ಬ್ರೇಕಿಂಗ್ ನ್ಯೂಸ್
14-12-21 12:11 pm HK Desk news ದೇಶ - ವಿದೇಶ
ಕಾಸರಗೋಡು, ಡಿ.14 : ಕಾಸರಗೋಡು ಬ್ಲಾಕ್ ಪಂಚಾಯತ್ ಬಿಜೆಪಿ ಸದಸ್ಯೆಯೊಬ್ಬರಿಗೆ ಉಗ್ರವಾದ ಮತ್ತು ಲವ್ ಜಿಹಾದ್ ಬೆಂಬಲಿಸಿ ಬರೆದ ಕರಪತ್ರಗಳನ್ನು ಪೋಸ್ಟ್ ನಲ್ಲಿ ಕಳಿಸಲಾಗಿದ್ದು, ಆತಂಕ ವ್ಯಕ್ತವಾಗಿದೆ.
ಬದಿಯಡ್ಕ ಸಮೀಪದ ಪೆರಡಾಲ ಡಿವಿಶನ್ ಪ್ರತಿನಿಧಿಸುವ ಬಿಜೆಪಿಯ ಕೆ.ಎಂ.ಅಶ್ವಿನಿ ಅವರಿಗೆ ಈ ರೀತಿಯ ವಿಕೃತ ಪೋಸ್ಟ್ ಮಾಡಲಾಗಿದ್ದು, ಆಕೆಯ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇಂಗ್ಲಿಷ್, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬರೆದಿರುವ ಕರಪತ್ರಗಳನ್ನು ಪೋಸ್ಟ್ ಮೂಲಕ ಅಶ್ವಿನಿ ಅವರ ವಿಳಾಸಕ್ಕೆ ಕಳಿಸಲಾಗಿತ್ತು. ಅಶ್ವಿನಿ ಕರಪತ್ರಗಳನ್ನು ಬದಿಯಡ್ಕ ಠಾಣೆಗೆ ಒಪ್ಪಿಸಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಶ್ವಿನಿ ಅವರು ನೀರ್ಚಾಲು ಸಮೀಪದ ಓಣಿಯಡ್ಕ ಎಂಬಲ್ಲಿ ವಾಸವಿದ್ದಾರೆ. ಈಕೆಯ ವಿಳಾಸಕ್ಕೆ ಪೋಸ್ಟ್ ನಲ್ಲಿ ಕರಪತ್ರಗಳನ್ನು ಕಳುಹಿಸಲಾಗಿತ್ತು. ಕಳುಹಿಸಿದವರ ವಿಳಾಸ ಕುರಾನ್ ಎಜುಕೇಶನ್, ಪೋಸ್ಟ್ ಬಾಕ್ಸ್ ನಂಬರ್ 58, ಮಂಜೇರಿ, ಮಲಪ್ಪುರಂ ಎಂದು ಬರೆಯಲಾಗಿತ್ತು.
ಒಂದು ಕರಪತ್ರದಲ್ಲಿ ಭೂಮಿ ತಿರುಗುವುದನ್ನು ಹೇಗೆ ನಿಲ್ಲಿಸುವುದು ಎಂಬ ಬಗ್ಗೆ ಉಪದೇಶದ ವಾಕ್ಯಗಳಿವೆ. ತಮಿಳು, ಇಂಗ್ಲಿಷ್, ಅರೇಬಿಕ್ ಭಾಷೆಯಲ್ಲಿ ಉಗ್ರವಾದ ಮತ್ತು ಲವ್ ಜಿಹಾದ್ ಪರವಾಗಿ ಬರೆಯಲಾಗಿದೆ. ಕರಪತ್ರದ ಕೆಳಗಡೆ ಮುಹಿಯುದ್ದೀನ್ ಮೊಹಮ್ಮದ್ ಇರುಂಬುಝಿ ಎಂಬ ಹೆಸರನ್ನೂ ಬರೆಯಲಾಗಿದೆ. ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಮಂದಿಗೆ ನನ್ನ ವಿಳಾಸ ಸಿಕ್ಕಿದ್ದು ಹೇಗೆ ಎಂದು ಅಶ್ವಿನಿ ಅಚ್ಚರಿಗೆ ಒಳಗಾಗಿದ್ದಾರೆ. ಇದರ ಹಿಂದೆ ಉಗ್ರವಾದ ಬೆಂಬಲಿಸುವ ಸ್ಥಳೀಯರ ಕೈವಾಡ ಇರುವ ಶಂಕೆಯನ್ನು ಅಶ್ವಿನಿ ವ್ಯಕ್ತಪಡಿಸಿದ್ದಾರೆ.
A member of Kasargod block panchayat has received three pamphlets by post, the contents of which support t terrorism and Love Jihad. K M Ashwini from the BJP who represents Peradala division in the block panchayat received these pamphlets. She has since handed them over to the Badiadka police station. The police have registered a case and begun an investigation.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm