ಬ್ರೇಕಿಂಗ್ ನ್ಯೂಸ್
24-02-26 10:07 pm Mangaluru Staffer ಕ್ರೈಂ
ಮಂಗಳೂರು, ಫೆ.24: ಸ್ಪೀಕಿಂಗ್ ಇನ್ನಿತರ ಕೌಶಲ್ಯ ತರಬೇತಿ ನೀಡುವ ನಗರದ ಪ್ರತಿಷ್ಠಿತ ಸಂಸ್ಥೆಯೊಂದರ ಮಾಲೀಕರಿಗೆ ಅವರದ್ದೇ ಮಾರ್ಫ್ ಮಾಡಿದ ವೀಡಿಯೋಗಳನ್ನು ಮುಂದಿಟ್ಟು ಬರೋಬ್ಬರಿ ಎರಡು ಕೋಟಿ ರೂ.ಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಅದೇ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ಮೂಲದ ಅಭಿಷೇಕ್ ಸುರೇಂದ್ರ ಪೂಜಾರಿ ಬಂಧಿತ ಆರೋಪಿ. ಸಂಸ್ಥೆಯ ಮಾಲೀಕರ ಪುತ್ರಿ ನೀಡಿದ ದೂರಿನಂತೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ದುಬೈಗೆ ಕರೆದೊಯ್ದು ಬ್ಲ್ಯಾಕ್‌ಮೇಲ್
ಆರೋಪಿ ಅಭಿಷೇಕ್ ಸಂಸ್ಥೆಯ ಮಾಲೀಕರನ್ನು ನಮ್ಮ ತರಬೇತಿಗೆ ದುಬೈನಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ನಂಬಿಸಿ ಎರಡು ವರ್ಷಗಳ ಹಿಂದೆ ದುಬೈಗೆ ಕರೆದುಕೊಂಡು ಹೋಗಿದ್ದ. ಆದರೆ, ಅಲ್ಲಿ ಬೇಡಿಕೆ ಇಲ್ಲದಿರುವುದು ಮತ್ತು ಆರೋಪಿಯ ಶಂಕಾಸ್ಪದ ವರ್ತನೆಯನ್ನು ಗಮನಿಸಿ ಸ್ವಲ್ಪ ಸಮಯದ ಬಳಿಕ ವಾಪಸಾಗಿದ್ದರು.
ದುಬೈನಲ್ಲಿದ್ದಾಗಲೇ ಆರೋಪಿ ಅಭಿಷೇಕ್, ಮಾಲೀಕರ ಖಾಸಗಿ ವೀಡಿಯೋ ಮಾಡಿದ್ದಲ್ಲದೆ, ಆನಂತರ ಅದನ್ನು ತೋರಿಸಿ ಬ್ಲಾಕ್ಮೇಲ್ ಮಾಡಲು ತೊಡಗಿದ್ದ. ಇದಲ್ಲದೆ, 'ನಿಮ್ಮ ಪುತ್ರಿಯ ಖಾಸಗಿ ವೀಡಿಯೋ ಕೂಡ ನನ್ನ ಬಳಿ ಇದೆ' ಎಂದು ಹೇಳಿ ಬೆದರಿಸಿ ಹಣದ ಬೇಡಿಕೆ ಇರಿಸಿದ್ದ. ಈ ವೀಡಿಯೋಗಳನ್ನು ಡಿಲೀಟ್ ಮಾಡಲು 2 ಕೋಟಿ ರೂ.ಗಳನ್ನು ತನ್ನ ಪತ್ನಿ ಶ್ರೀನಿಧಿ ಪಟ್ಲ ಖಾತೆಗೆ ವರ್ಗಾಯಿಸುವಂತೆ ಡಿಮ್ಯಾಂಡ್ ಮಾಡಿದ್ದ.

ಪ್ರಾಂಶುಪಾಲರಿಗೆ ವೀಡಿಯೋ ರವಾನೆ
ಹಣ ಸಿಗದಿದ್ದಾಗ ಕಳೆದ ಡಿಸೆಂಬರ್ ತಿಂಗಳಲ್ಲಿ ಮಾಲೀಕರ ಪುತ್ರಿಯನ್ನು ಸಂಪರ್ಕಿಸಿದ ಆರೋಪಿ, 2 ಕೋಟಿ ರೂ. ನೀಡದಿದ್ದರೆ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಅಲ್ಲದೆ, ಮಾಲೀಕರ ಖಾಸಗಿ ವೀಡಿಯೋಗಳನ್ನು ಮಾರ್ಫ್ ಮಾಡಿ ಮಂಗಳೂರು ಹಾಗೂ ಉಡುಪಿಯ ಕೆಲವು ಕಾಲೇಜುಗಳ ಪ್ರಾಂಶುಪಾಲರಿಗೆ ವಾಟ್ಸಪ್‌ನಲ್ಲಿ ಕಳುಹಿಸಿದ್ದ.
ಬ್ಲಾಕ್ಮೇಲ್ ಮಿತಿ ಮೀರಿದಾಗ ನೊಂದ ಮಾಲೀಕರ ಪುತ್ರಿ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಯ ಪತ್ನಿ ಶ್ರೀನಿಧಿ ವಿರುದ್ಧವೂ ದೂರು ದಾಖಲಾಗಿದ್ದು, ಕೃತ್ಯದಲ್ಲಿ ಆಕೆಯ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Police have arrested a former employee for allegedly blackmailing the owner of a reputed speaking and skill-development institute in the city by threatening to circulate morphed private videos and demanding ₹2 crore. The accused has been identified as Abhishek Surendra Poojary, a native of Kapu. Based on a complaint filed by the institute owner’s daughter, a case was registered at the Urwa Police Station, following which the accused was arrested and remanded to judicial custody.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm