ವಿವಾದಿತ ಗ್ಯಾನವಾಪಿ ಮಸೀದಿಯಲ್ಲಿ ಅಂತೂ ಮುಗಿದ ವಿಡಿಯೋ ಸರ್ವೆ ; ಮಸೀದಿ ಒಳಗಿನ ಕೆರೆಯಲ್ಲಿ ಶಿವಲಿಂಗ ಪತ್ತೆ, ಆವರಣದಲ್ಲಿ ಸಿಆರ್ ಪಿಎಫ್ ಭದ್ರತೆ

16-05-22 05:20 pm       HK Desk News   ದೇಶ - ವಿದೇಶ

ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ವಿವಾದಿತ ಗ್ಯಾನವಾಪಿ ಮಸೀದಿಯಲ್ಲಿ ಸರ್ವೆ ಕಾರ್ಯ ಎರಡೇ ದಿನದಲ್ಲಿ ಮುಗಿದಿದ್ದು, ಮಸೀದಿ ಒಳಗೆ ನಮಾಜ್ ನಡೆಸುವುದಕ್ಕೂ ಮೊದಲು ಕಾಲ್ತೊಳೆಯಲು ಬಳಸುವ ಕೆರೆಯಲ್ಲಿ ಶಿವಲಿಂಗ ಪತ್ತೆಯಾಗಿದೆ.

ಲಕ್ನೋ, ಮೇ 16: ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ವಿವಾದಿತ ಗ್ಯಾನವಾಪಿ ಮಸೀದಿಯಲ್ಲಿ ಸರ್ವೆ ಕಾರ್ಯ ಎರಡೇ ದಿನದಲ್ಲಿ ಮುಗಿದಿದ್ದು, ಮಸೀದಿ ಒಳಗೆ ನಮಾಜ್ ನಡೆಸುವುದಕ್ಕೂ ಮೊದಲು ಕಾಲ್ತೊಳೆಯಲು ಬಳಸುವ ಕೆರೆಯಲ್ಲಿ ಶಿವಲಿಂಗ ಪತ್ತೆಯಾಗಿದೆ. ಈ ವಿಷಯವನ್ನು ಸರ್ವೆ ಕಾರ್ಯ ಸಂದರ್ಭದಲ್ಲಿ ಜೊತೆಗಿದ್ದ ಕೋರ್ಟ್ ಮೆಟ್ಟಿಲೇರಿದ್ದ ಹಿಂದು ಪರ ವಕೀಲರಾದ ವಿಷ್ಣು ಶರ್ಮ ಮತ್ತು ಮದನ್ ಮೋಹನ್ ಯಾದವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಶಿವಲಿಂಗವು ಎಂಟು ಇಂಚು ವ್ಯಾಸ ಮತ್ತು 12 ಫೀಟ್ ಎತ್ತರವನ್ನು ಹೊಂದಿದ್ದು ನಂದಿ ಮುಖವನ್ನು ಹೋಲುವಂತಿದೆ ಎಂದು ವಕೀಲ ಮದನ್ ಮೋಹನ್ ಯಾದವ್ ಆಜ್ ತಕ್ ಟಿವಿಗೆ ತಿಳಿಸಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಭಾರೀ ವಿರೋಧದ ನಡುವೆ ಸಂಪೂರ್ಣ ವಿಡಿಯೋ ಚಿತ್ರೀಕರಣದೊಂದಿಗೆ ಮೇ 15ರಂದು ಸರ್ವೆ ಕಾರ್ಯ ನಡೆದಿತ್ತು. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮಸೀದಿಯ 65 ಶೇಕಡಾ ಭಾಗದಲ್ಲಿ ಸರ್ವೆ ಕಾರ್ಯ ನಡೆದಿತ್ತು. ನಾಲ್ಕು ಮುಚ್ಚಿದ ಕೋಣೆಗಳನ್ನು ಒಡೆದು ಸರ್ವೆ ಕಾರ್ಯ ನಡೆಸಲಾಗಿತ್ತು. ನಮಾಜ್ ನಡೆಸುತ್ತಿದ್ದ ಗುಂಬಜ್ ಒಳಗಡೆಯೂ ವಿಡಿಯೋ ಚಿತ್ರೀಕರಣದೊಂದಿಗೆ ಸರ್ವೆ ಕಾರ್ಯ ನಡೆಸಲಾಗಿತ್ತು. ಆದರೆ ಮಸೀದಿ ಒಳಗೆ ವಿಡಿಯೋ ಚಿತ್ರೀಕರಿಸಿ ಸಮೀಕ್ಷೆ ನಡೆಸುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.

Gyanvapi survey: Shivling found in the well says lawyer from Hindu side

ಮೇ 16ರ ಸೋಮವಾರ ಉಳಿದ ಭಾಗದಲ್ಲಿ ಸರ್ವೆ ಕಾರ್ಯ ನಡೆಸಲಾಗಿದ್ದು ಇಂದು ಬೆಳಗ್ಗೆ ನೀರಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನುವ ಸುದ್ದಿ ಹಬ್ಬಿದೆ. ಮಸೀದಿಯ ಪಶ್ಚಿಮ ಭಾಗದಲ್ಲಿ ದೇಗುಲದ ಕುರುಹುಗಳು, ಹೊರಭಾಗದಲ್ಲಿ ಶೃಂಗಾರ ಗೌರಿಯ ವಿಗ್ರಹಗಳಿವೆ. ಹೀಗಾಗಿ ದೆಹಲಿಯ ಐದು ಮಂದಿ ಮಹಿಳೆಯರು 2021ರ ಎಪ್ರಿಲ್ ನಲ್ಲಿ ಮಸೀದಿ ಹೊರಭಾಗದಿಂದ ಶೃಂಗಾರ ಗೌರಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ ವಾರಣಾಸಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಹೀಗೆ ಆರಂಭಗೊಂಡಿದ್ದ ವಿವಾದ ಆನಂತರ ಹಿಂದುಗಳ ಎಂಟ್ರಿಯೊಂದಿಗೆ ಸರ್ವೆ ಕಾರ್ಯಕ್ಕೆ ಅನುಮತಿ ಕೇಳುವಂತಾಗಿತ್ತು. ವಾರಣಾಸಿ ಕೋರ್ಟ್ ಸಂಪೂರ್ಣ ವಿಡಿಯೋ ಚಿತ್ರೀಕರಣದೊಂದಿಗೆ ಸರ್ವೆ ಕಾರ್ಯ ನಡೆಸುವಂತೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳಿಗೆ ಆದೇಶ ಮಾಡಿತ್ತು.

Gyanvapi Mosque survey: 'Shivling' found inside well says lawyer - Oneindia  News

ಮೊದಲಿಗೆ ಸರ್ವೆ ಕಾರ್ಯಕ್ಕೆ ಸ್ಥಳೀಯ ಮುಸ್ಲಿಮರು ಅವಕಾಶ ನೀಡಿರಲಿಲ್ಲ. ಕೊನೆಗೆ ಹೆಚ್ಚುವರಿ ಭದ್ರತೆಯೊಂದಿಗೆ ಸರ್ವೆ ಕಾರ್ಯ ನಡೆಸಲು ಜಿಲ್ಲಾಡಳಿತಕ್ಕೆ ಕೋರ್ಟ್ ಸೂಚಿಸಿತ್ತು. ಅದರಂತೆ ಮೇ 15, 16, 17ರಂದು ಸರ್ವೆ ಕಾರ್ಯ ನಡೆಸಲು ಮಸೀದಿ ಕಮಿಟಿಯ ಒಪ್ಪಿಗೆಯೊಂದಿಗೆ ದಿನಾಂಕ ನಿಗದಿಯಾಗಿತ್ತು. ಈಗ ಎರಡೇ ದಿನದಲ್ಲಿ ಸಮೀಕ್ಷೆ ಮುಗಿದಿದ್ದು, 17ರಂದು ಕೋರ್ಟಿಗೆ ವಿಡಿಯೋ ಸಹಿತ ವರದಿಯನ್ನು ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಸರ್ವೆ ಕಾರ್ಯಕ್ಕೆ ತಡೆಯಾಜ್ಞೆ ನೀಡಿ, ಯಥಾಸ್ಥಿತಿ ಕಾಪಾಡಬೇಕೆಂಬ ಇಂತಜಾಮಿಯಾ ಮಸೀದಿ ಕಮಿಟಿ ಸಲ್ಲಿಸಿದ್ದ ಅರ್ಜಿಗೆ ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಮಸೀದಿ ಒಳಗೆ ಸರ್ವೆ ಕಾರ್ಯ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ್ದು ಮೇ 17ರಂದು ಅಹವಾಲು ಕೇಳುವ ಸಾಧ್ಯತೆಯಿದೆ.

Gyanvapi Masjid survey over; Shivling found in well, says lawyer - India  News

ಶಿವಲಿಂಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಸೀದಿ ಒಳಗಿನ ಕೆರೆ ಇರುವ ಜಾಗವನ್ನು ಸೀಲ್ ಮಾಡಲಾಗಿದೆ. ಯಾರು ಕೂಡ ಆ ಜಾಗಕ್ಕೆ ಹೋಗಬಾರದು ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಮುಸ್ಲಿಂ ಪರ ವಕೀಲರು, ನಮಗೆ ನಮಾಜ್ ಮಾಡಬಾರದು ಎಂದೇನೂ ಜಿಲ್ಲಾಡಳಿತ ಆದೇಶ ಮಾಡಿಲ್ಲ. ನಾವು ನಮ್ಮ ಕರ್ತವ್ಯ ಮಾಡುತ್ತೇವೆ ಎಂದಿದ್ದಾರೆ. ಮಸೀದಿ ಒಳಗೆ ಮತ್ತು ಹೊರಗೆ ಸಿಆರ್ ಪಿಎಫ್ ಭದ್ರತೆಯನ್ನು ಏರ್ಪಡಿಸಲಾಗಿದೆ. ರಾಮ ಜನ್ಮಭೂಮಿಯ ಬಳಿಕ ಗ್ಯಾನವಾಪಿ ಮಸೀದಿ ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸರ್ವೆ ಕಾರ್ಯ ಸಂದರ್ಭದಲ್ಲಿ ಕೋರ್ಟ್ ನೇಮಕ ಮಾಡಿರುವ ಆಯುಕ್ತರು, ಎರಡೂ ಕಡೆಯ ವಕೀಲರು, ಪೊಲೀಸ್ ಪ್ರಮುಖರು ಮತ್ತು ಜಿಲ್ಲಾಧಿಕಾರಿ ಉಪಸ್ಥಿತರಿದ್ದರು.

The court-mandated videography survey of the Gyanvapi Masjid complex was completed today, May 16. Nearly 65 per cent of the exercise was completed yesterday. Lawyer Vishnu Jain told Aaj Tak/India Today TV over the phone, that a shivling was found inside the well. He said he would go to civil court to seek its protection.