ಬ್ರೇಕಿಂಗ್ ನ್ಯೂಸ್
27-04-22 10:25 pm HK Desk News ದೇಶ - ವಿದೇಶ
ನವದೆಹಲಿ ಎ.27: ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ 2020-21ರಲ್ಲಿ ಇಡೀ ದೇಶ ಲಾಕ್ಡೌನ್ನಿಂದ ತತ್ತರಿಸುತ್ತಿದ್ದರೆ, ಇದೇ ವೇಳೆ ಅಸುರಕ್ಷಿತ ಲೈಂಗಿಕ ಚಟುವಟಿಕೆಯಿಂದಾಗಿ ದೇಶಾದ್ಯಂತ 85,000 ಕ್ಕೂ ಹೆಚ್ಚು ಜನರು ಹೆಚ್ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂಬ ವಿಷಯ ಬೆಳಕಿಗೆ ಆರ್ಟಿಐ ಮೂಲಕ ಬಹಿರಂಗವಾಗಿದೆ.
ಲಾಕ್ಡೌನ್ ಅವಧಿಯಲ್ಲಿ ಹೆಚ್ಚು ವರದಿಯಾದ ಹೆಚ್ಐವಿ ಪ್ರಕರಣಗಳ ಪಟ್ಟಿಯಲ್ಲಿ ಮಹಾರಾಷ್ಟ್ರದಲ್ಲಿ 10,498 ಪ್ರಕರಣಗಳು ದಾಖಲಾಗುವ ಮೂಲಕ ದೇಶದಲ್ಲೇ ಅತ್ಯಧಿಕ ಕೇಸ್ ಕಂಡು ಬಂದಿವೆ. ಆಂಧ್ರಪ್ರದೇಶದಲ್ಲಿ 9,521, ಕರ್ನಾಟಕದಲ್ಲಿ 8,947 ಕೇಸ್ ದಾಖಲಾಗುವ ಮೂಲಕ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ.
ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ 3,037 ಮತ್ತು 2,757 ಜನರು ಹೆಚ್ಐವಿ ಸೋಂಕಿಗೆ ಒಳಗಾಗಿದ್ದಾರೆ. ಇದೇ ವೇಳೆ 2011-12 ರಿಂದ 2020-21 ರ 10 ವರ್ಷಗಳ ಅವಧಿಯಲ್ಲಿ ಅಸುರಕ್ಷಿತ ಲೈಂಗಿಕ ಚಟುವಟಿಕೆಯಿಂದಾಗಿ ವರದಿಯಾದ ಹೆಚ್ಐವಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಂಸ್ಥೆ ತಿಳಿಸಿದೆ.
ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ ಆರ್ಟಿಐಗೆ ಪ್ರತಿಕ್ರಿಯೆಯಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್ಎಸಿಒ) ಈ ಮಾಹಿತಿ ನೀಡಿದೆ. 2011-12ರಲ್ಲಿ 2.4 ಲಕ್ಷ ಹೆಚ್ಐವಿ ಪ್ರಕರಣಗಳು ದಾಖಲಾದರೆ, ಅದು 2019-20ರಲ್ಲಿ 1.44 ಲಕ್ಷಕ್ಕೆ ಇಳಿದಿತ್ತು. ಬಳಿಕ 2020- 21ರಲ್ಲಿ ಇದು 85,268ಕ್ಕೆ ಇಳಿಕೆಯಾಗಿದೆ.
When the entire country was locked down due to Covid-19 in 2020-21, more than 85,000 people across India got infected with HIV due to unprotected sex, reveals data under RTI Act.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm