ಬ್ರೇಕಿಂಗ್ ನ್ಯೂಸ್
18-05-22 09:58 pm HK News Desk ದೇಶ - ವಿದೇಶ
ನವದೆಹಲಿ, ಮೇ 18: ಮಾಜಿ ಪ್ರಧಾನಿ ರಾಜೀವ ಗಾಂಧಿ ಹತ್ಯೆಯಲ್ಲಿ ಆರೋಪಿಯಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎಜಿ ಪೆರಾರಿವಾಲನ್ ಗೆ ಸುಪ್ರೀಂ ಕೋರ್ಟ್ ಕೊನೆಗೂ ಬಿಡುಗಡೆಯ ಭಾಗ್ಯ ನೀಡಿದೆ. 2018ರಲ್ಲಿ ತಮಿಳುನಾಡು ಸರಕಾರ ಪೆರಾರಿವಾಲನ್ ಬಿಡುಗಡೆಗಾಗಿ ನಿರ್ಣಯ ಕೈಗೊಂಡು ರಾಜ್ಯಪಾಲರ ಮೂಲಕ ಕೇಂದ್ರಕ್ಕೆ ಒತ್ತಡ ಹಾಕಿತ್ತು.
ಪೆರಾರಿವಾಲನ್ ಬಿಡುಗಡೆಯನ್ನು ಸ್ವಾಗತಿಸಿರುವ ತಮಿಳುನಾಡು ಸಿಎಂ ಸ್ಟಾಲಿನ್, ಮೂರು ದಶಕದ ತಾಯಿಯ ಹೋರಾಟಕ್ಕೆ ಸಂದ ಜಯ. ಕೋರ್ಟಿನ ಈ ತೀರ್ಪು ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಹೇಳಿದ್ದಾರೆ. ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್ ಗವಾಯಿ ಅವರಿದ್ದ ದ್ವಿಸದಸ್ಯ ಪೀಠವು ಸಂವಿಧಾನದ 142ನೇ ವಿಧಿಯಡಿ ಪ್ರದತ್ತವಾಗಿರುವ ವಿಶೇಷಾಧಿಕಾರ ಬಳಸಿ ಕೈದಿಯನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಿದೆ. ಈ ವಿಧಿಯಡಿ ಕೈದಿಯು ಶಿಕ್ಷೆ ಪೂರೈಸಿದ ಬಗ್ಗೆ ಕೋರ್ಟಿಗೆ ತೀರ್ಪು ನೀಡಲು ಅವಕಾಶ ನೀಡುತ್ತದೆ.
1991ರಲ್ಲಿ ರಾಜೀವ ಗಾಂಧಿಯ ಹತ್ಯೆ ನಡೆದಿದ್ದಾಗ ಪೆರಾರಿವಾಲನ್ ಕೇವಲ 19 ವರ್ಷದ ಹುಡುಗನಾಗಿದ್ದ. ಗಾಂಧಿ ಹತ್ಯೆಗೆ ಬಳಸಿದ್ದ ಬಾಂಬ್ ನಲ್ಲಿ ಬಳಸಿದ್ದ ಬ್ಯಾಟರಿಯನ್ನು ಪೆರಾರಿವಾಲನ್ ತಂದುಕೊಟ್ಟಿದ್ದ. ಎರಡು 9 ವೋಲ್ಟ್ ಬ್ಯಾಟರಿಯನ್ನು ಪೆರಾರಿವಾಲನ್ ಅಂಗಡಿಯಿಂದ ಖರೀದಿಸಿ ಆರೋಪಿಗಳಿಗೆ ತಂದುಕೊಟ್ಟಿದ್ದ ಎನ್ನುವ ಆರೋಪ ಇತ್ತು. 1998ರಲ್ಲಿ ಟಾಡಾ ನ್ಯಾಯಾಲಯ ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ, ಗಲ್ಲು ಶಿಕ್ಷೆ ಪ್ರಕಟಿಸಿತ್ತು. ಆನಂತರ ಸುಪ್ರೀಂ ಕೋರ್ಟ್ ಕೂಡ ಆರೋಪಿಗಳ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
2014ರಲ್ಲಿ ಪೆರಾರಿವಾಲನ್ ಮತ್ತು ಆರು ಮಂದಿಯ ಶಿಕ್ಷೆಯನ್ನು ಜೀವಿತಾವಧಿಗೆ ಇಳಿಕೆ ಮಾಡಲಾಗಿತ್ತು. ಈ ನಡುವೆ, ಪೆರಾರಿವಾಲನ್ ಬಿಡುಗಡೆಗಾಗಿ ಆತನ ತಾಯಿ ತಮಿಳುನಾಡು ಸರಕಾರದ ಮೂಲಕ ಒತ್ತಡ ಹೇರುತ್ತಲೇ ಬಂದಿದ್ದರು. 2018ರಲ್ಲಿ ತಮಿಳುನಾಡು ಸಂಪುಟದಲ್ಲಿ ಪೆರಾರಿವಾಲನ್ ಬಿಡುಗಡೆಗಾಗಿ ನಿರ್ಣಯ ಕೈಗೊಂಡಿತ್ತು. ಅದನ್ನು ತಾಯಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಸುಪ್ರೀಂ ಕೋರ್ಟ್ ಗಮನಕ್ಕೂ ತರಲಾಗಿತ್ತು. ಇದರ ನಡುವೆ ಪೆರೋಲ್ ಮೇಲೆ ಜೈಲಿನಿಂದ ಹೊರಬಂದು ಮತ್ತೆ ಜೈಲಿಗೆ ಯಥಾಸ್ಥಿತಿ ಬರುತ್ತಿದ್ದ ಪೆರಾರಿವಾಲನ್ ಬಗ್ಗೆ ಜೈಲಿನ ಸಿಬಂದಿಗೂ ಉತ್ತಮ ಅಭಿಪ್ರಾಯ ಇತ್ತು. ಹೀಗಾಗಿ 2022ರ ಮಾರ್ಚ್ ತಿಂಗಳಲ್ಲಿ ಮತ್ತೆ ಪೆರೋಲ್ ಮೇಲೆ ಜಾಮೀನು ಸಿಕ್ಕಿತ್ತು. ಸುದೀರ್ಘ 31 ವರ್ಷಗಳ ಶಿಕ್ಷೆ ಅವಧಿ ಪೂರೈಸಿದ ಕಾರಣಕ್ಕೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರದಿಂದಲೂ ಅಭಿಪ್ರಾಯ ಕೇಳಿತ್ತು. ಆದರೆ ಸರಕಾರ ತನ್ನ ಅಭಿಪ್ರಾಯ ನೀಡುವುದಕ್ಕೇ ವಿಳಂಬ ಮಾಡಿತ್ತು.
ತಮಿಳುನಾಡು ಸರಕಾರದ ಒತ್ತಾಯ, ತಾಯಿ ಮಾಡುತ್ತಿದ್ದ ಮೇಲ್ಮನವಿಗೆ ಕೋರ್ಟ್ ಕಡೆಗೂ ಮನ್ನಣೆ ನೀಡಿದ್ದು ಸಂವಿಧಾನದ ಕಾನೂನಿನಡಿ ಕೈದಿಯನ್ನು ಶಿಕ್ಷೆಯಿಂದ ಬಿಡುಗಡೆ ಮಾಡಿದೆ. ರಾಜೀವ ಗಾಂಧಿ ಹತ್ಯೆ ಪ್ರಕರಣದಲ್ಲಿ ಇನ್ನೂ ಆರು ಮಂದಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರನ್ನೂ ಇದೇ ನೀತಿ ಆಧರಿಸಿ ಬಿಡುಗಡೆ ಮಾಡಬೇಕೆಂದು ಎಐಎಡಿಎಂಕೆ ಹೇಳಿದೆ.
Tamil Nadu Chief Minister Wednesday met AG Perarivalan after the Supreme Court ordered his release in the Rajiv Gandhi assasination case and termed order as historic. Perarivalan thanked the CM for the effort taken by his government for his release.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 03:24 pm
Mangalore Correspondent
Paakashala Resturant, Mangalore: ಮಂಗಳೂರಿನಲ್ಲು...
05-05-25 11:22 am
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm