ಬ್ರೇಕಿಂಗ್ ನ್ಯೂಸ್
18-01-22 08:43 pm HK Desk news ದೇಶ - ವಿದೇಶ
ನವದೆಹಲಿ, ಜ.18 : ಕಾಶ್ಮೀರ ಕಣಿವೆ ಮತ್ತು ನಕ್ಸಲ್ ಪೀಡಿತ ಏರಿಯಾಗಳಲ್ಲಿ ಮುಂಚೂಣಿಯಾಗಿ ನಿಂತು ನೂರಾರು ಉಗ್ರರು ಮತ್ತು ನಕ್ಸಲರನ್ನು ಕೊಂದು ಹಾಕಿದ ಪರಿಣತಿ ಇರುವ ಸಿಆರ್ ಪಿಎಫ್ ಪಡೆಯ ಕ್ವಿಕ್ ಏಕ್ಷನ್ ಟೀಮ್ ಒಂದನ್ನು ರಾಜಧಾನಿ ದೆಹಲಿಯಲ್ಲಿ ಪೂರ್ಣಾವಧಿಗೆ ನೇಮಕ ಮಾಡಲಾಗಿದೆ.
ಆತ್ಮಹತ್ಯಾ ಬಾಂಬ್ ದಾಳಿ ಅಥವಾ ಯಾವುದೇ ರೀತಿಯ ವಿಧ್ವಂಸಕ ಕೃತ್ಯದ ಸಂದರ್ಭದಲ್ಲಿ ಕ್ಷಿಪ್ರವಾಗಿ ಕಾರ್ಯ ಎಸಗಬಲ್ಲ 50 ಮಂದಿಯ ಯೋಧರ ತಂಡ ಇದರಲ್ಲಿ ಇರಲಿದ್ದಾರೆ. ಕಾಶ್ಮೀರದಲ್ಲಿ ಈ ರೀತಿಯ ಕ್ವಿಕ್ ಏಕ್ಷನ್ ಟೀಮ್ ರೆಡಿ ಮಾಡಲಾಗಿತ್ತು. ಅದೇ ರೀತಿಯ ಮತ್ತೊಂದು ತಂಡವನ್ನು ರೆಡಿ ಮಾಡಲಾಗಿದ್ದು, ರಾಜಧಾನಿ ದೆಹಲಿಗೆ ನಿಯೋಜಿಸಲಾಗಿದೆ.
ತಂಡದಲ್ಲಿ 50 ಮಂದಿ ಯುವ ಪಡೆ ಇರಲಿದ್ದು, ಪ್ರತಿ ಯೋಧರು ಅತ್ಯಾಧುನಿಕ ರೈಫಲ್ಸ್ ಮತ್ತು ರಾತ್ರಿ- ಹಗಲು ಯಾವುದೇ ಸ್ಥಿತಿಯಲ್ಲೂ ಕೆಲಸ ಮಾಡಬಲ್ಲ ಮೆಷಿನರಿಯನ್ನು ಹೊಂದಿರುತ್ತಾರೆ. ಇದರಲ್ಲಿರುವ ಕಮಾಂಡೋಗಳು ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಹಿರಿಯ ಸೇನಾಧಿಕಾರಿಗಳಿಂದ ತರಬೇತಿ ಪಡೆದವರಾಗಿದ್ದು, ಐಇಡಿ ರೀತಿಯ ಸ್ಫೋಟಕಗಳನ್ನು ನಾಶ ಮಾಡಬಲ್ಲ ಸಾಮರ್ಥ್ಯ ಹೊಂದಿರುತ್ತಾರೆ.
ಇದಲ್ಲದೆ, ಈ ಯೋಧರು ನಗರ ಪ್ರದೇಶಗಳಲ್ಲಿ ಯಾವ ರೀತಿ ಕಾರ್ಯ ನಿರತ ಆಗಬೇಕು ಮತ್ತು ಜನನಿಬಿಡ ಪ್ರದೇಶಗಳಲ್ಲಿ ದೊಡ್ಡ ಕಟ್ಟಡಗಳ ಮೇಲಿಂದ ಯಾವ ರೀತಿ ಕಾರ್ಯಾಚರಣೆ ನಡೆಸಬೇಕು ಎಂಬ ಬಗ್ಗೆಯೂ ತರಬೇತಿ ಪಡೆದಿದ್ದಾರೆ. ತಂಡದಲ್ಲಿ ಎಂಪಿ 5- ಮೆಷಿನ್ ಗನ್, ಸ್ನೈಫರ್ ರೈಫಲ್, ಲೈಟ್ ಮೆಷಿನ್ ಗನ್, ಎಕೆ-47, ಕಾರ್ನರ್ ಶಾಟ್ (ಗನ್ ಉಪಕರಣ), ಅಂಡರ್ ಬ್ಯಾರಲ್ ಗ್ರೆನೇಡ್ ಲಾಂಚರ್ಸ್ ಹೀಗೆ ಹಲವು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ. ಇದಲ್ಲದೆ, ರಾತ್ರಿ ವೇಳೆಯೂ ಕಾಣಬಲ್ಲ ನೈಟ್ ವಿಶನ್ ಗಾಗಲ್, ರಾಡಾರ್, ಸ್ಕ್ಯಾನರ್, ಶಸ್ತ್ರ ಸಜ್ಜಿತ ರೋಬೋಟ್ ಕೂಡ ಹೊಂದಿರುತ್ತಾರೆ.
ಗಣರಾಜ್ಯ ದಿನಕ್ಕೆ ದೆಹಲಿಯಲ್ಲಿ ಕಟ್ಟೆಚ್ಚರ ಘೋಷಣೆ ಮಾಡಿರುವುದರಿಂದ ಈ ಹೊಸ ತಂಡವನ್ನು ದೆಹಲಿಯ ಆಯಕಟ್ಟಿನ ಜಾಗಗಳಲ್ಲಿ ನಿಯೋಜನೆ ಮಾಡಲಾಗಿದೆ. ಇದಲ್ಲದೆ, ಸಂಸತ್ತಿನ ಆವರಣದಲ್ಲಿ ಮತ್ತು ಗಣ್ಯರ ಜೊತೆಗೆ ಹೆಚ್ಚುವರಿ ಸಿಆರ್ ಪಿಎಫ್ ಯೋಧರ ಪಡೆ ಇರಲಿದೆ. ಎನ್ಎಸ್ ಜಿ ಮಾದರಿಯಲ್ಲೇ ಮತ್ತೊಂದು ತಂಡವನ್ನು ದೆಹಲಿಗೆ ನಿಯೋಜನೆ ಮಾಡಲಾಗಿದೆ. ತಂಡದಲ್ಲಿ ಹಿಜ್ಬುಲ್ ಮುಜಾಹಿದೀನ್ ಮತ್ತು ಜೆಇಎಂ ಉಗ್ರರನ್ನು ಸದೆಬಡಿದು ವಿಶೇಷ ಪದಕ ಪಡೆದಿರುವ ಯೋಧರು ಇದ್ದಾರೆ.
Fifty handpicked commandos from the Central Reserve Police Force (CRPF), awarded for eliminating hundreds of terrorists in Kashmir and Naxals in red zones, will now be the prime responders in case of any terror or suicide attack in and around the national capital.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm