ಇತ್ತೀಚೆಗೆ ಕನ್ನಡ ಸಿನಿಮಾಗಳಿಗೆ ಪರಭಾಷೆಗಳಲ್ಲಿ ಬೇಡಿಕೆ ಸೃಷ್ಟಿ; ಲವ್ 360 ಸಿನಿಮಾಕ್ಕೂ ಭಾರೀ ಬೇಡಿಕೆ

05-09-22 01:34 pm       Source: Vijayakarnataka   ಸಿನಿಮಾ

ಶಶಾಂಕ್‌ ನಿರ್ದೇಶನ ಮಾಡಿರುವ ‘ಲವ್‌ 360’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಸದ್ದು ಮಾಡಿತ್ತು. ಈ ಸಿನಿಮಾ ಇದೀಗ ಪರಭಾಷೆಗೆ ರಿಮೇಕ್‌ ಆಗಲಿದೆ. ಶಶಾಂಕ್‌ ನಿರ್ದೇಶನ ಮಾಡಿದ್ದ ...

ಕನ್ನಡ ಸಿನಿಮಾಗಳಿಗೆ ಇತ್ತೀಚೆಗೆ ಪರಭಾಷೆಗಳಲ್ಲಿ ಬೇಡಿಕೆ ಸೃಷ್ಟಿಯಾಗುತ್ತಿವೆ. ಕೆಲ ವಾರಗಳ ಹಿಂದೆ ಬಿಡುಗಡೆಯಾದ ‘ಲವ್‌ 360’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಈಗ ಈ ಸಿನಿಮಾ ತಮಿಳು ಮತ್ತು ತೆಲುಗಿಗೆ ರಿಮೇಕ್‌ ಆಗುತ್ತಿದೆ ಎಂದು ಸುದ್ದಿಯಾಗಿದೆ.

ಶಶಾಂಕ್‌ ನಿರ್ದೇಶನ ಮಾಡಿದ್ದ ಈ ಸಿನಿಮಾ ಹೊಸತನದ ಕಥೆಯಿಂದ ಗಮನ ಸೆಳೆದಿತ್ತು. ಈ ಸಿನಿಮಾ ಮೂಲಕ ಪ್ರವೀಣ್‌ ಎಂಬ ಯುವಕ ನಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾವನ್ನು ಈಗ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮತ್ತು ನಿರ್ಮಾಪಕರು ರಿಮೇಕ್‌ ಮಾಡಲು ಆಸಕ್ತಿ ತೋರಿಸಿದ್ದಾರೆ. ಶಶಾಂಕ್‌ ಅವರಿಗೆ ನಿರ್ದೇಶನ ಮಾಡಲು ಆಫರ್‌ ಸಹ ನೀಡಿದ್ದಾರಂತೆ.

Director Shashank hints at Love 360 remake in Telugu and Tamil- Cinema  express

‘ಲವ್‌ 360 ಸಿನಿಮಾದ ಕಥೆ ಮತ್ತು ಮೇಕಿಂಗ್‌ ಅನ್ನು ಇಷ್ಟಪಟ್ಟು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ರಿಮೇಕ್‌ ಮಾಡಲು ಮುಂದೆ ಬಂದಿದೆ. ತಮಿಳಿಗೂ ಸಹ ಒಂದಷ್ಟು ಮಂದಿ ಕೇಳಿದ್ದಾರೆ. ಸದ್ಯದಲ್ಲೇ ಎಲ್ಲವೂ ಫೈನಲ್‌ ಆಗಲಿದೆ’ಎಂದು ಹೇಳುತ್ತಾರೆ ಶಶಾಂಕ್‌.

Director Shashank's Love 360 release date out- The New Indian Express

ಜನ ಗೆಲ್ಲಿಸಿದ ಸಿನಿಮಾ ಈ ಸಿನಿಮಾ ಬಿಡುಗಡೆಯಾಗಿ ಮೊದಲ ಮೂರು ದಿನಗಳ ಕಾಲ ನಿರೀಕ್ಷಿತ ಮಟ್ಟದ ಕಲೆಕ್ಷನ್‌ ಮಾಡಲಿಲ್ಲ ಎಂದು ಶಶಾಂಕ್‌ ಬೇಸರದಿಂದ ವಿಡಿಯೊವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಆ ವಿಡಿಯೊ ವೈರಲ್‌ ಆಗಿ ಸಿನಿಮಾಗೆ ಜನ ಬರಲಾರಂಭಿಸಿದರು. ವಿಶೇಷ ಎಂದರೆ ಸಿನಿಮಾ ಉತ್ತಮ ಕಲೆಕ್ಷನ್‌ ಮಾಡಿದ್ದಲ್ಲದೆ, ಜನಮನವನ್ನು ಸಹ ಗೆದ್ದಿತು. ಹಾಗಾಗಿ ಶಶಾಂಕ್‌ ಕನ್ನಡಿಗರಿಗೆ ಧನ್ಯವಾದ ಹೇಳಿ ಒಂದು ವಿಡಿಯೊವನ್ನು ಹರಿ ಬಿಟ್ಟಿದ್ದಾರೆ.

Love 360 Movie Review: The Film Is A Complete Winner For Its Honesty -  MetroSaga

‘ಕನ್ನಡಿಗರು ಸಿನಿಮಾವನ್ನು ಗೆಲ್ಲಿಸಿದ್ದಾರೆ. ಒಳ್ಳೆಯ ಕಂಟೆಂಟ್‌ ಇರುವ ಸಿನಿಮಾಗಳನ್ನು ಮಾಡಿದರೆ ಎಂದಿಗೂ ಅವರು ಕೈ ಬಿಡುವುದಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ‘ಲವ್‌ 360’ ತಂಡದಿಂದ ಸಿನಿಮಾ ನೋಡಿದ ಎಲ್ಲರಿಗೂ ಧನ್ಯವಾದ. ಈ ಸಿನಿಮಾ ಹಿಟ್‌ ಆಗಲು ಹಲವು ಕಾರಣಗಳಿವೆ. ಸಿನಿಮಾದಲ್ಲಿನ ಹಾಡುಗಳು ಮತ್ತು ನನ್ನ ಕಥಾ ನಾಯಕ ಪ್ರವೀಣ್‌ ಮತ್ತು ನಾಯಕಿ ರಚನಾ ಇಂದರ್‌ ಅವರ ನಟನೆಯೂ ಕಾರಣ’ ಎಂದು ಹೇಳಿದ್ದಾರೆ ಶಶಾಂಕ್‌.ಒಟ್ಟಾರೆ ಕನ್ನಡಿಗರು ಇಷ್ಟಪಟ್ಟ ಸಿನಿಮಾಗಳು ಪರಭಾಷೆಗೂ ಹೋಗುತ್ತಿರುವುದು ಸಹಜವಾಗಿ ಕನ್ನಡ ಸಿನಿಮಾ ಪ್ರೇಮಿಗಳಿಗೆ ಸಂತಸವಾಗಿದೆ.

"ರಿಮೇಕ್‌ಗಾಗಿ ಬೇಡಿಕೆ ಬಂದಿದೆ. ಸದ್ಯದಲ್ಲೇ ಯಾರು ಮಾಡುತ್ತಾರೆ ಎಂಬ ಬಗ್ಗೆ ವಿವರ ನೀಡುತ್ತೇವೆ" ಎಂದಿದ್ದಾರೆ ನಿರ್ದೇಶಕ ಶಶಾಂಕ್‌

Demand For Director Shashank Love 360 Movie Remake