ಬ್ರೇಕಿಂಗ್ ನ್ಯೂಸ್
30-12-21 01:56 pm HK Desk news ದೇಶ - ವಿದೇಶ
ಭೋಪಾಲ್, ಡಿ.30 : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಅವಾಚ್ಯವಾಗಿ ನಿಂದಿಸಿ, ನಾಥುರಾಮ್ ಗೋಡ್ಸೆಯನ್ನು ವೈಭವೀಕರಿಸಿ ಹೇಳಿಕೆ ನೀಡಿದ್ದ ಹಿಂದು ಸಂತ ಕಾಳಿಚರಣ್ ಮಹಾರಾಜ್ ಸ್ವಾಮಿಯನ್ನು ಛತ್ತೀಸ್ ಗಢ ಪೊಲೀಸರು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ.
ಡಿ.25-26ರಂದು ಛತ್ತೀಸ್ ಗಢ ರಾಜಧಾನಿ ರಾಯ್ಪುರದಲ್ಲಿ ನಡೆದಿದ್ದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಕಾಳಿಚರಣ್ ಮಹಾರಾಜ್, ಭಾರತ ವಿಭಜನೆ, ಹಿಂದು- ಮುಸ್ಲಿಂ ದ್ವೇಷದ ಬಗ್ಗೆ ಮಾತನಾಡಿದ್ದರು. ಅಖಂಡ ಭಾರತವನ್ನು ವಿಭಜಿಸಿದ ಗಾಂಧೀಜಿಯನ್ನು ನಿಂದಿಸುವ ಭರದಲ್ಲಿ ನಾಥುರಾಮ್ ಗೋಡ್ಸೆ ಕೆಲಸವನ್ನು ಅಭಿನಂದಿಸುವುದಾಗಿ ಹೇಳಿದ್ದರು.
ಮಹಾರಾಜ್ ಹೇಳಿಕೆಯ ಬಗ್ಗೆ ಭಾರೀ ಆಕ್ಷೇಪ ಕೇಳಿಬಂದಿದ್ದು, ಛತ್ತೀಸ್ ಗಢ, ಮಹಾರಾಷ್ಟ್ರ ಸೇರಿದಂತೆ ಹಲವು ಕಡೆ ಪೊಲೀಸ್ ದೂರು ದಾಖಲಾಗಿದ್ದು, ಎಫ್ಐಆರ್ ಆಗಿತ್ತು. ಈ ಹಿನ್ನೆಲೆಯಲ್ಲಿ ಛತ್ತೀಸ್ ಗಢ ಪೊಲೀಸರು ಮಹಾರಾಜ್ ಬಂಧನಕ್ಕಾಗಿ ನಾಲ್ಕು ತಂಡಗಳನ್ನು ರಚಿಸಿದ್ದರು. ಎರಡು ತಂಡಗಳು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಕ್ಕೆ ಬಂದಿದ್ದವು. ಬಂಧನ ಭೀತಿಯಲ್ಲಿ ಅಡಗಿಕೊಂಡಿದ್ದ ಸ್ವಾಮಿಯ ಪತ್ತೆಗಾಗಿ ಪೊಲೀಸರು ಬೆನ್ನು ಬಿದ್ದಿದ್ದರು. ಮಧ್ಯಪ್ರದೇಶಕ್ಕೆ ಬಂದಿದ್ದ ಪೊಲೀಸರು ಇಂದು ನಸುಕಿನಲ್ಲಿ ಕಾಳಿಚರಣ್ ಮಹಾರಾಜ್ ಸ್ವಾಮಿಯನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಖಜುರಾಹೋ ಬಳಿಯಿಂದ 25 ಕಿಮೀ ದೂರದ ಬಾಗೇಶ್ವರ್ ಧಾಮ್ ಎಂಬಲ್ಲಿ ಕಾಳಿಚರಣ್ ಬಾಡಿಗೆ ಕೊಠಡಿಯಲ್ಲಿದ್ದರು. ಅಲ್ಲಿಂದ ಪೊಲೀಸರು ಇಂದು ಬೆಳಗ್ಗೆ ವಶಕ್ಕೆ ಪಡೆದಿದ್ದು, ರಾಯ್ಪುರಕ್ಕೆ ಕರೆತರಲಾಗುತ್ತಿದೆ ಎಂದು ರಾಯ್ಪುರ ಎಸ್ಪಿ ಪ್ರಶಾಂತ್ ಅಗರ್ವಾಲ್ ತಿಳಿಸಿದ್ದಾರೆ. ಛತ್ತೀಸ್ ಗಢ ಪೊಲೀಸರು ಮಧ್ಯಪ್ರದೇಶಕ್ಕೆ ಬಂದು ಕಾರ್ಯಾಚರಣೆ ನಡೆಸಿದ ವೇಳೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದ್ದೇ ಇದ್ದುದಕ್ಕೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಆಕ್ಷೇಪ ವ್ಯಕ್ತಪಡಿಸಿದ್ದು ಈ ಬಗ್ಗೆ ಛತ್ತೀಸ್ ಗಢ ಸರಕಾರದ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ದೇಶ ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ
ರಾಜಕೀಯದ ಮೂಲಕ ದೇಶವನ್ನು ಇಸ್ಲಾಮೀಕರಣ ಮಾಡಲು ಕೆಲವರು ಹೊರಟಿದ್ದಾರೆ. ಮಹಾತ್ಮ ಗಾಂಧೀಜಿಯವರು ಈ ದೇಶವನ್ನು ಮತದ ಆಧಾರದಲ್ಲಿ ವಿಭಜಿಸಿ ಹಾಳು ಮಾಡಿದ್ರು. ಅವರನ್ನು ಕೊಂದ ಗೋಡ್ಸೆಯನ್ನು ನಾನು ಅಭಿನಂದಿಸುತ್ತೇನೆ, ಸೆಲ್ಯೂಟ್ ಹೊಡೆಯುತ್ತೇನೆ ಎಂದು ಕಾಳಿಚರಣ್ ಮಹಾರಾಜ್ ಹೇಳಿಕೆ ನೀಡಿದ್ದರು. ಅಲ್ಲದೆ, ಹಿಂದು ನಾಯಕರನ್ನೇ ಜನರು ಆಯ್ಕೆ ಮಾಡಬೇಕು. ಆಮೂಲಕ ಹಿಂದು ಧರ್ಮವನ್ನು ಉಳಿಸಬೇಕು ಎಂದು ಹೇಳಿದ್ದರು. ಇದೇ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಯ್ಪುರದ ಮಾಜಿ ಮೇಯರ್ ಕೂಡ ಆಗಿರುವ ಕಾಂಗ್ರೆಸ್ ನಾಯಕ ಪ್ರಮೋದ್ ದುಬೇ, ಗಾಂಧೀಜಿಯನ್ನು ನಿಂದಿಸಿದ ಕಾಳಿಚರಣ್ ವಿರುದ್ಧ ಪೊಲೀಸ್ ದೂರು ನೀಡಿದ್ದರು.
Kalicharan Maharaj, who made derogatory remarks against Mahatma Gandhi at a Dharam Sansad, has been arrested by the Raipur Police,
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 10:47 pm
Mangalore Correspondent
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm