ಬ್ರೇಕಿಂಗ್ ನ್ಯೂಸ್
13-12-21 12:08 pm HK Desk news ದೇಶ - ವಿದೇಶ
ನವದೆಹಲಿ. ಡಿ.13 : ಸುದೀರ್ಘ 21 ವರ್ಷಗಳ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಪಟ್ಟ ಒಲಿದಿದೆ. ಚಂಡೀಗಢ ಮೂಲದ 21ರ ಹರೆಯದ ಸುಂದರಿ ಹರ್ನಾಜ್ ಕೌರ್ ಸಂಧು 70ನೇ ಮಿಸ್ ಯುನಿವರ್ಸ್ ಕಿರೀಟ ಒಲಿಸಿಕೊಂಡಿದ್ದಾರೆ.
ಈ ಹಿಂದೆ ಎರಡು ಬಾರಿ ಮಾತ್ರ ಭಾರತಕ್ಕೆ ಮಿಸ್ ಯುನಿವರ್ಸ್ ಸೌಂದರ್ಯ ಪ್ರಶಸ್ತಿ ಲಭಿಸಿತ್ತು. 1994ರಲ್ಲಿ ಸುಶ್ಮಿತಾ ಸೇನ್, ಆಬಳಿಕ 2000ನೇ ಇಸವಿಯಲ್ಲಿ ಲಾರಾ ದತ್ತಾ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
ಇಸ್ರೇಲ್ ದೇಶದ ಇಲಾಟ್ ನಲ್ಲಿ 70ನೇ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾರತ ಪರವಾಗಿ ಸ್ಪರ್ಧಿಸಿದ್ದ ರೂಪದರ್ಶಿ ಹರ್ನಾಜ್ ಕೌರ್ ಸಿಂಧು ಅವರನ್ನು ಭುವನ ಸುಂದರಿಯಾಗಿ ಘೋಷಿಸಲಾಯ್ತು. ಮೊದಲ ರನ್ನರ್ ಅಪ್ ಆಗಿ ಪರಾಗ್ವೆ ದೇಶದ 22 ವರ್ಷದ ನಾದಿಯಾ ಫೆರಾರ ಮತ್ತು ಎರಡನೇ ರನ್ನರ್ ಅಪ್ ಪ್ರಶಸ್ತಿಗೆ ದಕ್ಷಿಣ ಆಫ್ರಿಕಾದ 24 ವರ್ಷದ ಲಲೇಲಾ ಸ್ವಾನ್ ಅವರನ್ನು ಆಯ್ಕೆ ಮಾಡಲಾಯ್ತು.
ಪಂಜಾಬ್ ರಾಜ್ಯದ ಚಂಡೀಗಢ ಮೂಲದ ಮಾಡೆಲ್ ಆಗಿರುವ ಹರ್ನಾಜ್ ಕೌರ್ ಅವರನ್ನು ಕಳೆದ ಅಕ್ಟೋಬರ್ ತಿಂಗಳಲ್ಲಿ ಮಿಸ್ ಇಂಡಿಯಾ ಆಗಿ ಘೋಷಣೆ ಮಾಡಲಾಗಿತ್ತು. ಪಂಜಾಬ್ ನಟಿಯೂ ಆಗಿರುವ ಹರ್ನಾಜ್ ಕೌರ್, ಸಾರ್ವಜನಿಕ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.
The new Miss Universe is...India!!!! #MISSUNIVERSE pic.twitter.com/DTiOKzTHl4
— Miss Universe (@MissUniverse) December 13, 2021
At the Miss Universe 2021 pageant in Israel, India’s tri colour is flying high as actress and model Harnaaz Kaur Sandhu was declared the winner of the competition. Apart from Harnaaz, South Africa’s Lalela Mswane was declared the second runner-up and Paraguay’s Nadia Ferreira was the first runner up. It was the 70th edition of the prestigious annual event.
02-05-25 01:40 pm
Bangalore Correspondent
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 06:44 pm
Mangaluru HK Staff
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
Udupi crime, Attempt, Suhas Shetty Murder: ಉಡ...
02-05-25 12:44 pm
Suhas Shetty Murder, Liquor Ban: ಸುಹಾಸ್ ಶೆಟ್ಟ...
02-05-25 12:23 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm