ಬ್ರೇಕಿಂಗ್ ನ್ಯೂಸ್
24-03-22 03:48 pm HK Desk news ದೇಶ - ವಿದೇಶ
ನವದೆಹಲಿ, ಮಾ.24 : ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠದ ಮುಂದೆ ಕರ್ನಾಟಕದ ಹಿರಿಯ ವಕೀಲ ದೇವದತ್ತ ಕಾಮತ್ ಅರ್ಜಿದಾರರ ಪರವಾಗಿ ಹಾಜರಾಗಿದ್ದು ತುರ್ತು ವಿಚಾರಣೆ ಮಾಡಬೇಕೆಂಬ ಮನವಿಯನ್ನು ನ್ಯಾಯಪೀಠ ನಿರಾಕರಿಸಿದೆ. ವಾರ್ಷಿಕ ಪರೀಕ್ಷೆ ನಡೆಯುವ ಸಮಯವಾದ್ದರಿಂದ ಹಿಜಾಬ್ ಕುರಿತ ಅರ್ಜಿ ವಿಚಾರಣೆಯನ್ನು ತುರ್ತು ನಡೆಸಬೇಕೆಂದು ವಕೀಲರು ಕೋರಿದ್ದರು.
ಪರೀಕ್ಷೆಗೂ ಹಿಜಾಬ್ ಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದ್ದಲ್ಲದೆ, ತುರ್ತು ವಿಚಾರಣೆ ನಡೆಸಬೇಕಾದ ಅನಿವಾರ್ಯತೆಯನ್ನು ನಿರಾಕರಿಸಿತು. ಈ ವಿಚಾರವನ್ನು ದೊಡ್ಡದು ಮಾಡಬೇಡಿ, ನೀವು ವಿಚಾರಣೆ ನಡೆಸಲು ಕಾಯಬಹುದು ಎಂದು ನ್ಯಾಯಪೀಠ ಹೇಳಿದೆ.

ಈ ತಿಂಗಳ 28ರಿಂದ ಪರೀಕ್ಷೆ ಆರಂಭವಾಗುತ್ತದೆ, ಹಿಜಾಬ್ ಧರಿಸಿಕೊಂಡು ತರಗತಿಗೆ ಹೋದರೆ ಬಿಡುವುದಿಲ್ಲ. ಇದರಿಂದ ಶೈಕ್ಷಣಿಕ ಸಾಲಿನ ಒಂದು ವರ್ಷ ಹೆಣ್ಣು ಮಕ್ಕಳಿಗೆ ನಷ್ಟವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠದ ಮುಂದೆ ಹಿರಿಯ ನ್ಯಾಯವಾದಿ ದೇವದತ್ತ ಕಾಮತ್ ಮುಸ್ಲಿಂ ವಿದ್ಯಾರ್ಥಿನಿಯರ ಪರ ಮನವಿ ಮಾಡಿದರು.
ಆದರೆ ವಕೀಲರ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಲಿಲ್ಲ. ಕಳೆದ ಮಾರ್ಚ್ 16ರಂದು ಹೋಳಿ ಹಬ್ಬದ ರಜೆ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಹೀಗಾಗಿ ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಬಗ್ಗೆ ವಿದ್ಯಾರ್ಥಿನಿ ಪರ ವಕೀಲರು ವಿಶ್ವಾಸದಲ್ಲಿದ್ದರು.
ಮುಸ್ಲಿಂ ವಿದ್ಯಾರ್ಥಿನಿಯರ ಪರ ಅರ್ಜಿ ಸಲ್ಲಿಸಿದ್ದ ಮತ್ತೊಬ್ಬ ಹಿರಿಯ ವಕೀಲ ಸಂಜಯ್ ಹೆಗ್ಡೆ, ಈ ತಿಂಗಳಾಂತ್ಯಕ್ಕೆ ಪರೀಕ್ಷೆಗಳು ಆರಂಭವಾಗುವುದರಿಂದ ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಮುಂದೆ ಕೋರಿಕೆ ಇಟ್ಟಿದ್ದರು. ಸಂವಿಧಾನ ವಿಧಿ 25ರಡಿಯಲ್ಲಿ ಇಸ್ಲಾಂ ಧರ್ಮದಲ್ಲಿ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ನ ಪೂರ್ಣ ಪೀಠ ತೀರ್ಪು ನೀಡಿದ ನಂತರ ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮುಂದೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
The Supreme Court on Thursday said that exams have nothing to do with Hijab while hearing the mentioning of a plea seeking urgent hearing on a petition challenging the ban on sporting Hijab in educational institutes.Senior Advocate Devadatt Kamat, appearing for the petitioner mentioned his plea seeking urgent hearing on petitions challenging Karnataka High Court’s order that dismissed petitions against the ban on Hijab in educational institutions.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
25-07-26 07:32 pm
HK News Staffer
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
ನೀಟ್ ಪರೀಕ್ಷೆ ; ಮಂಗಳೂರಿನಲ್ಲೂ ಮೊಳಗಿದ ವಿದ್ಯಾರ್ಥಿ...
24-07-26 10:37 pm
Surathkal Brdige, Thokottu, Mangalore: ಸುರತ್ಕ...
23-07-26 10:27 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm