ಬ್ರೇಕಿಂಗ್ ನ್ಯೂಸ್
13-05-22 01:20 pm HK Desk News ದೇಶ - ವಿದೇಶ
ನವದೆಹಲಿ, ಮೇ 13 : 'ಮೋದಿ ಜೀ, ನೀವು ಎರಡು ಅವಧಿಗೆ ಪ್ರಧಾನಿಯಾದರೆ ಸಾಕು' ಎಂಬುದಾಗಿ ನನ್ನನ್ನು ಭೇಟಿಯಾದ ಪ್ರತಿಪಕ್ಷದ ನಾಯಕರೊಬ್ಬರು ಹೇಳಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.
ವಿಧವೆಯರು, ವೃದ್ಧರು ಹಾಗೂ ನಿರ್ಗತಿಕ ನಾಗರಿಕರಿಗೆ ಹಣಕಾಸು ನೆರವು ನೀಡಲು ಗುಜರಾತ್ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಫಲಾನುಭವಿಗಳ ಜೊತೆ ವಿಡಿಯೋ ಸಂವಾದದಲ್ಲಿ ಮೋದಿ ಈ ಮಾತುಗಳನ್ನಾಡಿದ್ದಾರೆ.
ಒಂದು ದಿನ ಒಬ್ಬ ಅತಿದೊಡ್ಡ ನಾಯಕರು ನನ್ನನ್ನು ಭೇಟಿಯಾಗಿದ್ದರು. ಅವರು ರಾಜಕೀಯವಾಗಿ ನಮ್ಮನ್ನು ಸದಾ ವಿರೋಧಿಸುತ್ತಿರುವವರು. ಆದರೆ ನಾನು ಅವರನ್ನು ಗೌರವಿಸುತ್ತೇನೆ. ಅವರು ಕೆಲವು ವಿಷಯಗಳ ಬಗ್ಗೆ ಸಂತುಷ್ಟರಾಗಿರಲಿಲ್ಲ. ಹೀಗಾಗಿ ಅವರು ನನ್ನನ್ನು ಭೇಟಿಯಾಗಲು ಬಂದಿದ್ದರು ಎಂದು ಮೋದಿ ಹೇಳಿದ್ದಾರೆ.
'ಅವರು ನನ್ನ ಬಳಿ, ಮೋದಿ ಜೀ, ದೇಶವು ಎರಡು ಬಾರಿ ನಿಮ್ಮನ್ನು ಪ್ರಧಾನಿಯನ್ನಾಗಿ ಮಾಡಿದೆ. ಇದಕ್ಕಿಂತ ಹೆಚ್ಚು ನೀವೇನು ಬಯಸುತ್ತೀರಿ ಎಂದು ಕೇಳಿದ್ದರು. ಒಬ್ಬರು ಎರಡು ಬಾರಿ ಪ್ರಧಾನಿಯಾದರೆ ಎಲ್ಲವನ್ನೂ ಸಾಧಿಸಿದಂತಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
'ಆದರೆ, ಮೋದಿ ವಿಭಿನ್ನ ಗುಣಗಳಿಂದ ರೂಪಿಸಲ್ಪಟ್ಟವರು ಎಂಬುದು ಅವರಿಗೆ ತಿಳಿದಿರಲಿಲ್ಲ. ಮೋದಿಯನ್ನು ಗುಜರಾತ್ ರೂಪಿಸಿದೆ. ಹೀಗಾಗಿ ನಾನು ಯಾವುದನ್ನೂ ಹಗುರವಾಗಿ ಪರಿಗಣಿಸುವುದಿಲ್ಲ. ಏನಾಗಿದೆಯೋ ಅದೆಲ್ಲ ಆಗಿಹೋಗಿದೆ. ಈಗ ನಾನು ವಿಶ್ರಾಂತಿ ಪಡೆಯಬೇಕೇ? ಇಲ್ಲ. ಕಲ್ಯಾಣ ಯೋಜನೆಗಳ ಶೇ 100ರಷ್ಟು ಜಾರಿಯೇ ನನ್ನ ಮುಂದಿರುವ ಗುರಿ' ಎಂದು ಮೋದಿ ಹೇಳಿದ್ದಾರೆ.
ಆದರೆ ಹೀಗೆ ಹೇಳಿರುವ ಪ್ರತಿಪಕ್ಷದ ನಾಯಕ ಯಾರು ಎಂಬುದನ್ನು ಮೋದಿ ಬಹಿರಂಗಪಡಿಸಿಲ್ಲ. ಕಳೆದ ತಿಂಗಳು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ದೆಹಲಿಯಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ಕೇಂದ್ರದ ತನಿಖಾ ಸಂಸ್ಥೆಗಳು ಶಿವಸೇನಾ ಸಂಸದ ಸಂಜಯ್ ರಾವತ್ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಕ್ರಮ ಕೈಗೊಂಡಿರುವುದನ್ನು ಪ್ರಶ್ನಿಸಿದ್ದರು.
Prime Minister Narendra Modi asserted on Thursday that he has no intention of slowing down while recalling an opposition leader's observation that becoming PM twice was enough accomplishment. PM Modi was addressing via video link beneficiaries of Gujarat government's financial assistance schemes for widows, elderly and destitute citizens."One day a very big leader met me. He regularly opposes us politically, but I respect him.
02-05-26 04:48 pm
HK News Staffer
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm