ಹಿರಿಯ ಕಲಾವಿದರ ಸಹಾಯಕ್ಕೆ ನಿಂತ ಕಿಚ್ಚ: ಯೋಗಕ್ಷೇಮ ವಿಚಾರಿಸಲು ತಂಡ ರಚಿಸಿದ ಸುದೀಪ್

20-05-21 05:11 pm       Filmbeat : Shruthi K   ಸಿನಿಮಾ

ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಪರದಾಡುತ್ತಿರುವ ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿರುವ ಸುದೀಪ್, ಇದೀಗ ಹಿರಿಯ ಕಲಾವಿದರ ಸಹಾಯಕ್ಕೂ ಧಾವಿಸಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತನ್ನ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಯಲ್ಲಿ ಕಿಚ್ಚನ ಟ್ರಸ್ಟ್ ಸಾಕಷ್ಟು ಮಾನವೀಯ ಕೆಲಸ ಮಾಡುತ್ತಿದೆ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಪರದಾಡುತ್ತಿರುವ ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿರುವ ಸುದೀಪ್, ಇದೀಗ ಹಿರಿಯ ಕಲಾವಿದರ ಸಹಾಯಕ್ಕೂ ಧಾವಿಸಿದ್ದಾರೆ.

ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಲು ಸುದೀಪ್ ಒಂದು ತಂಡ ರಚಿಸಿದ್ದು, ಆ ತಂಡದ ಮೂಲಕ ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಅವರಿಗೆ ಅಗತ್ಯ ವಸ್ತುಗಳನ್ನು ತಲುಪಿಸಿ ಅದರ ಜೊತೆಗೆ ಒಂದು ಪ್ರೀತಿಯ ಪತ್ರವನ್ನು ಬರೆದು ಕಳುಹಿಸುತ್ತಿದ್ದಾರೆ.

'ನನ್ನ ಕುಟುಂಬದ ಹಿರಿಯರು ನೀವು. ನೀವೆಲ್ಲ ಹೇಗಿದ್ದೀರಿ? ಪ್ರೀತಿಯಿಂದ ನಿಮ್ಮ ಕಿಚ್ಚ ಸುದೀಪ್' ಎಂದು ಪತ್ರದಲ್ಲಿ ಬರೆಯಲಾಗಿದೆ. ನೂರಕ್ಕೂ ಹಿರಿಯ ಕಲಾವಿದರಿಗೆ ಅಗತ್ಯ ವಸ್ತು ಜೊತೆಗೆ ಕಿಚ್ಚನ ಯೋಗಕ್ಷೇಮದ ಪತ್ರ ತಲುಪಿದೆ. ಹಿರಿಯ ಕಲಾವಿದರಾದ ಗಿರಿಜಾ ಲೋಕೇಶ್, ಉಮೇಶ್ ಬಹುತೇಕ ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.

ಕಷ್ಟ ಎಂದವರಿಗೆ ಸಹಾಯ ಹಸ್ತ ಚಾಚುವ ಕಿಚ್ಚ ಅದೆಷ್ಟೋ ಹಸಿದ ಜೀವಗಳ ಹಸಿವು ನೀಗಿಸಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ ಅನೇಕರ ಮಂದಿಯ ಚಿಕಿತ್ಸೆಗೆ ನೆರವಾಗಿದ್ದಾರೆ. ಇತ್ತೀಚಿಗಷ್ಟೆ ಬಿಗ್ ಬಾಸ್ ಸ್ಪರ್ಧಿ ಮತ್ತು ನಟಿ ಸೋನು ಪಾಟೀಲ್ ತಾಯಿಯ ಆಸ್ಪತ್ರೆಗೆ ಬಿಲ್ ಪಾವತಿಸಿದ್ದಾರೆ. ಅಭಿಮಾನಿ ಸೌಮ್ಯಾ ಅವರ ಪತಿಗೆ ಸಹಾಯ ಹಸ್ತ ಚಾಚಿದ್ದಾರೆ. ಕಿಚ್ಚನ ಸಹಾಯ ನೆನೆದು ಅನೇಕರು ವಿಡಿಯೋ ಮೂಲಕ ಧನ್ಯವಾದ ಹೇಳುತ್ತಿದ್ದಾರೆ. ಭಾವುಕರಾಗಿ ಕಾಣ್ಣೀರಾಕುತ್ತಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಇತ್ತೀಚಿಗೆ ಸುದೀಪ್ ಚಾರಿಟೇಬಲ್ ಸೊಸೈಟಿ ಪುಣೆ ಮೂಲದ ವ್ಯಕ್ತಿಯ ಸಹಾಯಕ್ಕೆ ನಿಂತಿದ್ದಾರೆ. ಲಾಕ್ ಡೌನಿ ನಿಂದ ಕೆಲಸವಿಲ್ಲದೆ ಊಟಕ್ಕೂ ಪರದಾಡುತ್ತಿದ್ದ ಗುಡ್ಡ ಪಾಲ್ ಎನ್ನುವ ವ್ಯಕ್ತಿ ಸುದೀಪ್ ಚಾರಿಟೇಬಲ್ ಬಗ್ಗೆ ತಿಳಿದುಕೊಂಡು ಸಂಪರ್ಕ ಮಾಡಿದ್ದಾರೆ. ಬಳಿಕ ಸುದೀಪ್ ಟ್ರಸ್ಟ್ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ.

(Kannada Copy of  film beat Kannada)