ಬ್ರೇಕಿಂಗ್ ನ್ಯೂಸ್
19-05-22 04:26 pm HK Desk News ದೇಶ - ವಿದೇಶ
ಚಂಡೀಗಡ, ಮೆ 19: ರಸ್ತೆ ಬದಿಯಲ್ಲಿ ಮಲಗಿದ್ದ ಮುಗ್ಧ ಜೀವಗಳ ಮೇಲೆ ಟ್ರಕ್ ಹರಿದ ಪರಿಣಾಮ ಮೂವರು ಮೃತಪಟ್ಟಿದ್ದು, ಇನ್ನೂ 11 ಮಂದಿ ಗಾಯಗೊಂಡಿದ್ದಾರೆ. ಹರ್ಯಾಣದ ಜಾಜ್ಜರ್‌ನಲ್ಲಿನ ಕುಂಡ್ಲಿ- ಮಣೇಸಾರ್- ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇನಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದೆ.
ಗಾಯಾಳುಗಳ ಪೈಕಿ 10 ಮಂದಿಯನ್ನು ರೋಹ್ಟಕ್‌ನಲ್ಲಿರುವ ಸ್ನಾತಕೋತ್ತರ ಪದವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲು ಮಾಡಲಾಗಿದೆ. ಇನ್ನೊಬ್ಬ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಹದ್ದೂರಗಡದ ಟ್ರಾಮಾ ಕೇಂದ್ರಕ್ಕೆ ದಾಖಲಿಸಲಾಗಿದೆ.
ಈ ಭಯಾನಕ ಅಪಘಾತದಲ್ಲಿ ಬಲಿಯಾದ ಎಲ್ಲ 3 ಮಂದಿ ಮತ್ತು 11 ಗಾಯಾಳುಗಳು ಕೆಎಂಪಿ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯ ದುರಸ್ತಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ. ಸಮೀಪದ ಸೇತುವೆಯೊಂದರ ನಿರ್ಮಾಣ ಕಾರ್ಯದಲ್ಲಿ ಅವರು ತೊಡಗಿದ್ದರು. ಕೆಲಸ ಮುಗಿದ ಬಳಿಕ ಆಯಾಸಗೊಂಡಿದ್ದ ಅವರು, ರಸ್ತೆಯ ಪಕ್ಕದಲ್ಲಿ ಮಲಗಿದ್ದರು. ಅತಿ ವೇಗದಿಂದ ಬಂದ ಟ್ರಕ್, ನಿಯಂತ್ರಣ ತಪ್ಪಿ, ಮಲಗಿದ್ದ ಕಾರ್ಮಿಕರ ಮೇಲೆ ಹರಿದಿದೆ.
ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಆಸೋಧಾ ಟೋಲ್ ಪ್ಲಾಜಾ ಇಲ್ಲಿಂದ ಕೇವಲ 2 ಕಿಮೀ ದೂರದಲ್ಲಿದೆ. ಇವರೆಲ್ಲರೂ ವಲಸೆ ಕಾರ್ಮಿಕರಾಗಿದ್ದು, ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಉರುಳಿ ಬಿದ್ದಿರುವ ಟ್ರಕ್ ಮತ್ತು ಚೆಲ್ಲಾಪಿಲ್ಲಿಯಾಗಿರುವ ಕಾರ್ಮಿಕರ ಮೃತದೇಹಗಳ ದೃಶ್ಯ ಎದೆನಡುಗಿಸುವಂತಿದೆ
ಸಮೀಪದಲ್ಲಿನ ನಿರ್ಮಾಣ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 18 ಕಾರ್ಮಿಕರು ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ಮಲಗಿದ್ದರು. ಮೃತ ದುರ್ದೈವಿಗಳ ಹೆಸರು ಇನ್ನೂ ಗೊತ್ತಾಗಿಲ್ಲ. ಅವರೆಲ್ಲರೂ ಉತ್ತರ ಪ್ರದೇಶದ ಎರಡು ಜಿಲ್ಲೆಗಳಿಂದ ಬಂದವರು ಎನ್ನುವುದು ತಿಳಿದುಬಂದಿದೆ.
ಅಪಘಾತದ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನೋಂದಣಿ ಸಂಖ್ಯೆ ಬಳಸಿಕೊಂಡ ಟ್ರಕ್ ಮಾಲೀಕನನ್ನು ಪತ್ತೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಾಹನದಲ್ಲಿ ಇಬ್ಬರು ಚಾಲಕರು ಹಾಗೂ ಒಬ್ಬ ಸಹಾಯಕ ಇದ್ದ ಎಂದು ಮಾಲೀಕ ಮಾಹಿತಿ ನೀಡಿದ್ದಾನೆ.
ಕಾರ್ಮಿಕರು ಮಲಗುವ ಮುನ್ನ ಸಾಕಷ್ಟು ಜಾಗ್ರತೆ ವಹಿಸಿದ್ದರು. ಎದುರಿನಿಂದ ಬರುವ ವಾಹನಗಳಿಗೆ ಎಚ್ಚರಿಕೆ ನೀಡಲು ಬ್ಯಾರಿಕೇಡ್‌ಗಳನ್ನು ಇರಿಸಿದ್ದರು. ಜತೆಗೆ ಅದಕ್ಕೆ ಪ್ರತಿಫಲಕಗಳನ್ನು ಅಳವಡಿಸಿದ್ದರು. ಟ್ರಕ್ ಚಾಲಕ ಬಹುಶಃ ಕುಡಿದ ಮತ್ತಿನಲ್ಲಿ ಇದ್ದ ಅಥವಾ ನಿದ್ದೆಗಣ್ಣಿನಲ್ಲಿ ಇದ್ದಿರಬಹುದು. ಇದರಿಂದ ನಿಯಂತ್ರಣ ತಪ್ಪಿ ಮಲಗಿದ್ದವರ ಮೇಲೆಯೇ ಗಾಡಿ ಚಲಾಯಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Three people died and 11 others were injured in a road accident near Haryana’s Jhajjar on the Kundli-Manesar-Palwal (KMP) Expressway. Among the injured, 10 injured were sent to the Post Graduate Institute of Medical Sciences (PGIMS), Rohtak for treatment, while one person was admitted to the trauma centre of Bahadurgarh for treatment.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 11:22 am
Mangalore Correspondent
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm