ಬ್ರೇಕಿಂಗ್ ನ್ಯೂಸ್
13-01-22 12:05 pm HK Desk news ದೇಶ - ವಿದೇಶ
ತಿರುವನಂತಪುರಂ, ಜ 13 : ತುರ್ತು ಪರಿಸ್ಥಿತಿಯಲ್ಲಿ ಬಳಸಲಾಗುವ ಅಂಬುಲೆನ್ಸ್ನಲ್ಲಿ ವಧು ಹಾಗೂ ವರನಿಗೆ ಪ್ರಯಾಣಿಸಲು ಅವಕಾಶ ನೀಡಿದ ಚಾಲಕ ಹಾಗೂ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮಾಲೀಕನಿಗೆ ಪೊಲೀಸರು ನೋಟಿಸಿ ಕಳುಹಿಸಿದ್ದು, ಚಾಲಕನ ಪರವಾನಗಿಯನ್ನು ರದ್ದು ಮಾಡಲಾಗಿದೆ.
ಅಂಬುಲೆನ್ಸ್ನಲ್ಲಿ ವಧು-ವರ ಪ್ರಯಾಣಿಸಿದ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಕಟ್ಟಾನಂ ಗ್ರಾಮದಲ್ಲಿ ನಡೆದಿದೆ. ಇದರ ವೀಡಿಯೋ ಕೂಡಾ ವೈರಲ್ ಆಗಿದ್ದು, ತುರ್ತು ಸೇವೆಗೆ ಬಳಸಲಾಗುವ ಅಂಬುಲೆನ್ಸ್ನಲ್ಲಿ ವಧು-ವರರು ಪ್ರಯಾಣಿಸಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದರ ಹಿನ್ನೆಲೆಯಲ್ಲಿ ಪೊಲೀಸರು ಅಂಬುಲೆನ್ಸ್ ಚಾಲಕ ಹಾಗೂ ಮಾಲೀಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಅಂಬುಲೆನ್ಸ್ ಮಾಲೀಕರ ಸಂಘ ಈ ಕೃತ್ಯದ ವಿರುದ್ಧ ದೂರು ನೀಡಿದೆ. ಅಂಬುಲೆನ್ಸ್‌ಗಳನ್ನು ಈ ರೀತಿಯಾಗಿ ಬಳಸುವುದು ಕಾನೂನು ಬಾಹಿರ ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ. ಮಾಲಕ ಹಾಗೂ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಜಿ ಪ್ರಸಾದ್ ತಿಳಿಸಿದ್ದಾರೆ.
ಆದರೆ ಅಂಬುಲೆನ್ಸ್ ಚಾಲಕ ಈ ಆರೋಪವನ್ನು ನಿರಾಕರಿಸಿದ್ದಾನೆ. ವಧು ಹಾಗೂ ವರರನ್ನು ಮುಂದಿನ ಸೀಟುಗಳಲ್ಲಿ ಮಾತ್ರವೇ ಕೂರಿಸಲಾಗಿತ್ತು. ಈ ಸಂದರ್ಭದಲ್ಲಿ ಸೈರನ್ ಆನ್ ಮಾಡಿರಲಿಲ್ಲ ಎಂದು ಚಾಲಕ ತಿಳಿಸಿದ್ದಾನೆ.
A video of a Kerala bride and groom travelling in an ambulance has gone viral. In the wake of widespread criticism, since an ambulance is an emergency service, action has been taken against the ambulance driver and owner. The incident happened in Kattanam village in Kerala’s Alappuzha district.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
25-07-26 07:32 pm
HK News Staffer
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
ನೀಟ್ ಪರೀಕ್ಷೆ ; ಮಂಗಳೂರಿನಲ್ಲೂ ಮೊಳಗಿದ ವಿದ್ಯಾರ್ಥಿ...
24-07-26 10:37 pm
Surathkal Brdige, Thokottu, Mangalore: ಸುರತ್ಕ...
23-07-26 10:27 pm
25-07-26 07:36 pm
HK News Staffer
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm
Astra Group Fraud, Lanchu Lal, Mangalore: ‘ಅಸ...
24-07-26 05:30 pm