ಬ್ರೇಕಿಂಗ್ ನ್ಯೂಸ್
30-11-21 03:21 pm HK Desk news ದೇಶ - ವಿದೇಶ
ಮುಂಬೈ, ನ.30: ಬಾಲಿವುಡ್ ನಟಿ ಕಂಗನಾ ರನೌತ್ ತನ್ನ ವಿರುದ್ಧ ಜೀವ ಬೆದರಿಕೆ ಹಾಕಿರುವ ಮಂದಿಯ ವಿರುದ್ಧ ಪೊಲೀಸ್ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಇತ್ತೀಚೆಗೆ ಪಂಜಾಬಿ ಖಲೀಸ್ತಾನಿಗಳ ಹೇಳಿಕೆಯ ವಿಚಾರದಲ್ಲಿ ಕಂಗನಾಗೆ ಜೀವ ಬೆದರಿಕೆ ಬಂದಿತ್ತು. ಇದೇ ವಿಚಾರದಲ್ಲಿ ಇನ್ ಸ್ಟಾ ಗ್ರಾಮ್ ನಲ್ಲಿ ಹಿಂದಿಯಲ್ಲಿ ಸುದೀರ್ಘ ಪತ್ರವನ್ನು ಬರೆದಿರುವ ಕಂಗನಾ, ತನ್ನ ತಾಯಿ ಮತ್ತು ತಂಗಿಯ ಜೊತೆ ಅಮೃತಸರ್ ನಲ್ಲಿ ನಿಂತುಕೊಂಡಿದ್ದ ಫೋಟೋವನ್ನು ಹಾಕ್ಕೊಂಡಿದ್ದಾರೆ.
ಮುಂಬೈ ದಾಳಿ ಮತ್ತು ಘಟನೆಯಲ್ಲಿ ಹುತಾತ್ಮರಾದವರನ್ನು ನೆನಪಿಸಿಕೊಳ್ಳಿ. ಯಾರು ಕೂಡ ಅಂದಿನ ಕರಾಳ ಘಟನೆಯನ್ನು ಮತ್ತು ದಾಳಿಕೋರರನ್ನು ಮರೆಯಬಾರದು. ಇಂತಹ ಕೃತ್ಯಗಳಿಂದ ದೇಶದೊಳಗೇ ಈ ರೀತಿಯ ದಾಳಿಕೋರರು ಇದ್ದಾರೆ ಅನ್ನುವುದು ಕಂಡುಬರುತ್ತದೆ. ಹಣ ಮತ್ತು ಅಧಿಕಾರ ದಾಹಕ್ಕಾಗಿ ಭಾರತ ಮಾತೆಯ ಘನತೆಗೆ ಕುಂದು ತರುವಂತೆ ನಡೆದುಕೊಳ್ಳುವ ದುಷ್ಕೃತ್ಯಗಳಿದೆ ಅವಕಾಶ ಕೊಡಬಾರದು. ದೇಶದೊಳಗಿರುವ ಶತ್ರುಗಳು ಇಂತಹ ಕೃತ್ಯಕ್ಕಾಗಿ ದೇಶ ವಿರೋಧಿಗಳ ಜೊತೆ ಕೈಜೋಡಿಸುತ್ತಿದ್ದಾರೆ.
ನನ್ನ ಪೋಸ್ಟ್, ನನ್ನ ಹೇಳಿಕೆಗಳಿಗೆದುರಾಗಿ ಜೀವ ಬೆದರಿಕೆಗಳು ಬರುತ್ತಿವೆ. ಬತಿಂಡಾ ಪ್ರದೇಶದ ಸೋದರನೊಬ್ಬ ನನ್ನನ್ನು ಕೊಂದು ಹಾಕುತ್ತೇನೆಂದು ಬಹಿರಂಗವಾಗೇ ಬೆದರಿಕೆ ಹಾಕಿದ್ದಾನೆ. ಹಾಗೆಂದು, ಈ ರೀತಿಯ ಬೆದರಿಕೆಗೆ ನಾನೇನು ಹೆದರುವುದಿಲ್ಲ. ದೇಶ ವಿರೋಧಿ ಶಕ್ತಿಗಳು, ದೇಶದ ವಿರುದ್ಧ ಸಂಚು ಹೂಡುವ ಉಗ್ರವಾದಿಗಳ ವಿರುದ್ಧ ಯಾವತ್ತೂ ಮಾತನಾಡುತ್ತೇನೆ. ಅದು ಸೇನೆಯ ಜವಾನರನ್ನು ಕೊಲ್ಲುವ ನಕ್ಸಲರು ಆಗಿರಬಹುದು. ಪಂಜಾಬನ್ನು 80ರ ದಶಕದಲ್ಲಿ ತುಂಡರಿಸಿ, ಖಲೀಸ್ತಾನ್ ಮಾಡಲು ಕನಸು ಕಂಡಿದ್ದ ತುಕ್ಡೆ ತುಕ್ಡೆ ಗ್ಯಾಂಗ್ ಅಥವಾ ಉಗ್ರವಾದಿಗಳೇ ಆಗಿರಬಹುದು. ಈ ಬಗ್ಗೆ ನನ್ನ ಮಾತುಗಳೇ ಬಂದೇ ಬರುತ್ತದೆ.
ನಾನು ಯಾವತ್ತೂ ಒಂದು ಧರ್ಮ, ಜಾತಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯೂ ಒಬ್ಬ ಮಹಿಳೆ. ಅವರ ಅತ್ತೆ ಇಂದಿರಾ ಗಾಂಧಿ ತನ್ನ ಕೊನೆಯ ಉಸಿರಿನ ತನಕವೂ ಉಗ್ರರ ವಿರುದ್ಧ ಸಿಡಿದು ನಿಂತು ಹೋರಾಡಿದ್ದ ಮಹಿಳೆಯಾಗಿದ್ದರು. ಕೆಲವರು ಪಂಜಾಬ್ ಚುನಾವಣೆಗೋಸ್ಕರ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ. ನನ್ನ ಹೇಳಿಕೆಯನ್ನು ಬಳಸುತ್ತಿದ್ದಾರೆ. ಈ ರೀತಿಯ ವರ್ತನೆಗಳಿಂದ ಭವಿಷ್ಯದಲ್ಲಿ ನನಗೇನಾದ್ರೂ ಆದಲ್ಲಿ ಅದಕ್ಕೆ ಇವರೇ ಹೊಣೆಯಾಗುತ್ತಾರೆ. ಚುನಾವಣೆ ಲಾಭಕ್ಕಾಗಿ ನನ್ನ ಯಾವುದೇ ಹೇಳಿಕೆಯನ್ನು ಬಳಸದಿರಿ ಎಂದು ಕಂಗನಾ ಬರೆದುಕೊಂಡಿದ್ದಾರೆ.
Actor Kangana Ranaut penned a note in Hindi along with a picture of her at the Golden Temple in Amritsar. She shared that she has filed an FIR against people who threatened her over her recent comments on “Khalistani terrorists”. She added that if anything happens to her, “those who do politics of hate and rhetoric will be solely responsible for it”.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm