ಕಾಂಗ್ರೆಸ್ ಸದ್ಯದ ಸ್ಥಿತಿಯಲ್ಲಿ ಲೋಕಸಭೆ ಚುನಾವಣೆ  ಗೆಲ್ಲುತ್ತೆ ಅನ್ನುವಂತಿಲ್ಲ ; ಗುಲಾಂ ನಬಿ ಆಜಾದ್

02-12-21 03:41 pm       HK Desk news   ದೇಶ - ವಿದೇಶ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳನ್ನು ಪಡೆಯಲಿ ಅಂತ ಹಾರೈಕೆ ಮಾಡಬಹುದು.

ನವದೆಹಲಿ, ಡಿ.2: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳನ್ನು ಪಡೆಯಲಿ ಅಂತ ಹಾರೈಕೆ ಮಾಡಬಹುದು. ಆದರೆ, ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಅಷ್ಟು ಸ್ಥಾನಗಳನ್ನ ಪಡೆಯುವುದು ಕಷ್ಟ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಗುಲಾಂ ನಬಿ ಆಜಾದ್ ಈ ಮಾತುಗಳನ್ನು ಹೇಳಿದ್ದಾರೆ. ಜಮ್ಮು ಕಾಶ್ಮೀರದ ವಿಶೇಷ ಪ್ರಾತಿನಿಧ್ಯ ಕಾಯ್ದೆಯನ್ನು ಬಿಜೆಪಿ ಸರಕಾರ ತೆಗೆದು ಹಾಕಿದ ಹಿನ್ನೆಲೆಯಲ್ಲಿ ಮಹತ್ವ ಪಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಗುಲಾಂ ನಬಿ ಆಜಾದ್ ಈ ಮಾತುಗಳನ್ನು ಹೇಳಿದ್ದು ಕಾಂಗ್ರೆಸ್ ಒಳಗೇ ಇರಿಸು ಮುರಿಸು ಉಂಟುಮಾಡಿದೆ.

ಕಾಯ್ದೆ ರದ್ದತಿಯ ವಿರುದ್ಧ ನಾನು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೇನೆ. ಬೇರೆ ಯಾರೂ ಮಾಡದಷ್ಟು ಹೆಚ್ಚಿನ ಧ್ವನಿಯನ್ನು ನಾನು ಎತ್ತಿದ್ದೇನೆ. ಆದರೆ ಈಗ ಈ ವಿಚಾರ ಕೋರ್ಟಿನಲ್ಲಿದೆ. ಈ ಬಗ್ಗೆ ನಾನು ಏನು ಹೇಳುವುದಕ್ಕೂ ಸಾಧ್ಯವಿಲ್ಲ. ನನ್ನ ಕೈಯಲ್ಲಿ ಯಾವುದೂ ಇಲ್ಲ ಎಂದು ಗುಲಾಂ ನಬಿ ಹೇಳಿದ್ದಾರೆ.

ಅಲ್ಲದೆ, ಈಗಿನ ಸನ್ನಿವೇಶದಲ್ಲಿ ಜಮ್ಮು ಕಾಶ್ಮೀರದಲ್ಲಿ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎನ್ನುವುದೂ ಅರ್ಥವಿಲ್ಲದ್ದು. ನಮ್ಮ ಜನರ ಭೂಮಿ ಮತ್ತು ಉದ್ಯೋಗವನ್ನು ಉಳಿಸಿಕೊಳ್ಳುವುದು ನಮಗೆ ಮುಖ್ಯ. 370 ಕಾಯ್ದೆ ರದ್ದತಿ ವಿಚಾರ ಸುಪ್ರೀಂ ಕೋರ್ಟಿನಲ್ಲಿದ್ದು, ಯಾವಾಗ ತೀರ್ಪು ಬರುತ್ತದೆ ಅನ್ನುವುದು ಹೇಳಕ್ಕಾಗಲ್ಲ. ಹಾಗೆಂದು, ಜಮ್ಮು ಕಾಶ್ಮೀರದಲ್ಲದವರಿಗೆ ನಮ್ಮ ಭೂಮಿ ಮತ್ತು ಉದ್ಯೋಗ ಹೋಗುವುದನ್ನು ನೋಡಿ ಕುಳಿತುಕೊಳ್ಳುವಂತಿಲ್ಲ ಎಂದು ಆಜಾದ್ ಹೇಳಿದ್ದಾರೆ.

370 ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್ ಮಾತ್ರ ನಿರ್ಧಾರಕ್ಕೆ ಬರಬಹುದು. ಅಥವಾ ಕೇಂದ್ರದಲ್ಲಿ ಅಧಿಕಾರ ನಡೆಸುವವರು ಮಾತ್ರ ನಿರ್ಧಾರ ಕೈಗೊಳ್ಳಬಹುದು. ಈಗಿನ ಸರಕಾರ ಕಾಯ್ದೆಯನ್ನು ರದ್ದು ಮಾಡಿದೆ. ಮುಂದೇನು ಮಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದ ಗುಲಾಂ ನಬಿ, ಮತ್ತೆ ನಾವು ಅಧಿಕಾರಕ್ಕೆ ಬಂದರೆ ಮಾತ್ರ ಈ ಬಗ್ಗೆ ಪರಿಗಣನೆ ಮಾಡಬಹುದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ನಿರೀಕ್ಷೆ ಮಾಡುವಂತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಅಂತ ಹಾರೈಸುತ್ತೇನೆ. ಆದರೆ, 300 ಸಂಸದರನ್ನು ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಅನ್ನುವುದು ಈಗಿನ ಸನ್ನಿವೇಶದಲ್ಲಿ ಕಷ್ಟಸಾಧ್ಯ ಎಂದಿದ್ದಾರೆ.

ಆದಷ್ಟು ಬೇಗ ಜಮ್ಮು ಕಾಶ್ಮೀರದಲ್ಲಿ ಅಸೆಂಬ್ಲಿ ಚುನಾವಣೆ ಮಾಡಬೇಕೆಂದು ಎಲ್ಲ ಪಾರ್ಟಿಗಳು ಕೇಂದ್ರ ಸರಕಾರವನ್ನು ಒತ್ತಾಯ ಮಾಡಬೇಕು. ಅಲ್ಲದೆ, ರಾಜ್ಯದ ಅಧಿಕಾರವನ್ನು ಮತ್ತೆ ಕೊಡಬೇಕು ಎಂದು ಆಗ್ರಹ ಮಾಡಬೇಕು ಎಂದು ಹೇಳಿದ್ದಾರೆ.

At a time the Congress is fighting questions around its leadership, its senior leader Ghulam Nabi Azad has all but declared his own party a write-off in the 2024 national election. Addressing a rally in Jammu and Kashmir on Wednesday, Ghulam Nabi Azad said he does not see the Congress winning 300 seats in the next general elections.