ಬ್ರೇಕಿಂಗ್ ನ್ಯೂಸ್
26-04-22 05:02 pm Hk Desk ದೇಶ - ವಿದೇಶ
ನವದೆಹಲಿ, ಎ.26: ಜಗತ್ತಿನ ಜಾಲತಾಣ ದೈತ್ಯ, ಅತ್ಯಂತ ಪವರ್ ಫುಲ್ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂ ಆಗಿರುವ ಟ್ವಿಟರ್ ಕಂಪನಿಯನ್ನು ಜಗತ್ತಿನ ಅತಿ ಸಿರಿವಂತ ಉದ್ಯಮಿ ಅಮೆರಿಕ ಮೂಲದ ಎಲಾನ್ ಮಸ್ಕ್ ಖರೀದಿಸಿದ್ದಾನೆ. 44 ಬಿಲಿಯನ್ ಡಾಲರ್ ಅಂದರೆ, ಸರಿಸುಮಾರು 3.37 ಲಕ್ಷ ಕೋಟಿ ರೂಪಾಯಿಗೆ ಖರೀದಿ ವಹಿವಾಟು ನಡೆದಿದ್ದು, ಇದೇ ಸಂದರ್ಭದಲ್ಲಿ ಟ್ವಿಟರ್ ಭವಿಷ್ಯದ ಬಗ್ಗೆ ನಾನಾ ಊಹಾಪೋಹಗಳೂ ಎದ್ದಿವೆ. ಇದಕ್ಕೆ ಕಾರಣವಾಗಿದ್ದು ಟ್ವಿಟರ್ ಕಂಪನಿಯ ಸಿಇಓ, ಭಾರತೀಯ ಮೂಲದ ಪರಾಗ್ ಅಗರ್ವಾಲ್ ಹಂಚಿಕೊಂಡಿರುವ ಹೇಳಿಕೆಗಳು.
ಒಮ್ಮೆ ಡೀಲ್ ಕ್ಲೋಸ್ ಆದಲ್ಲಿ ಟ್ವಿಟರ್ ಪ್ಲಾಟ್ ಫಾರಂ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂದು ಹೇಳಲು ಬರುವುದಿಲ್ಲ. ಟ್ವಿಟರ್ ಭವಿಷ್ಯ ಹೇಗಿರಲಿದೆ ಎನ್ನುವುದನ್ನೂ ಹೇಳಲಾಗದು ಎಂದು ಟ್ವಿಟರ್ ಸಿಇಓ ಪರಾಗ್ ಅಗರ್ವಾಲ್ ಟ್ವೀಟ್ ಮಾಡಿದ್ದರು. ಎಲಾನ್ ಮಸ್ಕ್ ನಾಲ್ಕು ವರ್ಷಗಳ ಹಿಂದಿನಿಂದಲೂ ಟ್ವಿಟರ್ ಕಂಪನಿಯನ್ನು ಪೂರ್ತಿ ಖರೀದಿಸಲು ಅಥವಾ ಹೆಚ್ಚಿನ ಶೇರನ್ನು ಖರೀದಿಸಲು ಮುಂದಾಗಿದ್ದರು. ಆದರೆ, ಈ ರೀತಿ ಮಾಡುವುದಕ್ಕೆ ಪರಾಗ್ ಅಗರ್ವಾಲ್ ಸೇರಿದಂತೆ ಟ್ವಿಟರ್ ಕಂಪನಿಯ ಇತರ ಪ್ರಮುಖರು ಅಸಮ್ಮತಿ ವ್ಯಕ್ತಪಡಿಸಿದ್ದರು. ಆದರೆ ಕೊನೆಗೂ ಎಲಾನ್ ಮಸ್ಕ್, ಜಗತ್ತಿನ ಅತಿದೊಡ್ಡ ಜಾಲತಾಣವನ್ನು ಖರೀದಿಸಿಯೇ ಬಿಟ್ಟಿದ್ದಾನೆ. ಪರಾಗ್ ಅಗರ್ವಾಲ್, ಖರೀದಿ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಎಲಾನ್ ಮಸ್ಕ್ ಒಡೆತನದಲ್ಲಿ ಸಿಇಓ ಆಗಿ ಉಳಿಯುತ್ತಾರಾ ಇಲ್ಲವೇ ಅನ್ನುವ ಬಗ್ಗೆಯೂ ಸಂಶಯಗಳು ಎದ್ದಿವೆ.
ಕಳೆದ 2021ರ ನವೆಂಬರ್ ತಿಂಗಳಲ್ಲಿ ಟ್ವಿಟರ್ ಕಂಪನಿಯ ಸಿಇಓ ಆಗಿ ಪರಾಗ್ ಅಗರ್ವಾಲ್ ನೇಮಕವಾಗಿದ್ದರು. ಒಂದು ವರ್ಷಕ್ಕೆ 30.4 ಮಿಲಿಯನ್ ಡಾಲರ್ ವೇತನದ ಗುತ್ತಿಗೆಯಡಿ ಪರಾಗ್ ನೇಮಕಗೊಂಡಿದ್ದರು. ಪರಾಗ್ ಸಿಇಓ ಹುದ್ದೆ ಪಡೆದು ಆರು ತಿಂಗಳಷ್ಟೇ ಆಗಿರುವುದರಿಂದ ನಡುವಿನಲ್ಲಿ ತೆಗೆದು ಹಾಕಿದರೆ, ದೊಡ್ಡ ಮೊತ್ತದ ಪರಿಹಾರವನ್ನೂ ಕಂಪನಿ ಕೊಡಬೇಕಾಗುತ್ತದೆ. ಅಂದಾಜು ಪ್ರಕಾರ, ಪರಾಗ್ 42 ಮಿಲಿಯನ್ ಡಾಲರ್ ಮೊತ್ತವನ್ನು ಪರಿಹಾರ ರೂಪದಲ್ಲಿ ಪರಾಗ್ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಐ ಲವ್ ಟ್ವಿಟರ್ ಎಂದಿದ್ದ ಎಲಾನ್ ಮಸ್ಕ್
2017ರಲ್ಲಿ ಎಲಾನ್ ಮಸ್ಕ್ ತನ್ನ ಟ್ವಿಟರ್ ಖಾತೆಯಲ್ಲಿ ‘’ಐ ಲವ್ ಟ್ವಿಟರ್’’ ಎಂದು ಹೀಗೇ ಬರೆದುಕೊಂಡಿದ್ದರು. ಅವರನ್ನು ಕಿಚಾಯಿಸಲೆಂಬಂತೆ ಇನ್ನೊಬ್ಬ ಟ್ವಿಟರ್ ಬಳಕೆದಾರ, ನೀವು ಟ್ವಿಟರನ್ನೇ ಖರೀದಿ ಮಾಡಬಹುದು ಎಂದು ರಿಪ್ಲೈ ಮಾಡಿದ್ದ. ಅದಕ್ಕೆ ಎಷ್ಟಾಗುತ್ತೆ ರೇಟ್ ಎಂದು ಎಲಾನ್ ಮಸ್ಕ್ ಮರು ಪ್ರಶ್ನೆ ಹಾಕಿದ್ದರು. ಐದು ವರ್ಷಗಳ ಹಿಂದಿನ ಸಂಭಾಷಣೆಯ ಸ್ಕ್ರೀನ್ ಶಾಟ್ ಈಗ ವೈರಲ್ ಆಗಿದ್ದು, ಕಡೆಗೂ ಟ್ವೀಟರನ್ನು ಮಸ್ಕ್ ಖರೀದಿಸಿಯೇ ಬಿಟ್ಟರು ಎನ್ನುವಂತೆ ನೆಟ್ಟಿಗರು ಬರೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಮಾಡಿದ್ದ ಮೊದಲ ಟ್ವೀಟ್ 1.74 ಲಕ್ಷ ಜನರ ಲೈಕ್ಸ್ ಮತ್ತು 35 ಸಾವಿರ ಜನ ರೀ ಟ್ವೀಟ್ ಮಾಡಿದ್ದರು.
ನೀವ್ಯಾಕೆ ಟ್ವಿಟರ್ ಖರೀದಿಸಬಾರದು ?
