ಬ್ರೇಕಿಂಗ್ ನ್ಯೂಸ್
22-09-25 07:15 pm Bangalore Correspondent ಸಿನಿಮಾ
ಬೆಂಗಳೂರು, ಸೆ.22: ಬಹು ನಿರೀಕ್ಷಿತ ಕಾಂತಾರ – ಅಧ್ಯಾಯ 1ರ ಟ್ರೈಲರ್ ರಿಲೀಸ್ ಮಾಡಲಾಗಿದೆ. ಹೊಂಬಾಳೆ ಫಿಲಂಸ್ ಬ್ಯಾನರಿನ ಯೂಟ್ಯೂಬ್ ನಲ್ಲಿ ಟ್ರೈಲರ್ ರಿಲೀಸ್ ಆಗಿದ್ದು, ಮುಂದಿನ ಅಕ್ಟೋಬರ್ 2ರಂದು ಚಿತ್ರ ಬಿಡುಗಡೆಯ ದಿನಾಂಕವನ್ನೂ ಘೋಷಿಸಲಾಗಿದೆ.
ಕರಾವಳಿಯ ತುಳುನಾಡಿನಲ್ಲಿ ದೈವಗಳು ಬರುವುದಕ್ಕೂ ಹಿಂದಿನ ಕತೆ ಚಿತ್ರದಲ್ಲಿರುವುದು ಟ್ರೈಲರ್ ನಲ್ಲಿ ಕಾಣುತ್ತದೆ. ರಿಷಬ್ ಶೆಟ್ಟಿ ನಾಗಾ ಸಾಧು, ದೈವದ ನಡುವೆ ಸಂಪರ್ಕ ಬೆಸೆಯುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಹುಬಲಿ ರೀತಿಯಲ್ಲಿ ಅದ್ದೂರಿ ಸೆಟ್ ಮತ್ತು ನವಿರಾದ ಪ್ರೇಮಕತೆ ಇರುವುದನ್ನೂ ತೋರಿಸಲಾಗಿದೆ.



ಕಾಂತಾರ ಚಿತ್ರದಲ್ಲಿ ದೈವ ಮಾಯವಾಗುವಲ್ಲಿಂದ ಅದು ಹೇಗೆ ದೈವ ಮಾಯವಾಗೋದು ಎಂಬ ಪ್ರಶ್ನೆಯಿಂದ ಕಥೆ ಆರಂಭಗೊಂಡು ದೈವಗಳ ಹಿನ್ನೆಲೆಯ ಕತೆಯನ್ನು ನಿರೂಪಣೆ ಮಾಡುವ ರೀತಿ ತೋರಿಸಲಾಗಿದೆ. ಸಾಕ್ಷಾತ್ ಶಿವನೇ ತುಳುನಾಡಿನಲ್ಲಿ ಬಂದು ನೆಲೆಸಿದ್ದ. ಆನಂತರ ಶಿವನ ಗಣಗಳಾಗಿ ಗುಳಿಗ ಇನ್ನಿತರ ದೈವಗಳು ಕಾಣಿಸಿಕೊಂಡಿದ್ದವು ಎನ್ನುವ ರೀತಿ ಕತೆಯ ಹಂದರ ಇರುವುದು ತೋರಿಬರುತ್ತದೆ. ಅಲ್ಲದೆ, ಬನವಾಸಿ ಕದಂಬ ರಾಜರು, ಅಲ್ಲಿನ ರಾಜಕುಮಾರಿಯ ಕತೆಯನ್ನೂ ಒಳಗೊಳ್ಳಿಸಲಾಗಿದೆ.
ಟ್ರೈಲರ್ ನೋಡಿದರೆ ತೆಲುಗಿನ ಬಾಹುಬಲಿಯ ಟಚ್ ಮೇಲ್ನೋಟಕ್ಕೆ ಕಾಣುತ್ತದೆ. ಹಿಂದಿನ ಕಾಂತಾರದಲ್ಲಿ ದೈವದ ಕಾರಣಿಕ ಮತ್ತು ಮುಗ್ಧ ಕಾಡಿನ ಜನರು, ಅರಣ್ಯ ಇಲಾಖೆಯ ಅಧಿಕಾರಿಗಳು, ಜಮೀನ್ದಾರನೊಂದಿಗೆ ಹೋರಾಟದ ಕತೆಯನ್ನು ತೋರಿಸಲಾಗಿತ್ತು. ಕೊನೆಯಲ್ಲಿ ದೈವದ ಪಾತ್ರಧಾರಿ ಮಾಯವಾಗುವಲ್ಲಿಗೆ ಚಿತ್ರವನ್ನು ನಿಲ್ಲಿಸಲಾಗಿತ್ತು. ಅಲ್ಲಿಂದಲೇ ಚಿತ್ರದ ಒಂದನೇ ಅಧ್ಯಾಯದ ಆರಂಭ ಕೊಟ್ಟಿರುವುದು ಟ್ರೈಲರ್ ನಲ್ಲಿ ಕಾಣಿಸುತ್ತದೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಇದೆ. ನಾಯಕಿ ರುಕ್ಮಿಣಿ ವಸಂತ್ ಮತ್ತು ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
The much-awaited trailer of Kantara – Chapter 1 has been released by Hombale Films on their official YouTube channel, along with the announcement that the film will hit theatres on October 2. Set against the cultural backdrop of coastal Tulu Nadu, the trailer reveals the story that predates the events of Kantara. Actor-director Rishab Shetty appears in the role of a Naga Sadhu, acting as a bridge between the divine and the earthly realms. The visuals showcase grandeur on the scale of Baahubali, with magnificent sets, powerful sequences, and a tender love story woven into the narrative.
11-12-25 08:03 pm
HK News Desk
Padubidri, Accident: ಪಡುಬಿದ್ರಿಯಲ್ಲಿ ಮತ್ತೊಂದು...
11-12-25 03:29 pm
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ...
11-12-25 12:44 pm
ಬೆಂಗಳೂರು ದೇವನಹಳ್ಳಿ ಬಳಿ ಭೀಕರ ಅಪಘಾತ ; ಡಿವೈಡರ್ ಹ...
11-12-25 12:14 pm
Transport Minister Ramalinga Reddy: ಆರ್ಟಿಒ...
10-12-25 09:40 pm
11-12-25 04:24 pm
HK News Desk
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
11-12-25 04:21 pm
Mangalore Correspondent
ದ್ವೇಷ ಭಾಷಣ ಪ್ರಕರಣ ; ಕಡೆಗೂ ಆರೆಸ್ಸೆಸ್ ಮುಖಂಡ ಪ್ರ...
10-12-25 11:04 pm
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
“Board Exams Made Easier: AI Shikshak Breaks...
10-12-25 06:01 pm
11-12-25 09:53 pm
HK News Desk
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am