ಬ್ರೇಕಿಂಗ್ ನ್ಯೂಸ್
02-02-22 09:04 pm HK Desk news ದೇಶ - ವಿದೇಶ
ನೋಯ್ಡಾ, ಫೆ.2 : ಸಮಾಜವಾದಿ ಪಾರ್ಟಿ ಪ್ರಾಬಲ್ಯದ ಕನೌಜ್ ಜಿಲ್ಲೆಯ ಸುಗಂಧ ದ್ರವ್ಯಗಳ ಉತ್ಪಾದಕರಿಂದ ತೊಡಗಿದ್ದ ಐಟಿ ಅಧಿಕಾರಿಗಳ ದಾಳಿ ಕಾರ್ಯಾಚರಣೆ ನೋಯ್ಡಾದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕಚೇರಿ ವರೆಗೆ ಬಂದು ನಿಂತಿದೆ. ವಾರದ ಹಿಂದೆ ಕನೌಜ್ ನಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು ಅಲ್ಲಿನ ಜುವೆಲ್ಲರಿ ಮಾಲಕರು, ಸುಗಂಧ ದ್ರವ್ಯ ತಯಾರಕ ಕಂಪನಿಗಳ ಮಾಲೀಕರ ಮನೆಯಲ್ಲಿ ನಡುಕ ಹುಟ್ಟಿಸಿದ್ದರು.
ಇದೀಗ 1983ರ ಬ್ಯಾಚ್ ಐಪಿಎಸ್ ಅಧಿಕಾರಿ ರಾಮನಾರಾಯಣ್ ಸಿಂಗ್ ಗೆ ಸೇರಿದ ಕಚೇರಿಯ ನೆಲ ಅಂತಸ್ತಿನಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು 700ಕ್ಕೂ ಹೆಚ್ಚು ಲಾಕರ್ ಗಳನ್ನು ಪತ್ತೆ ಮಾಡಿದ್ದಾರೆ. ಅದರಲ್ಲಿ ಭಾರೀ ಪ್ರಮಾಣದ ಹಳೆ ನೋಟು ಸೇರಿದಂತೆ ಕೋಟ್ಯಂತರ ನಗದು ರಾಶಿ ಪತ್ತೆಯಾಗಿದೆ. ನಾಲ್ಕು ಮೆಷಿನ್ ತಂದಿಟ್ಟು ನೋಟು ಎಣಿಕೆ ನಡೆಯುತ್ತಿದ್ದು, 5.8 ಕೋಟಿ ಮೌಲ್ಯದ ನಗದು ಪತ್ತೆಯಾಗಿದೆ ಎಂಬ ಮಾಹಿತಿಯಿದೆ.

ಮಾನಸಂ ನೋಯ್ಡಾ ವಾಲ್ಟ್ ಹೆಸರಿನಲ್ಲಿ ಕಚೇರಿಯಿದ್ದು, ಅದನ್ನು ಆರ್.ಎನ್. ಸಿಂಗ್ 2027ರಲ್ಲಿ ಪೊಲೀಸ್ ಸೇವೆಯಿಂದ ನಿವೃತ್ತಿಯಾದ ಬಳಿಕ ಆರಂಭಿಸಿದ್ದರು. ಇದಲ್ಲದೆ, ಅಧಿಕಾರಿಯ ಮಗ ಮತ್ತು ಪತ್ನಿಯ ಹೆಸರಲ್ಲಿ ಹಲವು ಲಾಕರ್ ಗಳು ಪತ್ತೆಯಾಗಿವೆ. ಅನಾಮಧೇಯ ಹೆಸರಿನಲ್ಲಿ ಲಾಕರ್ ಗಳಿದ್ದು, 18ರಿಂದ 20 ಲಾಕರ್ ಗಳಲ್ಲಿ ನಗದು ಮತ್ತು ಚಿನ್ನಾಭರಣಗಳು ಪತ್ತೆಯಾಗಿವೆ. 2017ರಲ್ಲಿ ಆರ್.ಎನ್. ಸಿಂಗ್ ನಿವೃತ್ತಿಯಾಗಿದ್ದು, ಅದೇ ಸಂದರ್ಭದಲ್ಲಿ ಪತ್ನಿ ಹೆಸರಲ್ಲಿ ಕಚೇರಿ ತೆರೆಯಲಾಗಿತ್ತು. ಮಗನ ಹೆಸರಲ್ಲಿದ್ದ ಲಾಕರಿನಲ್ಲಿ ಅನಧಿಕೃತ ನಗದು ಪತ್ತೆಯಾಗಿದ್ದು, ಆತನಿಗೂ ರಾಜಕೀಯ ಪಕ್ಷದ ನಾಯಕರಿಗೂ ಸಂಪರ್ಕ ಇದೆಯಾ ಎನ್ನುವ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ನವಭಾರತ್ ಟೈಮ್ಸ್ ವರದಿ ಪ್ರಕಾರ, ನಗದು ಪತ್ತೆಯಾದ ಹತ್ತು ಲಾಕರ್ ಗಳು ಯಾರದ್ದೆಂದು ತಿಳಿದಿಲ್ಲ. ಸೋಮವಾರ, ಮಂಗಳವಾರ ಎರಡು ದಿನ ಪರ್ಯಂತ ನೋಟು ಎಣಿಕೆ ಮಾಡಲಾಗಿದ್ದು, ಮೂರು ಯಂತ್ರಗಳಲ್ಲಿ ನಿರಂತರ ಕೆಲಸ ಮಾಡಿದ್ದರಿಂದ ಮೆಷಿನ್ ಹ್ಯಾಂಗ್ ಆಗಿತ್ತಂತೆ. ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪೊಲೀಸ್ ಅಧಿಕಾರಿ ಆರ್.ಎನ್. ಸಿಂಗ್, ನಿವೃತ್ತಿಯ ಬಳಿಕ ಸ್ವಗ್ರಾಮಕ್ಕೆ ತೆರಳಿ ಉಳಿದುಕೊಂಡಿದ್ದೇನೆ. ನೋಯ್ಡಾದಲ್ಲಿ ಸಂಸ್ಥೆ ಆರಂಭಿಸಿದ್ದು ಅಲ್ಲಿ ಖಾಸಗಿ ಲಾಕರ್ ಸೌಲಭ್ಯ ನೀಡಲಾಗಿತ್ತು. ಅದರಲ್ಲಿ ಎರಡು ಲಾಕರ್ ನನ್ನ ಹೆಸರಲ್ಲಿತ್ತು. ಕುಟುಂಬದ ಚಿನ್ನಾಭರಣ ಬಿಟ್ಟರೆ ಅದರಲ್ಲಿ ಬೇರೇನೂ ಇರಲಿಲ್ಲ. ನಗದು ಪತ್ತೆಯಾಗಿರುವ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಕಪ್ಪು ಹಣ ವಿತರಣೆಯಾಗುವ ಮಾಹಿತಿ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿದ್ದರು. ಮೊದಲಿಗೆ ಕನೌಜ್ ಜಿಲ್ಲೆಯ ಎಸ್ಪಿ ಎಂಎಲ್ಸಿ ಪಿಯೂಷ್ ಜೈನ್ ಮತ್ತು ಪರ್ಫ್ಯೂಮ್ ತಯಾರಕ ಪುಷ್ಪರಾಜ್ ಜೈನ್ ಮನೆಯ ಮೇಲೆ ದಾಳಿ ನಡೆದಿತ್ತು.
The income tax department’s raids that began from perfume traders in Uttar Pradesh’s Kannauj has now reached Noida. This time shockingly it does not involve a businessman but a 1983 batch IPS officer of UP cadre. Officials have found Rs 5.8 crore cash kept in several private lockers, which they say, are likely to be unaccounted for.
10-04-26 03:25 pm
HK News Desk
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
10-04-26 01:26 pm
HK News Desk
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
10-04-26 12:35 pm
Dinesh Kumar, Mangaluru
Besant Evening College, BPL Cricket: ಬೆಸೆಂಟ್...
07-04-26 01:22 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm