ಬ್ರೇಕಿಂಗ್ ನ್ಯೂಸ್
18-02-22 12:01 pm HK Desk news ದೇಶ - ವಿದೇಶ
ನವದೆಹಲಿ, ಫೆ 18: ಕರ್ನಾಟಕದಲ್ಲಿ ಹಿಜಾಬ್ ವಿವಾದದ ಹಿಂದೆ ಎಸ್ಡಿಪಿಐ, ಪಿಎಫ್ಐ ಇದೆಯೆಂಬ ಆರೋಪಗಳಿವೆ. ಈ ಹಿಂದೆಯೂ ಪಿಎಫ್ಐ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕೆ ಸಾಕ್ಷ್ಯ ಲಭಿಸಿದ್ದರಿಂದ ಹಿಂದು ಸಂಘಟನೆಗಳು ಇದರ ನಿಷೇಧಕ್ಕೆ ಒತ್ತಾಯ ಮಾಡಿದ್ದರು. ಇದೀಗ ಉತ್ತರ ಭಾರತದಲ್ಲಿ ಮುಸ್ಲಿಂ ನಾಯಕರೇ, ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸುವಂತೆ ಗುಜರಾತಿನ ಸೂಫಿ ಇಸ್ಲಾಮಿಕ್ ಬೋರ್ಡ್ ಸದಸ್ಯರು ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಇಸ್ಲಾಮಿಕ್ ಬೋರ್ಡ್ ರಾಷ್ಟ್ರೀಯ ಅಧ್ಯಕ್ಷ ಮನ್ಸೂರ್ ಖಾನ್ ಮತ್ತು ರಾಷ್ಟ್ರೀಯ ವಕ್ತಾರ ಸೂಫಿ ಮೊಹಮ್ಮದ್ ಕೌಸರ್ ಹಸನ್ ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾಗೆ ಪತ್ರ ಬರೆದಿದ್ದು ದೇಶದ ಶಾಂತಿ ಸೌಹಾರ್ದಕ್ಕಾಗಿ ಪಿಎಫ್ಐ ಸಂಘಟನೆ ಮತ್ತು ಅದರ ಜೊತೆಗಿನ ಅಂಗಸಂಸ್ಥೆಗಳನ್ನು ನಿಷೇಧ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ಒಂದು ವೇಳೆ ಪಿಎಫ್ಐ ಬ್ಯಾನ್ ಮಾಡದೇ ಇದ್ದರೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಪಾಕಿಸ್ತಾನ ಮತ್ತು ಟರ್ಕಿಯ ಆಜ್ಞೆಯ ಮೇರೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ, ಪಿಎಫ್ಐ ತನ್ನ ರಾಜಕೀಯ ಪಕ್ಷ ಎಸ್ ಡಿಪಿಐ ಪರವಾಗಿ ಯುವಕರನ್ನು ಕಾರ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿದೆ. ದೇಶ ವಿರೋಧಿ ಭಾವನೆಯನ್ನು ಯುವಕರಲ್ಲಿ ತುಂಬುತ್ತಿದ್ದಾರೆ. ಪಿಎಫ್ಐ ಸೇರಿದ ಯುವಕರು, ಸಿರಿಯಾ ಮೂಲದ ಐಸಿಸ್ ಉಗ್ರವಾದಿ ಸಂಘಟನೆಗೆ ಯುವಕರನ್ನು ಸೇರ್ಪಡೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಐಸಿಸ್ ಲಿಂಕ್ ಇದೆಯೆಂದು ಸೂಫಿ ಬೋರ್ಡ್ ಜನರಲ್ ಸೆಕ್ರೆಟರಿ ಶಾ ಸಯ್ಯದ್ ಹಸನ್ ಹೇಳಿದ್ದಾರೆ.
ಪಿಎಫ್ಐ ನಾಯಕರು, ನಿಷೇಧಿತ ಅಲ್ ಖೈದಾ ಉಗ್ರವಾದಿ ಸಂಘಟನೆಗಳ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಟರ್ಕಿಯ ರೀತಿ ದೇಶದಲ್ಲಿ ಪ್ರತ್ಯೇಕತಾವಾದಿ ಪ್ರೊಪಗಾಂಡ ಬೆಳೆಸುತ್ತಿದ್ದಾರೆ. 2016 ರಲ್ಲಿ ಟರ್ಕಿಯಲ್ಲಿ ಎರ್ಡೊಗಾನ್ ಎಂಬಾತ, ಆಡಳಿತದ ವಿರುದ್ಧ ಬಂಡೆದ್ದು ಅಧಿಕಾರ ಸ್ಥಾಪಿಸಿದಾಗ ಪಿಎಫ್ಐ ನಾಯಕರು ಆತನನ್ನು ಅಭಿನಂದಿಸಿದ್ದರು. ಪಿಎಫ್ಐ ದೇಶದಲ್ಲಿ ಹಲವು ಬಾರಿ ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಲ್ಲದೆ, ಪಿಎಫ್ಐ, ಟರ್ಕಿಯ ಅಲ್ ಖೈದಾ ಬೆಂಬಲಿತ ಉಗ್ರವಾದಿ ಸಂಘಟನೆ ಐಎಚ್ ಎಚ್ ಜೊತೆಗೆ ಸಂಪರ್ಕ ಹೊಂದಿದ್ದು ಗಂಭೀರ ವಿಚಾರವಾಗಿದೆ ಎಂದು ಬೋರ್ಡ್ ಅಧ್ಯಕ್ಷ ಮನ್ಸೂರ್ ಖಾನ್ ಪತ್ರದಲ್ಲಿ ಕೇಂದ್ರ ಸರಕಾರದ ಗಮನ ಸೆಳೆದಿದ್ದಾರೆ.
ಪಿಎಫ್‌ಐ ನಿಷೇಧಕ್ಕೆ ಆಗ್ರಹ ಮಾಡಿದ್ದ ಪ್ರತಾಪ್ ಸಿಂಹ
ಬೆಂಗಳೂರಿನ ಕೆಜಿ ಹಳ್ಳಿ ಗಲಭೆಯಲ್ಲಿ ಪಿಎಫ್ಐ ಕೈವಾಡ ಕಂಡುಬಂದಿತ್ತು. ಕೆ.ಜಿ. ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ಗಲಭೆ ಸೃಷ್ಟಿಸಿ ಶಾಂತಿ ಕದಡಲು ಪಿಎಫ್ಐ ಕಾರ್ಯಕರ್ತರು ಮುಂದಾಗಿದ್ದರು. ಬೆಂಗಳೂರು ಹಿಂಸಾಚಾರದ ನಂತರ ಅವರನ್ನು ನಿಷೇಧಿಸಬೇಕಾಗಿತ್ತು. ಈಗ ಹಿಜಾಬ್ ನೆಪದಲ್ಲಿ ಕರ್ನಾಟಕದಲ್ಲಿ ವಿದ್ಯಾರ್ಥಿ ಸಮುದಾಯವನ್ನು ಪ್ರಚೋದಿಸುತ್ತಿದ್ದಾರೆ ಎಂದು ಇತ್ತೀಚೆಗೆ ಮೈಸೂರು ಸಂಸದ ಪ್ರತಾಪಸಿಂಹ ಆರೋಪ ಮಾಡಿದ್ದರು.
Under the Leadership of its National President Mansoor Khan and the National General Secretary Hasnain Baqai the Sufi Islamic Board continues its effort in campaigning against PFI in all parts of India by giving its 4 page booklet in J&K, Maharashtra, UttarPradesh, Delhi, and Telangana in its campaign for public awareness against PFI. Sufi Islamic board has been working against PDF for the last many years in trying to create awareness against the outlawed outfit.. They have made numerous representations to the Honourable President of India, The Honourable Prime Minister of India and The Honorable Home Minister of India and have made representation to various Law Enforcing Agencies in its efforts to Ban PFI Pan India.
04-05-25 02:27 pm
Bangalore Correspondent
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
Karkala Mla Sunil Kumar, Parameshwar: ಆ್ಯಂಟಿ...
03-05-25 09:38 pm
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm