ಮಹಾರಾಷ್ಟ್ರದಲ್ಲಿ ಆಜಾನ್- ಹನುಮಾನ್ ಚಾಲೀಸಾ ವಿವಾದ ; ರಾಜ್ ಠಾಕ್ರೆ ಬೆದರಿಕೆಗೆ ಬಗ್ಗಿದ ಸರಕಾರ, ಧ್ವನಿವರ್ಧಕ ತೆಗೆಸದಿದ್ದಲ್ಲಿ ಎರಡು ಪಟ್ಟು ಚಾಲೀಸಾ ಮೊಳಗಿಸಲು ಕರೆ !

04-05-22 07:26 pm       HK Desk News   ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಆಜಾನ್ ವಿರುದ್ಧದ ಹನುಮಾನ್ ಚಾಲೀಸಾ ಪಠಣದ ಕರೆ ವಿವಾದಕ್ಕೆ ತಿರುಗಿದೆ. ಆಜಾನ್ ಕೂಗುವ ಧ್ವನಿವರ್ಧಕಗಳನ್ನು ಮಸೀದಿಯಿಂದ ತೆಗೆದು ಹಾಕದೇ ಇದ್ದಲ್ಲಿ ಮಸೀದಿ ಎದುರಲ್ಲೇ ಎರಡು ಪಟ್ಟು ಹೆಚ್ಚಿನ ಶಬ್ದದಲ್ಲಿ ಹನುಮಾನ್ ಚಾಲೀಸಾ ಮೊಳಗಿಸಲು ಮಹಾರಾಷ್ಟ್ರ ನನನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಮುಂಬೈ, ಮೇ 4: ಮಹಾರಾಷ್ಟ್ರದಲ್ಲಿ ಆಜಾನ್ ವಿರುದ್ಧದ ಹನುಮಾನ್ ಚಾಲೀಸಾ ಪಠಣದ ಕರೆ ವಿವಾದಕ್ಕೆ ತಿರುಗಿದೆ. ಆಜಾನ್ ಕೂಗುವ ಧ್ವನಿವರ್ಧಕಗಳನ್ನು ಮಸೀದಿಯಿಂದ ತೆಗೆದು ಹಾಕದೇ ಇದ್ದಲ್ಲಿ ಮಸೀದಿ ಎದುರಲ್ಲೇ ಎರಡು ಪಟ್ಟು ಹೆಚ್ಚಿನ ಶಬ್ದದಲ್ಲಿ ಹನುಮಾನ್ ಚಾಲೀಸಾ ಮೊಳಗಿಸಲು ಮಹಾರಾಷ್ಟ್ರ ನನನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಮೇ 3ರೊಳಗೆ ಮಸೀದಿಯಿಂದ ಧ್ವನಿವರ್ಧಕ ತೆಗೆಸಬೇಕು, ಇಲ್ಲದಿದ್ದಲ್ಲಿ ನಮ್ಮ ಕಾರ್ಯಕರ್ತರು ಮೇ 4ರ ಬಳಿಕ ರಾಜ್ಯದಾದ್ಯಂತ ಈ ಕೆಲಸ ಮಾಡಲಿದ್ದಾರೆ ಎಂದು ಕಳೆದ ಒಂದು ತಿಂಗಳಿನಿಂದ ರಾಜ್ ಠಾಕ್ರೆ ಹೇಳಿಕೊಂಡು ಬಂದಿದ್ದಾರೆ. ಎರಡು ದಿನಗಳ ಹಿಂದೆ ಔರಂಗಾಬಾದ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ರ್ಯಾಲಿಯಲ್ಲಿ ಮತ್ತೆ ತನ್ನ ಮಾತನ್ನು ಪುನರುಚ್ಚರಿಸಿದ್ದಲ್ಲದೆ, ಮತ ಧರ್ಮದ ಕಾರಣಕ್ಕಾಗಿ ಆಜಾನ್ ಕೂಗಲು ಧ್ವನಿವರ್ಧಕ ಬಳಸುವುದಾದಲ್ಲಿ ಇದರಿಂದ ಅನಾರೋಗ್ಯ ಪೀಡಿತರಿಗೆ, ವೃದ್ಧರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಲ್ಲ ಅಂತಾದರೆ, ಅದರ ಎರಡು ಪಟ್ಟು ಶಬ್ದ ಬರುವಂತೆ ಹನುಮಾನ್ ಚಾಲೀಸಾ ಪಠಣವನ್ನು ಮೊಳಗಿಸಿದರೆ ಏನು ತೊಂದರೆಯಾಗುತ್ತದೆ ಎಂದು ಪ್ರಶ್ನೆ ಮಾಡಿದ್ದರು.

Prayagraj IG bans loudspeakers from 10pm-6am after Allahabad University VC  complains against 'loud' azaan - India News

Top 12 Popular Mosques of India: Tour My India

ಅಲ್ಲದೆ, ನವನಿರ್ಮಾಣ ಸೇನೆಯ ಕಾರ್ಯಕರ್ತರಿಗೆ ರಾಜ್ಯದೆಲ್ಲೆಡೆ ಆಜಾನ್ ಸದ್ದು ಹೆಚ್ಚಿನ ಶಬ್ದದಲ್ಲಿ ಕೇಳಿಬರುವಂತಿದ್ದರೆ, ಪೊಲೀಸರ ಅನುಮತಿ ಇಲ್ಲದೆ ಧ್ವನಿವರ್ಧಕ ಬಳಸುವುದಿದ್ದಲ್ಲಿ ಅಲ್ಲೆಲ್ಲಾ ಹನುಮಾನ್ ಚಾಲೀಸಾ ಮೊಳಗಿಸುವಂತೆ ಕರೆ ನೀಡಿದ್ದರು. ಕೋರ್ಟ್ ಆದೇಶ ಪ್ರಕಾರ, ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ. ಬಳಕೆ ಮಾಡುವುದಿದ್ದರೂ ಮಿತಿಗಿಂತ ಹೆಚ್ಚು ಡೆಸಿಬಲ್ ಇರಬಾರದು. ಆದರೆ ರಾಜ್ಯದಲ್ಲಿ ಹೆಚ್ಚಿನ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿಯನ್ನೇ ಪಡೆದಿಲ್ಲ ಎಂದು ರಾಜ್ ಠಾಕ್ರೆ ವಾಗ್ದಾಳಿ ನಡೆಸಿದ್ದರು. ರಾಜ್ ಠಾಕ್ರೆ ಪ್ರಚೋದನಾತ್ಮಕ ಮಾತಿನ ವಿಚಾರದಲ್ಲಿ ಪೊಲೀಸರು 153 ಎ ಅಡಿ ಕೋಮು ದ್ವೇಷ ಹರಡುವ ರೀತಿ ವರ್ತಿಸಿದ್ದಾರೆಂದು ಪ್ರಕರಣ ದಾಖಲಿಸಿದ್ದಾರೆ.

मंगलवार को करें हनुमान चालीसा का पाठ, बजरंगबली होंगे प्रसन्न - hanuman  chalisa reading benefits in our life neer – News18 हिंदी

ಪೊಲೀಸರ ಎಚ್ಚರಿಕೆಯ ನಡುವೆಯೂ ಬುಧವಾರ ರಾಜ್ ಠಾಕ್ರೆ ಮತ್ತೆ ಅದೇ ಮಾತುಗಳನ್ನು ಹೇಳಿದ್ದಾರೆ. ಅಲ್ಲದೆ, ಹನುಮಾನ್ ಚಾಲೀಸಾ ಮೊಳಗಿಸಲು ಯತ್ನಿಸಿದ ನವನಿರ್ಮಾಣ ಸೇನೆಯ ಕಾರ್ಯಕರ್ತರನ್ನು ವಿವಿಧೆಡೆ ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿರುವ ರಾಜ್ ಠಾಕ್ರೆ, ಪೊಲೀಸರು ನಮ್ಮ ಕಾರ್ಯಕರ್ತರನ್ನು ವಶಕ್ಕೆ ಪಡೆಯುತ್ತಾರೆ. ಯಾಕೆ, ಇವರಿಗೆ ಮಸೀದಿಗಳ ಮೇಲೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದು ಕೇವಲ ಮಸೀದಿಗೆ ಮಾತ್ರ ಅನ್ವಯ ಆಗಿರುವ ಕಾನೂನು ಅಲ್ಲ. ಹಲವು ದೇವಸ್ಥಾನ, ಮಂದಿರಗಳಲ್ಲಿಯೂ ಅನಧಿಕೃತವಾಗಿ ಧ್ವನಿವರ್ಧಕ ಬಳಸುತ್ತಿದ್ದಾರೆ. ಹೀಗಾಗಿ ಇದನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಬೇಡ. ಇದು ಧರ್ಮದ ವಿಚಾರ ಅಲ್ಲ. ಸಾಮಾಜಿಕ ನ್ಯಾಯದ ವಿಚಾರ ಎಂದು ಹೇಳಿದರು.

3 MNS activists booked for thrashing BJP worker in Maharashtra - India News

ಮಸೀದಿ ಕಾವಲಿಗೆ ಪೊಲೀಸರು

Azaan-Bhajan Row: What Does the Law Say About Use of Loudspeakers in India?

ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮಸೀದಿ ಆವರಣದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಾಶಿಕ್ ಸೇರಿದಂತೆ ವಿವಿಧ ಕಡೆ ಎಂಎನ್ಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೃಹ ಇಲಾಖೆಯ ಮಾಹಿತಿ ಪ್ರಕಾರ, ಮುಂಬೈ ನಗರದಲ್ಲಿ 1140 ಮಸೀದಿಗಳಿದ್ದು, ಈ ಪೈಕಿ 135 ಮಸೀದಿಗಳಲ್ಲಿ ಬುಧವಾರ ಧ್ವನಿವರ್ಧಕ ಬಳಕೆಯಾಗಿದೆ. ಅದರಲ್ಲಿ ಸುಪ್ರೀಂ ಕೋರ್ಟ್ ನಿಯಮ ಉಲ್ಲಂಘನೆ ಆಗಿದೆಯೇ ಎಂದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ 18 ಸಾವಿರ ಎಂಎನ್ಎಸ್ ಕಾರ್ಯಕರ್ತರು, ನಾಯಕರಿಗೆ ಪೊಲೀಸರು ಸೆಕ್ಷನ್ 149 ಅಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಕ್ರಮ ಜರುಗಿಸುವುದಾಗಿ ಹೇಳಿ ನೋಟೀಸ್ ನೀಡಿದ್ದಾರೆ.

Nautanki': Sanjay Raut says no illegal loudspeaker in Maharashtra as Raj  Thackeray presses on with his plan - India News

ಇನ್ನೊಂದೆಡೆ ರಾಜ್ ಠಾಕ್ರೆ ಈ ರೀತಿ ಬಹಿರಂಗವಾಗಿ ಬೆದರಿಕೆ ಹಾಕಲು, ರಾಜ್ಯ ಸರಕಾರಕ್ಕೆ ಗಡುವ ನೀಡುವಂತಾಗಲು ಬಿಜೆಪಿ ಬೆಂಬಲವೇ ಕಾರಣ ಎಂದು ಶಿವಸೇನೆಯ ವಕ್ತಾರ ಸಂಜಯ ರಾವುತ್ ಆರೋಪಿಸಿದ್ದಾರೆ. ಬಿಜೆಪಿ ಹಿಂದೆ ನಿಂತು ರಾಜ್ ಠಾಕ್ರೆಯನ್ನು ಛೂ ಬಿಟ್ಟಿದೆ. ಆದರೆ ಇದರಿಂದ ಯಾವುದೇ ರೀತಿಯಲ್ಲಿ ಕೆಟ್ಟ ಪರಿಣಾಮ ಆಗಿಲ್ಲ. ಕಾನೂನು ಸುವ್ಯವಸ್ಥೆ ಸಹಜವಾಗಿದೆ. ಕೋರ್ಟ್ ನಿಯಮದ ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.

ಬಾಳಾ ಠಾಕ್ರೆ ಹಳೆ ವಿಡಿಯೋ ವೈರಲ್

ಇದೇ ವೇಳೆ, ಈ ಹಿಂದೆ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ್ದ 37 ಸೆಕೆಂಡಿನ ವಿಡಿಯೋ ಒಂದನ್ನು ರಾಜ್ ಠಾಕ್ರೆ ಬಿಡುಗಡೆ ಮಾಡಿದ್ದಾರೆ. ಶಿವಸೇನೆ ಅಧಿಕಾರಕ್ಕೆ ಬಂದಲ್ಲಿ ಮಸೀದಿಯಲ್ಲಿ ಧ್ವನಿವರ್ಧಕ ಬಳಸಿ ಆಜಾನ್ ಕೂಗುವುದನ್ನು ನಿಲ್ಲಿಸುತ್ತೇವೆ, ರಸ್ತೆಯನ್ನು ಬಳಸಿ ನಮಾಜ್ ಮಾಡುವುದನ್ನೂ ನಿಲ್ಲಿಸುತ್ತೇವೆ. ಧರ್ಮದ ಹೆಸರಲ್ಲಿ ಸಮಾಜದ ಶಾಂತಿಗೆ ಧಕ್ಕೆಯಾಗುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಮರಾಠಿ ಭಾಷೆಯಲ್ಲಿ ಬಾಳ ಠಾಕ್ರೆ ಅಬ್ಬರಿಸುವ ಭಾಷಣದ ವಿಡಿಯೋ ಈಗ ವೈರಲ್ ಆಗಿದೆ.

Maharashtra Navnirman Sena President Raj Thackeray has called for the Hanuman Chalisa to be installed in Azan's auditoriums tomorrow. In a public letter, he said, "On the 4th of May, the loudspeakers will be buried in the loudspeakers.The Supreme Court has already instructed not to play azan with loudspeakers from 10 pm to 6 pm. This will affect the children, the sick, the students.