ಬ್ರೇಕಿಂಗ್ ನ್ಯೂಸ್
01-05-22 09:30 pm HK Desk News ದೇಶ - ವಿದೇಶ
ನವದೆಹಲಿ, ಮೇ 1: ವಾಹನಗಳ ಫಾಸ್ಟ್ ಟ್ಯಾಗ್ ಕಾರಣಕ್ಕೆ ಹೆದ್ದಾರಿಯಲ್ಲಿ ಸಾಗುವ ಮಂದಿ ಬಹಳಷ್ಟು ಬಾರಿ ಸಂಕಟ ಪಟ್ಟಿರಬಹುದು. ಟೋಲ್ ಗೇಟ್ ದಾಟಿ ನೂರು ಮೀಟರ್ ಮುಂದೆ ಹೋಗಬೇಕಿದ್ದರೂ, ಪೂರ್ತಿಯಾಗಿ ಟೋಲ್ ಸುಂಕ ಕೊಡಲೇಬೇಕಲ್ಲ ಎಂದು ಮರುಕ ಪಟ್ಟಿರಬಹುದು. ಆದರೆ, ಈ ರೀತಿಯ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನೇ ತೆಗೆದು ಹಾಕಿ ಸ್ಯಾಟಲೈಟ್ ಆಧರಿತ ಹೊಸ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಭಾರತ ಸರಕಾರ ಚಿಂತನೆ ನಡೆಸಿದೆ.
ದೇಶಾದ್ಯಂತ ಸ್ಯಾಟಲೈಟ್ ಆಧರಿತ ಟೋಲ್ ವ್ಯವಸ್ಥೆ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಇದರ ಪ್ರಕಾರ, ಹೆದ್ದಾರಿಯ ಅಲ್ಲಲ್ಲಿ ಟೋಲ್ ಗೇಟ್ ಇರುವುದಿಲ್ಲ. ಬದಲಿಗೆ, ನೀವು ಎಷ್ಟು ಕಿಮೀ ದೂರಕ್ಕೆ ಹೆದ್ದಾರಿಯಲ್ಲಿ ಸಾಗುತ್ತೀರಿ ಎಂಬುದನ್ನು ಆಧರಿಸಿ ಪ್ಯಾಸ್ಟ್ ಟ್ಯಾಗ್ ನಿಂದ ಶುಲ್ಕ ಕಟ್ ಆಗುತ್ತದೆ. ಹೆಚ್ಚು ದೂರಕ್ಕೆ ಹೆದ್ದಾರಿಯಲ್ಲಿ ಸಾಗಿದರೆ ಹೆಚ್ಚು ಹಣವನ್ನು ಭರಿಸಬೇಕಾಗುತ್ತದೆ. ಕಡಿಮೆ ದೂರಕ್ಕೆ ಚಲಿಸಿದಲ್ಲಿ ಕಡಿಮೆ ಶುಲ್ಕವನ್ನೇ ಕಟ್ ಆಗುವಂತೆ ಮಾಡಲಾಗುತ್ತದೆ.
ಯುರೋಪ್ ದೇಶಗಳಲ್ಲಿ ಈ ರೀತಿಯ ಟೋಲ್ ಸಂಗ್ರಹ ವ್ಯವಸ್ಥೆ ಯಶಸ್ವಿಯಾಗಿರುವುದರಿಂದ ಭಾರತದಲ್ಲಿಯೂ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಎಕ್ಸ್ ಪ್ರೆಸ್ ಹೆದ್ದಾರಿಗಳಲ್ಲಿ ಮೊದಲಿಗೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯೋಗ ನಡೆಸಲಾಗುತ್ತಿದೆ. ಸದ್ಯ ಇರುವ ವ್ಯವಸ್ಥೆಯಲ್ಲಿ ಒಂದು ಟೋಲ್ ಗೇಟ್ ನಿಂದ ಮತ್ತೊಂದು ಟೋಲ್ ಗೇಟ್ ವರೆಗೆ ಸಂಚರಿಸಲು ಟೋಲ್ ಶುಲ್ಕವನ್ನು ತೆರಬೇಕಾಗುತ್ತದೆ. ಟೋಲ್ ಗೇಟ್ ದಾಟಿ ಕಿಮೀ ಕ್ರಮಿಸದೆ ಹೆದ್ದಾರಿ ಬದಲಿಸಿದರೂ, ಟೋಲ್ ಶುಲ್ಕವನ್ನು ಪೂರ್ತಿಯಾಗಿ ಕಟ್ಟಬೇಕಾಗುತ್ತದೆ. ಆದರೆ ಹೊಸ ವ್ಯವಸ್ಥೆಯಲ್ಲಿ ನೀವು ಎಷ್ಟು ದೂರದ ವರೆಗೆ ಟೋಲ್ ತೆರಬೇಕಾದ ರಸ್ತೆಯಲ್ಲಿ ಚಲಿಸುತ್ತೀರೋ ಅಷ್ಟಕ್ಕೆ ಮಾತ್ರ ಶುಲ್ಕ ಭರಿಸಬೇಕು. ಅಲ್ಲದೆ, ಟೋಲ್ ರಸ್ತೆಯಲ್ಲಿ ಸಾಗಿದರೂ, ಟೋಲ್ ಗೇಟ್ ಹತ್ತಿರಕ್ಕೆ ಬಂದಾಗ ಬೇರೆ ರಸ್ತೆಯ ಮೂಲಕ ತಪ್ಪಿಸಿಕೊಳ್ಳಲು ಅವಕಾಶ ಇರುವುದಿಲ್ಲ.
ಟೋಲ್ ರಸ್ತೆ ಎಂಟ್ರಿಯಾದ ಕೂಡಲೇ ಫಾಸ್ಟ್ ಟ್ಯಾಗ್ ಎಲರ್ಟ್ ಆಗಲಿದ್ದು ಆಟೊಮೆಟಿಕ್ ಆಗಿ ಶುಲ್ಕ ನೇರವಾಗಿ ಸರಕಾರಕ್ಕೆ ಸಂದಾಯ ಆಗುತ್ತದೆ. ಜರ್ಮನಿಯಲ್ಲಿ 98.8 ಶೇಕಡಾದಷ್ಟು ಸ್ಯಾಟಲೈಟ್ ವ್ಯವಸ್ಥೆಯಡಿ ಟೋಲ್ ಶುಲ್ಕ ಭರಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸ್ಯಾಟಲೈಟ್ ವ್ಯವಸ್ಥೆಯಲ್ಲಿ ಶುಲ್ಕ ಭರಿಸುವ ಹೆದ್ದಾರಿಯಲ್ಲಿ ಕನಿಷ್ಠ ಒಂದು ಕಿಮೀನಿಂದ ಎಷ್ಟು ಅಂತರಕ್ಕೆ ಸಾಗಿದರೂ, ಹಣ ತೆರಬೇಕಾಗುತ್ತದೆ. ಟೋಲ್ ಗೇಟ್ ದಾಟಲೇಬೇಕು ಅಂತೇನಿಲ್ಲ. ಹೀಗಾಗಿ ಟೋಲ್ ಗೇಟ್ ನಡುವಿನ ಅಂತರದೊಳಗೆ ಸಾಗುವ ಸ್ಥಳೀಯ ವಾಹನಗಳೂ ಶುಲ್ಕ ತೆರಬೇಕಾಗುತ್ತದೆ. ಇದರಿಂದ ಸರಕಾರಕ್ಕೆ ಟೋಲ್ ಹೆಸರಲ್ಲಿ ವಸೂಲಿಯೂ ಹೆಚ್ಚೆಚ್ಚು ಆಗಲಿದೆ.
ಸದ್ಯ ಭಾರತದಲ್ಲಿ 97 ಶೇಕಡಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಆಗಿದ್ದು, ಟೋಲ್ ಗೇಟ್ ನಲ್ಲಿ ಸೆನ್ಸಾರ್ ಮೂಲಕ ಶುಲ್ಕ ಭರಿಸುವ ವ್ಯವಸ್ಥೆ ಇದೆ. ಇದನ್ನೇ ಆಧಾರವಾಗಿಟ್ಟು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಹೊಸ ವ್ಯವಸ್ಥೆ ಜಾರಿಗೆ ತರಬೇಕಿದ್ದರೆ ಸಾರಿಗೆ ನಿಯಮದಲ್ಲಿಯೂ ಕೊಂಚ ಬದಲಾವಣೆ ಮಾಡಬೇಕಾಗುತ್ತದೆ. ದೇಶದಲ್ಲಿ 1.37 ಲಕ್ಷ ವಾಹನಗಳನ್ನು ಸ್ಯಾಟಲೈಟ್ ವ್ಯವಸ್ಥೆಯಡಿ ಪ್ರಯೋಗಕ್ಕೆ ಒಡ್ಡಲಾಗಿದ್ದು ಏನೇನು ಪ್ರತಿಕ್ರಿಯೆಗಳು ಬರುತ್ತವೆ ಅನ್ನುವ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ. ರಷ್ಯಾ ಮತ್ತು ದಕ್ಷಿಣ ಕೊರಿಯಾದ ತಜ್ಞರು ಈ ಬಗ್ಗೆ ಪ್ರಾಯೋಗಿಕ ಅಧ್ಯಯನದ ವರದಿಯನ್ನು ಶೀಘ್ರದಲ್ಲೇ ಸರಕಾರಕ್ಕೆ ನೀಡಲಿದ್ದಾರೆ. ಪ್ರಾಯೋಗಿಕ ಹಂತದಲ್ಲಿ ಸಕ್ಸಸ್ ಅನ್ನುವ ವರದಿ ಬಂದರೆ, ದೇಶಾದ್ಯಂತ ಹೊಸ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಯಿದೆ.
The pilot project of the new toll system is being tested in India. The amount of toll is charged according to the number of kilometres the vehicle travels on the highway. Due to the success of this procedure in European countries, preparations are being made to implement it in India as well.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm