ಗ್ಯಾನವಾಪಿ ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ; ದೆಹಲಿ ಯುನಿವರ್ಸಿಟಿಯ ಪ್ರಾಧ್ಯಾಪಕನ ಬಂಧನ

21-05-22 05:36 pm       HK News Desk   ದೇಶ - ವಿದೇಶ

ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ದೆಹಲಿ ಯುನಿವರ್ಸಿಟಿಯ ಹಿಂದು ಕಾಲೇಜಿನ ಪ್ರಾಧ್ಯಾಪಕರೊಬ್ಬರನ್ನು ದೆಹಲಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ನವದೆಹಲಿ, ಮೇ 21: ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ದೆಹಲಿ ಯುನಿವರ್ಸಿಟಿಯ ಹಿಂದು ಕಾಲೇಜಿನ ಪ್ರಾಧ್ಯಾಪಕರೊಬ್ಬರನ್ನು ದೆಹಲಿ ಸೈಬರ್ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಯುನಿವರ್ಸಿಟಿಯ ಹಿಂದು ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ರತನ್ ಲಾಲ್ ಬಂಧಿತ ವ್ಯಕ್ತಿ. ಗ್ಯಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವುದನ್ನು ಪ್ರಶ್ನಿಸಿ, ರತನ್ ಲಾಲ್ ಟ್ವಿಟರ್ ನಲ್ಲಿ ಪೋಸ್ಟ್ ಹಾಕಿದ್ದರು.

ಈ ಬಗ್ಗೆ ದೆಹಲಿಯ ವಿನೀತ್ ಜಿಂದಾಲ್ ಎಂಬ ವಕೀಲ ದೆಹಲಿ ಸೈಬರ್ ಠಾಣೆಗೆ ದೂರು ನೀಡಿದ್ದು, ರತನ್ ಲಾಲ್ ಪೋಸ್ಟ್ ನಿಂದಾಗಿ ಸಮಾಜದಲ್ಲಿ ಎರಡು ಗುಂಪುಗಳ ನಡುವೆ ದ್ವೇಷ ಹರಡುವಂತಾಗಿದೆ. ಸಮಾಜದ ಸಾಮರಸ್ಯ ಕದಡುವ ಉದ್ದೇಶದಿಂದ ಈ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಶಿವಲಿಂಗದ ಬಗ್ಗೆ ಪ್ರಚೋದನಕಾರಿ ಮತ್ತು ಆಕ್ಷೇಪಕಾರಿ ಪೋಸ್ಟ್ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು. ಗ್ಯಾನವಾಪಿ ಪ್ರಕರಣ ತುಂಬ ಸೆನ್ಸಿಟಿವ್ ಆಗಿದ್ದು, ಸದ್ಯ ಕೋರ್ಟಿನಲ್ಲಿದೆ. ಈ ಬಗ್ಗೆ ಸಾಮಾನ್ಯ ಜನರಲ್ಲಿ ದ್ವೇಷ ಹಚ್ಚುವ ರೀತಿ ಇತಿಹಾಸ ಪ್ರಾಧ್ಯಾಪಕರಾಗಿ ನಡೆದುಕೊಳ್ಳಬಾರದು ಎಂದು ವಕೀಲರು ದೂರಿನಲ್ಲಿ ತಿಳಿಸಿದ್ದಾರೆ.

Adv.Vineet Jindal (@vineetJindal19) / Twitter

Delhi University professor held for social media post on Gyanvapi XPERT  TIMES -

ರತನ್ ಲಾಲ್ ಹಾಕಿದ್ದ ಪೋಸ್ಟ್ ಬಗ್ಗೆ ಭಾರೀ ಟೀಕೆ, ಆಕ್ರೋಶ ವ್ಯಕ್ತವಾದರೂ, ಆ ವ್ಯಕ್ತಿ ಮಾತ್ರ ತನ್ನ ಪೋಸ್ಟನ್ನು ಸಮರ್ಥಿಸಿಕೊಂಡಿದ್ದರು. ಭಾರತದಲ್ಲಿ ನಾವು ಯಾವುದೇ ವಿಚಾರದ ಬಗ್ಗೆ ಅಭಿಪ್ರಾಯ ಹಂಚಿಕೊಂಡರೂ ಅದು ಇನ್ಯಾರದೋ ಭಾವನೆಗೆ ಘಾಸಿಗೊಳಿಸುತ್ತದೆ. ಅದು ಹೊಸತೇನಲ್ಲ. ನಾನು ಇತಿಹಾಸಕಾರನಾಗಿದ್ದು, ನನ್ನದೇ ಆದ ಅಭಿಪ್ರಾಯಗಳನ್ನು ಹೊಂದಿದ್ದೇನೆ. ನಾನದನ್ನು ಸೂಕ್ತ ರೀತಿಯಲ್ಲೇ ಹೇಳಿದ್ದೇನೆ. ನಾನು ಏನು ಹೇಳಿದ್ದೇನೋ, ಅದನ್ನು ಸಮರ್ಥಿಸುತ್ತೇನೆ ಎಂದು ಹೇಳಿದ್ದರು.

DU Professor Ratan Lal Arrested Over 'Objectionable' Post on Shivling

ರತನ್ ಲಾಲ್ ಪ್ರಾಧ್ಯಾಪಕರಾಗಿದ್ದುಕೊಂಡೇ ಅಂಬೇಡ್ಕರ್ ನಾಮ ಹೆಸರಿನಲ್ಲಿ ಆನ್ಲೈನ್ ಪೋರ್ಟಲ್ ಒಂದನ್ನೂ ನಡೆಸಿಕೊಂಡು ಬರುತ್ತಿದ್ದಾರೆ. ತನ್ನನ್ನು ಸಮಾಜ ಕಾರ್ಯಕರ್ತ, ಬರಹಗಾರ ಮತ್ತು ಅಂಬೇಡ್ಕರ್ ಪರ ಕ್ರಾಂತಿಯ ಶಿಶು ಎಂದು ಹೇಳಿಕೊಂಡಿದ್ದಾರೆ. ಇದರ ಮಧ್ಯೆ ತನ್ನ 20 ವರ್ಷದ ಮಗನಿಗೆ ಅಪರಿಚಿತರಿಂದ ಪ್ರಾಣ ಬೆದರಿಕೆ ಬಂದಿದೆ ಎಂದೂ ಟ್ವೀಟ್ ಮಾಡಿದ್ದರು.

A Delhi court on Saturday granted bail to Delhi University professor Ratan Lal, who was arrested on Friday over a social media post allegedly intended to outrage reli­gious beliefs after the alleged discovery of ‘Shivling’ inside the Gyanvapi Mosque complex in Varanasi, on furnishing a bond of ₹50,000 and surety on the like amount. Lal was produced before the Tis Hazari Court, which granted him the bail.