ಬ್ರೇಕಿಂಗ್ ನ್ಯೂಸ್
13-12-21 09:19 pm HK Desk news ದೇಶ - ವಿದೇಶ
ಲಕ್ನೋ, ಡಿ.13: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಕಾಶಿಗೆ ತೆರಳಿರುವುದನ್ನು ಸಮಾಜವಾದಿ ಪಾರ್ಟಿ ಮುಖಂಡ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಜನರು ಕೊನೆಯ ದಿನಗಳಲ್ಲಿ ಮಾತ್ರ ಕಾಶಿಗೆ ಹೋಗುತ್ತಾರೆ. ಮೋದಿಯವರು ಒಂದು ತಿಂಗಳು ಅಲ್ಲ ಕನಿಷ್ಠ ಮೂರು ತಿಂಗಳಾದ್ರೂ ಅಲ್ಲಿಯೇ ಇದ್ದು ಬರಬೇಕು. ಜನರು ಅಂತಿಮ ಯಾತ್ರೆಯನ್ನು ಅಲ್ಲಿಯೇ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇಟಾವಾದಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ಇದರರ್ಥ ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತ ಅಂತಿಮ ದಿನಗಳನ್ನು ನೋಡುತ್ತಿದೆ ನನಗನಿಸುತ್ತಿದೆ ಎಂದು ಹೇಳಿದ್ದಾರೆ. ಬಿಜೆಪಿ ಜನರನ್ನು ಸುಳ್ಳು ಹೇಳಿ ಮೂರ್ಖರನ್ನಾಗಿ ಮಾಡಬಹುದು. ಆದರೆ, ದೇವರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಟಾವಾದಲ್ಲಿ ಕ್ರಿಕೆಟ್ ಸ್ಟೇಡಿಯಂ ಅಭಿವೃದ್ಧಿಗೆ ಬಿಜೆಪಿ ಸರಕಾರ ಹಣ ಕೊಡದೇ ತಾರತಮ್ಯ ಮಾಡಿದೆ. ಇದರಿಂದಾಗಿ ಇಟಾವಾದಲ್ಲಿ ಈ ಬಾರಿ ಐಪಿಎಲ್ ಪಂದ್ಯ ನಡೆಯದಂತಾಗಿದೆ. ಬಿಜೆಪಿ ಸರಕಾರ ಅನುದಾನ ನೀಡುವುದರಲ್ಲಿಯೂ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.
ಕಾಶಿ ವಿಶ್ವನಾಥ ಕಾರಿಡಾರ್ ಪ್ರಾಜೆಕ್ಟ್ ಮೊದಲು ಆರಂಭಿಸಿದ್ದು ಸಮಾಜವಾದಿ ಪಾರ್ಟಿ ಅಧಿಕಾರದಲ್ಲಿದ್ದಾಗ. ನಾವು ಆರಂಭಿಸಿದ ಕೆಲಸ ಅನ್ನುವುದಕ್ಕೆ ದಾಖಲೆ ಕೊಡಬಲ್ಲೆ. ಸಮಾಜವಾದಿ ಸರಕಾರ ಇದ್ದಾಗ ಕೋಟ್ಯಂತರ ರೂಪಾಯಿ ಅನುದಾನ ಕೊಟ್ಟು ಅಲ್ಲಿನ ಪರಿಸರದ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ಆರಂಭಿಸಲಾಗಿತ್ತು. ಈಗ ಅದನ್ನು ಬಿಜೆಪಿಯವರು ತಮ್ಮದೇ ಸಾಧನೆ ಎಂದು ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.
Samajwadi Party chief Akhilesh Yadav on Monday took a swipe at PM Narendra Modi who is on a two-day visit to Varanasi for the inauguration of the Kashi Vishwanath Corridor. He made the remark during an interaction with reporters in Uttar Pradesh's Etawah.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 10:47 pm
Mangalore Correspondent
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm