ಓಮಿಕ್ರಾನ್ ಇನ್ನೂ ಭಾರತದಲ್ಲಿ ಪತ್ತೆಯಾಗಿಲ್ಲ ; ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ

30-11-21 02:58 pm       HK Desk news   ದೇಶ - ವಿದೇಶ

ಹೊಸ ರೂಪಾಂತರಿ ವೈರಸ್ ಓಮಿಕ್ರಾನ್ ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ.

ನವದೆಹಲಿ, ನ.30: ಹೊಸ ರೂಪಾಂತರಿ ವೈರಸ್ ಓಮಿಕ್ರಾನ್ ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ. ಅದು ಬರದಂತೆ ತಡೆಯಲು ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸಂಸತ್ತಿನಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಹೇಳಿದ್ದಾರೆ.

ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಗತ್ತಿನ 14 ದೇಶಗಳಲ್ಲಿ ಈಗಾಗಲೇ ಈ ಹೊಸ ವೈರಸ್ ಕಂಡುಬಂದಿದೆ. ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ. ನಾವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಲ್ಲದೆ, ಇದರ ಪತ್ತೆಗಾಗಿ ಜೀನೋಮ್ ಸೀಕ್ವೆನ್ಸ್ ಪರೀಕ್ಷೆಯನ್ನೂ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಕೋವಿಡ್ 19 ಬಗ್ಗೆ ಹೇಳಿಕೆ ನೀಡಿರುವ ಮಾಂಡವೀಯ, ಕೋವಿಡ್ ಸ್ಥಿತಿ ಈಗ ಸಂಪೂರ್ಣ ಹತೋಟಿಗೆ ಬಂದಿದೆ. ಆದರೆ, ಕೊರೊನಾ ಪೂರ್ತಿಯಾಗಿ ನಮ್ಮನ್ನು ಬಿಟ್ಟು ಹೋಗಿಲ್ಲ. ದೇಶಾದ್ಯಂತ ಈವರೆಗೆ 124 ಕೋಟಿ ಜನರಿಗೆ ಲಸಿಕೆಯನ್ನ ನೀಡಲಾಗಿದೆ ಎಂದು ಹೇಳಿದರು.

ಈಗಾಗ್ಲೇ ಓಮಿಕ್ರಾನ್ ಪತ್ತೆಯಾಗಿರುವ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯನ್ನು ಭಾರತ ಸರಕಾರ ಬಿಡುಗಡೆ ಮಾಡಿದೆ. ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಸೇರಿದಂತೆ ತಮ್ಮ ಪ್ರಯಾಣದ 14 ದಿನಗಳ ಹಿಸ್ಟರಿಯನ್ನು ನಮೂದಿಸಿದ ಬಳಿಕವೇ ಭಾರತಕ್ಕೆ ಬರಬೇಕಾಗುತ್ತದೆ. ಅದಲ್ಲದೆ, ಕೇಂದ್ರ ಆರೋಗ್ಯ ಸಚಿವಾಲಯದಿಂದ ಟೆಸ್ಟಿಂಗ್ ಹೆಚ್ಚಿಸಲು ಮತ್ತು ಜಿನೋಮ್ ಸೀಕ್ವೆನ್ಸ್ ಪರೀಕ್ಷೆ ಕೈಗೊಳ್ಳಲು ಎಲ್ಲ ರಾಜ್ಯ ಸರಕಾರಗಳಿಗೆ ಸೂಚನೆ ನೀಡಲಾಗಿದೆ. ವಿಮಾನ ಯಾನ ಸಚಿವಾಯಲಯದಿಂದಲೂ ಈ ಬಗ್ಗೆ ನಿಗಾ ಇಡಲಾಗಿದೆ ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ವೈದ್ಯರು ಹೊಸ ವೈರಸ್ ಬಗ್ಗೆ ಗಾಬರಿ ಪಡಬೇಕಾಗಿಲ್ಲ ಎಂದಿದ್ದರೂ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಗ್ಲೋಬಲ್ ರಿಸ್ಕ್ (ಅಪಾಯಕಾರಿ) ಎನ್ನುವ ಮೂಲಕ ಜಗತ್ತಿನ ದೇಶಗಳನ್ನು ಆತಂಕಕ್ಕೆ ತಳ್ಳಿದ್ದಾರೆ. ಹೀಗಾಗಿ ತಮ್ಮಲ್ಲಿಗೆ ಈ ವೈರಸ್ ಬರದಂತೆ ತಡೆಯಲು ಎಲ್ಲ ದೇಶಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ.

Speaking in the Rajya Sabha during Question Hour on Tuesday, Union Minister of Health and Family Welfare Mansukh Mandaviya said that no case of new coronavirus variant Omicron has been detected in India so far. Last week, the World Health Organisation had classified the variant (B.1.1.529) as a 'variant of concern'. On Monday, the WHO said the variant poses "very high" global risk.