ದು, ಕೃಷಿಕರು ಉತ್ಪಾದಿಸುವ ಬೆಳೆಗಳನ್ನು ನೇರವಾಗಿ ಯಾರು ಬೇಕಾದರೂ ಪಡೆಯಲು ಸೂಕ್ತವಾಗುವಂತೆ ಮಾರ್ಪಾಡು ಮಾಡಲಾಗಿತ್ತು. ಆಮೂಲಕ ಬಹುರಾಷ್ಟ್ರೀಯ ಕಂಪನಿಗಳು ನೇರವಾಗಿ ಕೃಷಿಕರಿಂದ ಆಹಾರ ವಸ್ತುಗಳನ್ನು ಖರೀದಿ ಮಾಡಬಹುದಾಗಿತ್ತು. ಎಪಿಎಂಸಿಯಲ್ಲೇ ಕೃಷಿಕರು ಆಹಾರ ವಸ್ತುಗಳನ್ನು ನೀಡಬೇಕೆಂಬ ಕಡ್ಡಾಯ ನೀತಿಗೆ ತಿಲಾಂಜಲಿ ಇಟ್ಟಿತ್ತು.
ಆದರೆ, ಉತ್ತರ ಭಾರತದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೃಷಿಕರು ಭಾರೀ ದೊಡ್ಡ ಪ್ರತಿಭಟನೆಯನ್ನು ನಡೆಸಿದ್ದರು. ದೆಹಲಿ ಮತ್ತು ಹರ್ಯಾಣ – ಪಂಜಾಬ್ ಗಡಿಗಳಲ್ಲಿ ಸಾವಿರಾರು ರೈತರು ರಾತ್ರಿ- ಹಗಲೆನ್ನದೆ ನಿರಂತರವಾಗಿ ಪ್ರತಿಭಟನೆ ಮುಂದುವರಿಸಿದ್ದರು. ಕಳೆದ ನವೆಂಬರ್ 28ರಂದು ದೆಹಲಿಯ ಸಿಂಗೂರ್ ಗಡಿಭಾಗದಲ್ಲಿ ಆರಂಭಗೊಂಡಿದ್ದ ರೈತರ ಪ್ರತಿಭಟನಾ ಧರಣಿ ಇದೇ ನವೆಂಬರ್ 28ಕ್ಕೆ ಒಂದು ವರ್ಷ ಪೂರೈಸುವುದರಲ್ಲಿತ್ತು. ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆದಿತ್ತು. ಈ ಬಗ್ಗೆ ರೈತ ಸಂಘಟನೆಗಳನ್ನು ಮನವೊಲಿಸಲು ಕೇಂದ್ರ ಸರಕಾರದ ಪ್ರತಿನಿಧಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದೂ ವಿಫಲವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋದಿ, ನಾನು ಏನೆಲ್ಲ ಕ್ರಮಗಳನ್ನು ಕೈಗೊಂಡಿದ್ದರೂ, ಅದು ಕೇವಲ ದೇಶದ ರೈತರ ಹಿತದೃಷ್ಟಿಯಿಂದ ಆಗಿತ್ತು. ನಾನು ಏನು ಮಾಡುತ್ತಿದ್ದರೂ, ದೇಶದ ಹಿತಕ್ಕಾಗಿ ಅಷ್ಟೇ. ನಿಮ್ಮೆಲ್ಲರ ಆಶೀರ್ವಾದದಿಂದ ದೇಶಕ್ಕಾಗಿ ನಾನು ಮಾಡುತ್ತಿರುವ ಕೆಲಸದಿಂದ ಹಿಂದಕ್ಕೆ ಸರಿಯುವುದಿಲ್ಲ. ನಿಮ್ಮೆಲ್ಲರ ಕನಸು ಮತ್ತು ದೇಶದ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.
ಪ್ರಧಾನಿ ಮೋದಿ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಗೆ ಭೇಟಿ ನೀಡಲಿದ್ದು, 6250 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಂದಿನ ವರ್ಷದಲ್ಲಿ ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ಇರುವುದರಿಂದ ರೈತರ ಮನವೊಲಿಸುವ ದೃಷ್ಟಿಯಿಂದ ಮೋದಿ ದಿಢೀರ್ ಆಗಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
Prime Minister Narendra Modi, in an address to the nation today, announced that the three contentious farm laws will be repealed."We haven't been able to explain to our farmers. This is not a time to blame anyone. I want to tell you that we have taken the farm laws back," said the Prime Minister, urging farmers to return to their homes and fields.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am