ಕೇರಳ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ಸಾಧ್ಯತೆ ; ಇಸ್ಲಾಮಿಕ್ ಮೂಲಭೂತವಾದ, ಹಿಜಾಬ್ ವಿರೋಧಿ ನಿಲುವಿಗೆ ಮನ್ನಣೆ ! 

08-05-22 12:20 pm       HK Desk News   ದೇಶ - ವಿದೇಶ

ಇಸ್ಲಾಮಿಕ್‌ ಮೂಲಭೂತವಾದ, ಹಿಜಾಬ್ ಸಂಘರ್ಷದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡಿ ಸುದ್ದಿಯಾಗಿದ್ದ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಲು ಬಿಜೆಪಿ ಚಿಂತನೆ ನಡೆಸುತ್ತಿದೆ. 

ನವದೆಹಲಿ, ಮೇ 8 : ಇಸ್ಲಾಮಿಕ್‌ ಮೂಲಭೂತವಾದ, ಹಿಜಾಬ್ ಸಂಘರ್ಷದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡಿ ಸುದ್ದಿಯಾಗಿದ್ದ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಲು ಬಿಜೆಪಿ ಚಿಂತನೆ ನಡೆಸುತ್ತಿದೆ. 

ಈ ಹಿಂದೆ 2002ರಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಅಣು ವಿಜ್ಞಾನಿ ಅಬ್ದುಲ್‌ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿ ವಿಶ್ವದ ಗಮನ ಸೆಳೆದಿದ್ದರು. ಈಗ ಅಟಲ್‌ ಅವರಂಥದ್ದೇ ನಡೆಯನ್ನು ಮೋದಿ ಅನುಸರಿಸಲು ಹೊರಟಿದ್ದಾರೆ. ಮುಸ್ಲಿಂ ನಾಯಕನನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿಸಿ ವಿರೋಧ ಪಕ್ಷಗಳನ್ನು ಕಟ್ಟಿ ಹಾಕುವ ಪ್ಲಾನ್ ಮಾಡಿದ್ದಾರೆ ಎನ್ನುವ ವರದಿಗಳಿವೆ. ಈ ಬಗ್ಗೆ ಪಕ್ಷದ ಒಳಗೆ ಹಾಗೂ ಮಿತ್ರಪಕ್ಷಗಳ ಜತೆ ಚರ್ಚಿಸಿದ ನಂತರ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ. ಜುಲೈನಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಬಿಜೆಪಿ ಮತ್ತು ಮೈತ್ರಿಕೂಟ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ಲಾನ್ ಮಾಡುತ್ತಿದ್ದರೆ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಬಿಜೆಪಿಯನ್ನು ಸೋಲಿಸಲು ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟದಲ್ಲಿದೆ. 

Hijab row brings to fore unequal rights of men and women in matters of  religion

ಮೊಹಮ್ಮದ್ ಆರಿಫ್ ಖಾನ್‌ ಮೂಲತಃ ಉತ್ತರ ಪ್ರದೇಶದವರು. ಅಷ್ಟೇ ಅಲ್ಲ ಬಿಜೆಪಿ ಹೇಳಿಕೊಂಡು ಬಂದಿರುವ ಪ್ರಗತಿಪರ ತತ್ವ, ಮುಸ್ಲಿಂ ಮೂಲಭೂತವಾದದ ವಿರುದ್ಧ ಮಾತನಾಡುವ ಪ್ರಮುಖ ಮುಸ್ಲಿಂ ನಾಯಕ. ಹೀಗಾಗಿ ತನ್ನ ತತ್ವ ಸಿದ್ಧಾಂತಕ್ಕೆ ಪರವಾಗಿರುವ ಖಾನ್‌ರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡುವ ಇರಾದೆ ಬಿಜೆಪಿ ನಾಯಕರಿಗೆ ಇದೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ  ಚೌಧರಿ ಚರಣಸಿಂಗ್‌ರ ಭಾರತೀಯ ಕ್ರಾಂತಿದಳ, ಕಾಂಗ್ರೆಸ್‌, ಜನತಾದಳ ಹಾಗೂ ಬಿಎಸ್‌ಪಿಯಲ್ಲಿದ್ದ ಖಾನ್, ರಾಜೀವ್‌ ಗಾಂಧಿ ಹಾಗೂ ವಿ.ಪಿ. ಸಿಂಗ್‌ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. 2004ರಲ್ಲಿ ಬಿಜೆಪಿ ಸೇರಿ 2007ರಲ್ಲಿ ಬಿಟ್ಟಿದ್ದರು. 2014ರಲ್ಲಿ ಮೋದಿ ಪ್ರಧಾನಿ ಆದ ನಂತರ ಪುನಃ ಬಿಜೆಪಿ ಸೇರಿದ್ದರು. ತ್ರಿವಳಿ ತಲಾಖ್‌ ಹಾಗೂ ಹಿಜಾಬ್‌ಗಳನ್ನು ಗಟ್ಟಿದನಿಯಲ್ಲಿ ವಿರೋಧಿಸಿದ್ದು ಬಿಜೆಪಿ ಆಡಳಿತದಲ್ಲಿ ರಾಜ್ಯಪಾಲ ಹುದ್ದೆ ಗಿಟ್ಟಿಸಿಕೊಂಡಿದ್ದರು.

Speculations are increasing in political circles in Kerala that Governor Arif Mohammed Khan’s name is being considered for the post of Vice President. The 70-year-old Khan was appointed as Governor in September 2019, but in recent times, he has been making several visits to Delhi, more often than before, giving rise to the speculations.