ಕೆಲವು ವಾರಗಳ ಹಿಂದೆ ಎಲಾನ್ ಮಸ್ಕ್ ತನ್ನ ಟ್ವಿಟರ್ ಫಾಲೋವರ್ ಗಳಲ್ಲಿ ನಾನು ಹೊಸತಾಗಿ ಜಾಲತಾಣವನ್ನು ಶುರು ಮಾಡಿದರೆ ಹೇಗೆ ಎಂದು ಪ್ರಶ್ನೆ ಹಾಕಿದ್ದರು. ಅದಕ್ಕೆ ಅನುಯಾಯಿಗಳು, ನೀವು ಯಾಕೆ ಹೊಸತನ್ನು ಸ್ಟಾರ್ಟ್ ಮಾಡುತ್ತೀರಿ. ನೀವು ಟ್ವಿಟರನ್ನು ಖರೀದಿಸಿ ಎಂದು ಸಲಹೆ ಮಾಡಿದ್ದರು. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಮಸ್ಕ್, ಅದಾಗಲೇ ಟ್ವಿಟರ್ ನಲ್ಲಿ 9.2 ಶೇಕಡಾ ಷೇರು ಪಾಲನ್ನು ಹೊಂದಿರುವುದರ ಜೊತೆಗೆ ಪೂರ್ತಿ ಕಂಪನಿಯನ್ನು ತನ್ನದಾಗಿಸಲು ಮುಂದಾಗಿದ್ದರು. ಟ್ವಿಟರ್ ಕಂಪನಿ ಆರಂಭಿಸಿದ್ದ ಜಾಕ್ ಡೋರ್ಸೆ 2.5 ಷೇರು ಪಾಲನ್ನು ಮಾತ್ರ ಹೊಂದಿದ್ದರು. ಉಳಿದುದನ್ನು ಇತರ ಕಂಪನಿಗಳಿಗೆ ನೀಡಿದ್ದರು. ಎಲಾನ್ ಮಸ್ಕ್ ಕೂಡ ಟ್ವಿಟರ್ ಆಡಳಿತ ಮಂಡಳಿಯಲ್ಲಿ ಒಬ್ಬರಾಗಿದ್ದರು. ಆಡಳಿತ ಮಂಡಳಿ ಸದಸ್ಯರಾಗಿದ್ದವರು ಪೂರ್ತಿ ಕಂಪನಿಯನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ನಿಯಮದ ಬಗ್ಗೆ ಗಮನಸೆಳೆದಾಗ, ಟ್ವಿಟರ್ ಬೋರ್ಡ್ ನಿಂದ ಮಸ್ಕ್ ಹೊರಬಂದಿದ್ದರು.
ಆನಂತರ, ಪೂರ್ತಿ ಕಂಪನಿಯನ್ನು ಪ್ರತಿ ಶೇರಿಗೆ 54.20 ಡಾಲರ್ ದರದಂತೆ ಖರೀದಿಸಲು ಮುಂದಾಗಿದ್ದರು. 44 ಬಿಲಿಯನ್ ಡಾಲರ್ ಮೊತ್ತದ ಖರೀದಿ ಒಪ್ಪಂದಕ್ಕೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದು, ಕಡೆಗೂ ಪೂರ್ತಿ ಜಗತ್ತಿನ ಅತಿದೊಡ್ಡ ಜಾಲತಾಣ ಕಂಪನಿ ಅತಿ ಸಿರಿವಂತನ ಪಾಲಾಗಿದೆ. ಅಂತೂ ಟ್ವಿಟರ್ ಪೂರ್ತಿ ನಿಯಂತ್ರಣದ ಅನ್ ಲಾಕ್ ಬಟನನ್ನು ಎಲಾನ್ ಮಸ್ಕ್ ತನ್ನಲ್ಲೇ ಉಳಿಸಿಕೊಂಡಿದ್ದಾನೆ.
In one of the world’s biggest deals in the tech world, billionaire Elon Musk has taken control of Twitter. The deal will see Musk acquire the social network for approximately $44 billion with shares valued at $54.20. Musk had announced his takeover bid on April 14, calling it his ‘best and final offer’.
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 11:26 pm
Mangalore Correspondent
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm