ಬ್ರೇಕಿಂಗ್ ನ್ಯೂಸ್
04-04-22 01:39 pm HK Desk news ದೇಶ - ವಿದೇಶ
ಕೊಲಂಬೋ, ಎ.4: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರು ಬೀದಿಗೆ ಇಳಿದಿದ್ದಾರೆ. ದೇಶಾದ್ಯಂತ ಜನರ ಆಕ್ರೋಶ ಹೆಚ್ಚುತ್ತಲೇ ಮಹಿಂದ್ರಾ ರಾಜಪಕ್ಸ ಸರಕಾರದ 26 ಸಚಿವರು ಸಾಮೂಹಿಕ ರಾಜಿನಾಮೆ ನೀಡಿದ್ದಾರೆ. ಭಾನುವಾರ ರಾತ್ರಿ ನಾಟಕೀಯ ಬೆಳವಣಿಗೆ ನಡೆದಿದ್ದು, ಅಧ್ಯಕ್ಷ ಮತ್ತು ಪ್ರಧಾನಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದರೂ ಅವರನ್ನು ಬಿಟ್ಟು ಸರಕಾರದ ಸಚಿವರು ದಿಢೀರ್ ರಾಜಿನಾಮೆ ನೀಡಿದ್ದು ಕುತೂಹಲ ಮೂಡಿಸಿದೆ.
ಶ್ರೀಲಂಕಾ ಸರಕಾರದಲ್ಲಿ ಅಣ್ಣ ತಮ್ಮಂದಿರು ಸೇರಿದಂತೆ ರಾಜಪಕ್ಸ ಕುಟುಂಬದವರೇ ಪ್ರಮುಖ ಹುದ್ದೆಯಲ್ಲಿದ್ದಾರೆ. ಪ್ರಧಾನಿ ಮಹೀಂದ್ರಾ ರಾಜಪಕ್ಸ ಆಗಿದ್ದರೆ, ಅವರ ಕಿರಿಯ ಸೋದರ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ. ಇವರ ಪತ್ನಿ, ಮಕ್ಕಳು ಸಚಿವ ಸ್ಥಾನ ಸೇರಿದಂತೆ ಇನ್ನಿತರ ಪ್ರಮುಖ ಹುದ್ದೆಯಲ್ಲಿದ್ದಾರೆ. ಹಿಂದಿನಿಂದಲೂ ಭ್ರಷ್ಟಾಚಾರ, ಅಧಿಕಾರ ಹಿಡಿಯುವುದಕ್ಕಾಗಿ ಜನರನ್ನು ಓಲೈಸಲು ಉಚಿತ ಯೋಜನೆಗಳನ್ನು ಪ್ರಕಟಿಸಿದ್ದು ಲಂಕನ್ನರಿಗೆ ಈಗ ಮುಳುವಾಗಿದೆ.

ಭಾನುವಾರ ದಿಢೀರ್ ಬೆಳವಣಿಗೆಯಲ್ಲಿ ಸಭಾನಾಯಕ ಹಾಗೂ ಶಿಕ್ಷಣ ಸಚಿವ ದಿನೇಶ್ ಗುಣವರ್ಧನ ನೇತೃತ್ವದಲ್ಲಿ 26 ಸಚಿವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ. ಆದರೆ ಜನರ ಆಕ್ರೋಶ ಇಡೀ ಸರಕಾರದ ಮೇಲಿದ್ದರೂ, ಪ್ರಧಾನಿ ತಮ್ಮ ಕುರ್ಚಿಗಂಟಿಕೊಂಡು ಕುಳಿತಿದ್ದಾರೆ. ಸಚಿವ ಸಂಪುಟ ಸದಸ್ಯರು ರಾಜಿನಾಮೆ ನೀಡಿರುವುದರಿಂದ ಇನ್ನು ಹೊಸ ಸಂಪುಟ ರಚಿಸುವ ಸಾಧ್ಯತೆಯಿದೆ. ಶನಿವಾರ, ಭಾನುವಾರ ದೇಶಾದ್ಯಂತ ಕರ್ಫ್ಯೂ ಹೇರಿ, ಜನರನ್ನು ಹತೋಟಿಯಲ್ಲಿಡಲು ಪ್ರಯತ್ನಿಸಿದರೂ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅಧ್ಯಕ್ಷ, ಪ್ರಧಾನಿ ಮತ್ತು ಸಚಿವರ ಮನೆ ಎದುರಿನಲ್ಲಿ ಪಕ್ಷ ಭೇದ ಮರೆತು ಜನರು ಪ್ರತಿಭಟನೆ ನಡೆಸಿದ್ದಾರೆ. ಜನರನ್ನು ಹತ್ತಿಕ್ಕಲು ಪೊಲೀಸರು ತೊಡಗಿದ್ದು, ನೂರಾರು ಮಂದಿಯನ್ನು ಬಂಧಿಸಿದ್ದಾರೆ.

ವಿಶೇಷ ಅಂದರೆ, ರಾಜಿನಾಮೆ ನೀಡಿದ ಸಚಿವರಲ್ಲಿ ಪ್ರಧಾನಿ ಮಹಿಂದ್ರಾ ರಾಜಪಕ್ಷ ಪುತ್ರ ನಮಲ್ ರಾಜಪಕ್ಷ ಕೂಡ ಸೇರಿದ್ದಾರೆ. ಸರಕಾರದ ವೈಫಲ್ಯ, ಹಣದುಬ್ಬರದಿಂದಾಗಿ ತೈಲ ಇನ್ನಿತರ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದು, ಇದರಿಂದ ಜನರು ಗ್ಯಾಸ್, ಪೆಟ್ರೋಲಿಗಾಗಿ ಸರದಿ ನಿಂತಿರುವುದು, ಅಗತ್ಯ ಸಾಮಗ್ರಿಗಳಿಗೆ ವಿಪರೀತ ಬೆಲೆ ಆಗಿರುವುದರಿಂದ ಜನರು ಸರಕಾರದ ವಿರುದ್ಧ ತೀವ್ರ ಆಕ್ರೋಶಿತರಾಗಿದ್ದಾರೆ.

ಈ ನಡುವೆ ಮಾಜಿ ಸಚಿವ ವಿಮಲ್ ವೀರವಂಸ ಲಂಕಾ ಅಧ್ಯಕ್ಷರನ್ನು ಭೇಟಿ ಮಾಡಿದ್ದು, ಲಂಕಾದ ಬಿಕ್ಕಟ್ಟನ್ನು ನಿರ್ವಹಿಸಲು ಸರಕಾರವನ್ನು ವಿಸರ್ಜಿಸಿ ತಾತ್ಕಾಲಿಕ ನೆಲೆಯಲ್ಲಿ ಸರ್ವಪಕ್ಷಗಳ ಹಂಗಾಮಿ ಸರಕಾರ ನೇಮಿಸುವಂತೆ ಸಲಹೆ ಮಾಡಿದ್ದಾರೆ. ಆದರೆ ಶ್ರೀಲಂಕಾ ಸರಕಾರ ಒಂದೇ ಕುಟುಂಬದ ಹಿಡಿತದಲ್ಲಿರುವುದರಿಂದ ಅಧಿನಾಯಕರು ತಮ್ಮ ಅಧಿಕಾರ ಬಿಟ್ಟುಕೊಡಲು ಸಿದ್ಧರಿಲ್ಲ.
People are taking to the streets after a severe financial crisis in the island nation of Sri Lanka. The resignation of the 26 ministers of the government of Mahindra Rajapaksa has led to mass resignation.
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
16-12-25 10:35 pm
Mangalore Correspondent
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am