ಡ್ರಗ್ ಓವರ್ ಡೋಸ್ ; ರೇವ್ ಪಾರ್ಟಿಯಲ್ಲಿ ಕುಸಿದು ಬಿದ್ದು 23 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ದುರಂತ ಸಾವು

23-05-22 03:00 pm       HK News Desk   ದೇಶ - ವಿದೇಶ

23 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ರೇವ್ ಪಾರ್ಟಿಯಲ್ಲಿ ಭಾಗವಹಿಸಿ ಅಪರಿಮಿತ ಡ್ರಗ್ಸ್ ಸೇವಿಸಿದ ಕಾರಣ ದುರಂತ ಸಾವು ಕಂಡ ಘಟನೆ ಚೆನ್ನೈ ನಗರದಲ್ಲಿ ನಡೆದಿದೆ.

ಚೆನ್ನೈ, ಮೇ 23: 23 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ರೇವ್ ಪಾರ್ಟಿಯಲ್ಲಿ ಭಾಗವಹಿಸಿ ಅಪರಿಮಿತ ಡ್ರಗ್ಸ್ ಸೇವಿಸಿದ ಕಾರಣ ದುರಂತ ಸಾವು ಕಂಡ ಘಟನೆ ಚೆನ್ನೈ ನಗರದಲ್ಲಿ ನಡೆದಿದೆ.

ಚೆನ್ನೈ ನಗರದ ಅಣ್ಣಾ ನಗರ್ ಎಂಬಲ್ಲಿನ ಮಾಲ್ ಒಂದರ ಮೇಲ್ಗಡೆ ಶನಿವಾರ ರಾತ್ರಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಭಾಗವಹಿಸಿದ್ದ ಎಸ್.ಪ್ರವೀಣ್ ಮಡಪಾಕ್ಕಮ್ ಎಂಬ ಯುವಕ ರಾತ್ರಿ ಎಂಟು ಗಂಟೆ ವೇಳೆಗೆ ಪಾರ್ಟಿ ನಡುವಲ್ಲೇ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ರಾಜೀವ ಗಾಂಧಿ ಆಸ್ಪತ್ರೆಗೆ ಒಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಭಾನುವಾರ ಬೆಳಗ್ಗೆ ಪ್ರವೀಣ್ ಅಸುನೀಗಿದ್ದ.

ತಿರುಮಂಗಲಂ ಪೊಲೀಸರ ಪ್ರಕಾರ, ಮಾಲ್ ಮೇಲ್ಗಡೆ ರೇವ್ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ವಂತೆ. ಪ್ರವೀಣನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ವಿಷಯ ತಿಳಿದು ರಾತ್ರಿ ಹತ್ತು ಗಂಟೆ ವೇಳೆಗೆ ಸ್ಥಳಕ್ಕೆ ದಾಳಿ ನಡೆಸಿ ಪಾರ್ಟಿ ನಿಲ್ಲಿಸಿದ್ದರು. ಆಗ 900 ರಷ್ಟು ಪುರುಷರು ಮತ್ತು ಮಹಿಳೆಯರು ಅಲ್ಲಿ ಸೇರಿದ್ದರು. ಪಾರ್ಟಿ ಜಾಗದಲ್ಲಿ 800ರಷ್ಟು ಮದ್ಯದ ಬಾಟಲಿಗಳು, 50ಕ್ಕೂ ಹೆಚ್ಚು ಅಪ್ರಾಪ್ತರು ಪತ್ತೆಯಾಗಿದ್ದರು.

ಪರಿಶೀಲನೆ ಸಂದರ್ಭದಲ್ಲಿ ರೇವ್ ಪಾರ್ಟಿಯನ್ನು ಕಂಪನಿಯೊಂದು ಆಯೋಜಿಸಿತ್ತು. ಆನ್ಲೈನಲ್ಲಿಯೇ ಟಿಕೆಟ್ ಮಾರಿ, ಜನರನ್ನು ಆಕರ್ಷಣೆ ಮಾಡಿತ್ತು. ಪ್ರತಿ ಟಿಕೆಟಿಗೆ 1500 ರೂ. ಬೆಲೆ ನಿಗದಿಪಡಿಸಲಾಗಿತ್ತು. ಪಾರ್ಟಿ ಆಯೋಜಕರು ಅಲ್ಲಿಗೆ ಮದ್ಯ ತರುವುದಕ್ಕೆ ಮತ್ತು ಸರ್ವ್ ಮಾಡುವುದಕ್ಕೆ ಅವಕಾಶ ನೀಡಿರಲಿಲ್ಲ. ಆದರೆ, ಮಾಲ್ ಮೂರನೇ ಮಹಡಿಯಲ್ಲಿ ಬಾರ್ ಇದ್ದು ಅಲ್ಲಿಂದಲೇ ಮದ್ಯ ಸರಬರಾಜು ಆಗುತ್ತಿದ್ದುದನ್ನು ಪತ್ತೆ ಮಾಡಿದ್ದಾರೆ. ತಮಿಳುನಾಡು ಪೊಲೀಸರು ರೇವ್ ಪಾರ್ಟಿ ಆಯೋಜಕರು ಮತ್ತು ಬಾರ್ ಮಾಲೀಕರ ವಿರುದ್ಧ ಕೇಸು ದಾಖಲಿಸಿದ್ದಾರೆ. ಅಲ್ಲದೆ, ಮೂರು ಮಂದಿಯನ್ನು ಬಂಧಿಸಿದ್ದಾರೆ.

A 23-year-old man fell unconscious at a rooftop party in Chennai on Saturday. The next day, he died at Rajiv Gandhi Government Hospital. While the police are waiting for the post-mortem report, it is suspected that he died of drug overdose.The man has been identified as a tech professional named S Praveen from Madipakkam in Chennai. The rave party he attended on Saturday was held at VR mall in Anna Nagar and organised by a company called Great Indian Gathering. DJ Night Eduardo Neto, also known as Mandragora, performed at the event.