ಬ್ರೇಕಿಂಗ್ ನ್ಯೂಸ್
01-02-22 03:46 pm HK Desk news ದೇಶ - ವಿದೇಶ
ನವದೆಹಲಿ, ಫೆ.1 : ಉತ್ತರ ಪ್ರದೇಶದಲ್ಲಿ ಚುನಾವಣೆಯ ಬಿಸಿ ಏರುತ್ತಿರುವಾಗಲೇ ಐಟಿ ಅಧಿಕಾರಿಗಳು ಜಾಗೃತರಾಗಿದ್ದಾರೆ. ಉತ್ತರ ಪ್ರದೇಶದ ವಾಣಿಜ್ಯ ನಗರಿ ನೋಯ್ಡಾದಲ್ಲಿ ಮಾಜಿ ಐಪಿಎಸ್ ಅಧಿಕಾರಿಯೊಬ್ಬರಿಗೆ ಸೇರಿದ ಕಚೇರಿಯೊಂದಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಬಂಡಲ್ ಗಟ್ಟಲೆ ನಗದು ಕಂತೆಯನ್ನು ಪತ್ತೆ ಮಾಡಿದ್ದಾರೆ. ನೂರಾರು ಕೋಟಿ ರೂಪಾಯಿ ಹಣ ಅಲ್ಲಿ ಕೂಡಿ ಹಾಕಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸಮಾಜವಾದಿ ಪಾರ್ಟಿಗೆ ಹತ್ತಿರದ ಸಂಬಂಧ ಹೊಂದಿರುವ ಐಪಿಎಸ್ ಅಧಿಕಾರಿ ಎನ್ನಲಾಗುತ್ತಿದ್ದು, ಕಚೇರಿ ಕಟ್ಟಡ ಇರುವ ಬೇಸ್ ಮೆಂಟ್ ನಲ್ಲಿ 650 ಲಾಕರ್ ಗಳನ್ನು ಮಾಡಿರುವುದು ಪತ್ತೆಯಾಗಿದೆ. ಅದರಲ್ಲಿ ಎರಡು ಸಾವಿರ ಮತ್ತು ದೇಶದಲ್ಲಿ ಅಮಾನ್ಯ ಆಗಿರುವ 500 ಮುಖಬೆಲೆಯ ನೋಟುಗಳ ಕಂತೆ ಪತ್ತೆಯಾಗಿದೆ.

ಖಚಿತ ಮಾಹಿತಿ ಮೇರೆಗೆ ಭಾನುವಾರ ಸಂಜೆಯೇ ಅಧಿಕಾರಿಗಳು ಸ್ಥಳಕ್ಕೆ ದಾಳಿ ಮಾಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈವರೆಗೂ ಎಷ್ಟು ಹಣ ಪತ್ತೆಯಾಗಿದೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅದರ ಜೊತೆಗೆ ಈ ಹಣ ಯಾರಿಗೆ ಸೇರಿದ್ದು, ಅಧಿಕಾರಿಗೇ ಸೇರಿದ್ದಾದರೆ ಆತನ ಹೆಸರನ್ನೂ ಬಹಿರಂಗ ಪಡಿಸಿಲ್ಲ. ಇದೇ ವೇಳೆ, ಐಟಿ ಅಧಿಕಾರಿಗಳು ವಾರಣಾಸಿ, ಜನ್ ಪುರ್ ಸೇರಿದಂತೆ ಉತ್ತರ ಪ್ರದೇಶದ ವಿವಿಧ ಕಡೆ ದಾಳಿ ನಡೆಸಿದ್ದಾರೆ.
The sleuths of the Incom Tax (IT) Department carried out searches at the premises of a former Indian Police Service (IPS) office in Noida. The officials found unaccounted cash worth several hundred crores.
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 01:56 pm
HK News Desk
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
16-12-25 04:26 pm
Udupi Correspondent
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
Mangalore RTO Bomb: ಮಂಗಳೂರು ಆರ್ಟಿಓ ಕಚೇರಿಗೆ ಬಾ...
15-12-25 05:40 pm
Mangalore Reels, Arrest, Police: ತಲವಾರು ಹಿಡಿದ...
14-12-25 05:48 pm
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
15-12-25 10:26 pm
Mangalore Correspondent
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಪೂರೈಕೆ ; ಸಾಗಣೆ ವ...
14-12-25 11:10 pm