ಸ್ವಾತಂತ್ರ್ಯೋತ್ಸವಕ್ಕೆ ‘19.20.21’ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ ನಿರ್ದೇಶಕ ಮಂಸೋರೆ ತಂಡ

15-08-22 03:50 pm       Source: Vijayakarnataka   ಸಿನಿಮಾ

'ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್​-1978’ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ 'ರಾಷ್ಟ್ರ ಪ್ರಶಸ್ತಿ' ಪುರಸ್ಕೃತ ನಿರ್ದೇಶಕ ಮಂಸೋರೆ ಅವರು, ‘19.20.21’ .

'ರಾಷ್ಟ್ರ ಪ್ರಶಸ್ತಿ' ಪುರಸ್ಕೃತ ನಿರ್ದೇಶಕ ಮಂಸೋರೆ ( Mansore ) ವಿಭಿನ್ನ ಸಿನಿಮಾಗಳನ್ನು ಚಿತ್ರಪ್ರೇಮಿಗಳ ಮಡಿಲಿಗೆ ಹಾಕುತ್ತಾ ಬರುತ್ತಿದ್ದಾರೆ. 'ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್-1978’ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಅವರು, ಸದ್ಯ ‘19.20.21’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಚಿತ್ರತಂಡ ವಿಶೇಷವಾದ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದೆ. ಬಾಯಿಗೆ ಬಟ್ಟೆ ಕಟ್ಟಿರುವ ವ್ಯಕ್ತಿ, ಆತನ ಬೆನ್ನು, ಬಾಯಲ್ಲಿ ರಕ್ತದ ಕಲೆ ಇರುವ ಕೌತುಕ ಮೂಡಿಸುವ ಒಂದು ಪೋಸ್ಟರ್ ಅನ್ನು ಮಂಸೋರೆ ಬಳಗ ಅನಾವರಣ ಮಾಡಿದೆ.

Mansore: 19.20.21 is about human rights' violation- Cinema express

'ಜೈ ಭೀಮ್', 'ಜನಗಣಮನ' ಸಿನಿಮಾಗಳ ಮಾದರಿಯಲ್ಲಿ ‘19.20.21’ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಬಾಲಾಜಿ ಮನೋಹರ್, ಎಂಡಿ ಪಲ್ಲವಿ, ಶೃಂಗ, ಸಂಪತ್ ಮೈತ್ರೇಯ, ಅವಿನಾಶ್, ಕೃಷ್ಣ ಹೆಬ್ಬಾಲೆ ಮುಂತಾದ ತಾರಾಬಳಗ ಚಿತ್ರದಲ್ಲಿದೆ.

'ಆ್ಯಕ್ಟ್-1978’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ದೇವರಾಜ್ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದು , ಬಿಂದುಮಾಲಿನಿ ಸಂಗೀತ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಶಿವು ಬಿಕೆ ಕುಮಾರ್ ಕ್ಯಾಮೆರಾ, ಸುರೇಶ್ ಆರುಮುಗಂ ಸಂಕಲನವಿದೆ.

mansore: 19.20.21: Mansore, who sets out to make a very important number in  everyone's life - national award winning director mansore next movie 19 20  21 » Jsnewstimes

ಚಿತ್ರಕಥೆಯಲ್ಲಿ ಮಂಸೋರೆ ಜೊತೆಗೆ ವೀರೇಂದ್ರ ಮಲ್ಲಣ್ಣ ಲೇಖನಿ ಹಂಚಿಕೊಂಡಿದ್ದರೆ, ಸಂಭಾಷಣೆಗಳ ಬರವಣಿಗೆಯಲ್ಲಿ ಅವಿನಾಶ್ ಜಿ ಮತ್ತು ವೀರೇಂದ್ರ ಮಲ್ಲಣ್ಣ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ತಂಡ, ಈಗ ಸಂಕಲನ ಮುಗಿಸಿ ಮುಂದಿನ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿದ್ದಾರೆ.

Mansore's next is based on true events | Kannada Movie News - Times of India

ಅಂದಹಾಗೆ ಇದು ಮಂಸೋರೆ ಅವರ 4ನೇ ಸಿನಿಮಾ. ಈ ಬಗ್ಗೆ ಹಿಂದೆ ಮಾತನಾಡಿದ್ದ ಮಂಸೋರೆ ಅವರು, "ಇದು ಹೊಸ ಸಿನಿಮಾ, ಹೊಸ ಪ್ರಯತ್ನವೊಂದರ ಬೆನ್ನತ್ತಿ ಹೊರಟಿದ್ದೇವೆ. ಆದರೆ ಇದು ಕನಸಲ್ಲ, ಕತೆಯಲ್ಲ, ಸತ್ಯ ಘಟನೆ ಆಧಾರಿತವಾದುದು. ಬಹಳ ಹಿಂದೆಯೇ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಒಂದು ಘಟನೆಯು ದೃಶ್ಯರೂಪ ಪಡೆದುಕೊಳ್ಳಲು ಈಗ ಕಾಲ ಕೂಡಿಬಂದಿದೆ.‌ ಹತ್ತೊಂಬತ್ತು, ಇಪ್ಪತ್ತು, ಇಪ್ಪತ್ತೊಂದು..." ಎಲ್ಲರ ಬದುಕಿಗೆ ಬಹಳ ಮುಖ್ಯವಾದ ಸಂಖ್ಯೆಗಳು.. ಅದು ಏನು? ಹೇಗೆ? ಎಂಬುವ ಪ್ರಶ್ನೆಗಳಿಗೆ ಉತ್ತರ ಈ ಚಿತ್ರದಲ್ಲಿದೆ" ಎಂದಿದ್ದಾರೆ.

National Award Winner Director Mansore Release 19 20 21 Movie Poster.