ಬ್ರೇಕಿಂಗ್ ನ್ಯೂಸ್
18-02-22 05:42 pm HK Desk news ದೇಶ - ವಿದೇಶ
ನವದೆಹಲಿ, ಫೆ.18 : ಬ್ರೆಝಿಲ್ ರಾಜಧಾನಿ ರಿಯೋ ಡಿ ಜನೈರೋ ನಗರದ ಬಳಿಯ ಪೆಟ್ರೋಪೊಲಿಸ್ ಎಂಬಲ್ಲಿ ಭೀಕರ ಭೂಕುಸಿತ ಉಂಟಾಗಿದ್ದು, ನೂರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ.
ರಿಯೋ ಡಿ ಜನೈರೋ ನಗರದ ಉತ್ತರ ಭಾಗದಲ್ಲಿರುವ ಪರ್ವತ ಶಿಖರಗಳ ಮಧ್ಯೆ ಪೆಟ್ರೋಪೊಲಿಸ್ ನಗರ ಇದ್ದು, ಭಾರೀ ಮಳೆಯಿಂದಾಗಿ ಭೀಕರ ಭೂಕುಸಿತ ಉಂಟಾಗಿದೆ. ಪ್ರವಾಹದ ನೀರಿನಲ್ಲಿ ಕಾರು ಮತ್ತಿತರ ವಾಹನಗಳು ಕೊಚ್ಚಿ ಕೊಂಡು ಹೋಗಿವೆ. ಅಲ್ಲಿರುವ ಕಟ್ಟಡ, ಮನೆಗಳು ನೆಲಸಮವಾಗಿದ್ದು, ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ ಎಂದು ಬಿಬಿಸಿ ವರದಿ ಮಾಡಿದೆ.

![]()
ಸ್ಥಳದಲ್ಲಿ ಯುದ್ಧ ಸದೃಶ ಸ್ಥಿತಿ ಇದೆ, ಹಲವಾರು ಜನರು ಕೊಚ್ಚಿಕೊಂಡು ಹೋಗಿದ್ದಾರೆ. 24 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ರಿಯೋ ಡಿ ಜನೈರೋ ನಗರದ ಗವರ್ನರ್ ಹೇಳಿದ್ದಾರೆ.

![]()
ಪೆಟ್ರೋಪೊಲಿಸ್ ನಗರ ಬೇಸಗೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹೀಗಾಗಿ ಬ್ರೆಝಿಲ್ ನಲ್ಲಿ ಜನರು ಬೇಸಗೆಯಲ್ಲಿ ಈ ನಗರಕ್ಕೆ ಬಂದು ಉಳಿದುಕೊಳ್ಳುತ್ತಾರೆ. ಹೀಗಾಗಿ ಅಲ್ಲಿಗೆ ತೆರಳಿರುವ ಪ್ರವಾಸಿಗರ ಬಗ್ಗೆ ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸತತ ಮೂರು ಗಂಟೆ ಕಾಲ ಸುರಿದ ಮಳೆಗೆ ಪೆಟ್ರೋಪೊಲಿಸ್ ಪರ್ವತ ಶ್ರೇಣಿಯ ಅಲ್ಲಲ್ಲಿ ಭೂಕುಸಿತಗಳಾಗಿದ್ದು, ರಸ್ತೆಗಳೆಲ್ಲ ಕೆಸರು ನೀರಿನಿಂದ ತುಂಬಿಕೊಂಡಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆಗೂ ತೊಡಕಾಗಿದೆ ಎಂದು ವರದಿ ತಿಳಿಸಿದೆ.
At least 58 people have died after torrential rains caused catastrophic mudslides in the Brazilian state of Rio de Janeiro. The city of Petropolis bore the brunt of the damage from the floods after more than 10 inches of rain (25.8cm) fell over the mountainous region in the span of three hours on Tuesday.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm