ಖ್ಯಾತ ನಟ 'ಶಂಖನಾದ' ಅರವಿಂದ್ ಕೊರೊನಾಕ್ಕೆ ಬಲಿ

07-05-21 03:26 pm       Manjunatha C: Filmbeat   ಸಿನಿಮಾ

ಕನ್ನಡ ಸಿನಿರಂಗದ ಖ್ಯಾತ ನಟ 'ಶಂಖನಾದ' ಅದವಿಂದ್ ಅವರು ಕೊರೊನಾ ಕಾರಣದಿಂದ ನಿಧನ ಹೊಂದಿದ್ದಾರೆ.

ಕನ್ನಡ ಸಿನಿರಂಗದ ಖ್ಯಾತ ನಟ 'ಶಂಖನಾದ' ಅದವಿಂದ್ ಅವರು ಕೊರೊನಾ ಕಾರಣದಿಂದ ನಿಧನ ಹೊಂದಿದ್ದಾರೆ.

ಎರಡು ದಿನಗಳ ಹಿಂದಷ್ಟೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನ ಹೊಂದಿದ್ದಾರೆ. ಅರವಿಂದ್ ಅವರಿಗೆ 60 ವರ್ಷ ವಯಸ್ಸಾಗಿತ್ತು. ಅಪರಿಚಿತ, ಆಗಂತುಕ, ಬೆಟ್ಟದ ಹೂವು, ಶಂಖನಾದ ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಅರವಿಂದ್ ರವರು ಇಂದು ಕೊರೊನಾ ವ್ಯಾಧಿಗೆ ತುತ್ತಾಗಿ ನಮ್ಮನ್ನು ಅಗಲಿದ್ದಾರೆ. ಬಹಳ ಅಪರೂಪದ ನಟರಾಗಿದ್ದ ಇವರು ಹಾಸ್ಯನಾಟರಾಗಿ, ಪೋಷಕ ನಟರಾಗಿ ಅನೇಕ ಚಿತ್ರಗಳಲ್ಲಿ ಅರವಿಂದ್ ನಟಿಸಿದ್ದರು.



'ಶಂಖನಾದ' ಸಿನಿಮಾದಲ್ಲಿ ನಾಯಕ ಪಾತ್ರದಲ್ಲಿ ನಟಿಸಿದ್ದ ಅರವಿಂದ್ ಅದೇ ಸಿನಿಮಾದ ಪಾತ್ರದ ಮೂಲಕ ಗಮನ ಸೆಳೆದಿದ್ದರು ಹಾಗಾಗಿಯೇ ಅವರ ಹೆಸರಿನ ಜೊತೆಗೆ 'ಶಂಖನಾದ' ಹೆಸರು ಸಹ ಸೇರಿಕೊಂಡಿತ್ತು. ಕನ್ನಡ ಸಿನಿಮಾರಂಗದಲ್ಲಿ ಅವರು ಶಂಖನಾದ ಅರವಿಂದ್ ಎಂದೇ ಜನಪ್ರಿಯರಾಗಿದ್ದರು.

ಅರವಿಂದ್ ಅವರಿಗೆ ಇತ್ತೀಚೆಗೆ ಅವಕಾಶಗಳು ತೀವ್ರ ಕಡಿಮೆ ಆಗಿತ್ತು. ಅರವಿಂದ್ ಅವರ ಮಕ್ಕಳು ಸಹ ಕಲಾವಿದರಾಗಿದ್ದು ಟಿವಿಗಳ ರಿಯಾಲಿಟಿ ಶೋಗಳಲ್ಲಿ ಹಾಡುವುದು, ಪಕ್ಕ ವಾದ್ಯ ನುಡಿಸುವುದು ಮಾಡುತ್ತಿದ್ದಾರೆ. ಕಳೆದ ವರ್ಷ ಕೊರೊನಾ ಸಮಯದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದಾಗಿ ಕೆಲವು ತಿಂಗಳ ಹಿಂದಷ್ಟೆ ಹೇಳಿಕೊಂಡಿದ್ದರು.

ಸಾರಾ ಅಬೂಬಕ್ಕರ್ ಅವರ ಕೃತಿ 'ವಜ್ರಗಳು'ನ ಸಿನಿಮಾ ರೂಪ 'ಸಾರಾ ವಜ್ರ'ದಲ್ಲಿ ಮುಸ್ಲಿಂ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಅವರು ನಟಿಸಿದ ಕೊನೆಯ ಸಿನಿಮಾ. ಆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಈ ಸಿನಿಮಾದಲ್ಲಿ ಅನುಪ್ರಭಾಕರ್ ಹಾಗೂ ರೆಹಮಾನ್ ನಟಿಸಿದ್ದಾರೆ. ಸಿನಿಮಾವನ್ನು ಆರ್ನಾ ಸಾಧ್ಯ ನಿರ್ದೇಶನ ಮಾಡಿದ್ದಾರೆ.

(Kannada Copy of  Filmbeat Kannada)