ಹಿರಿಯ ನಿರ್ದೇಶಕ ತಿಪಟೂರು ರಘು ನಿಧನ

29-05-21 10:41 am       Filmbeat : Manjunath C   ಸಿನಿಮಾ

ಕನ್ನಡ ಸಿನಿಮಾ ರಂಗದ ಹಿರಿಯ ನಿರ್ದೇಶಕರುಗಳಲ್ಲಿ ಒಬ್ಬರಾದ ತಿಪಟೂರು ರಘು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಕನ್ನಡ ಸಿನಿಮಾ ರಂಗದ ಹಿರಿಯ ನಿರ್ದೇಶಕರುಗಳಲ್ಲಿ ಒಬ್ಬರಾದ ತಿಪಟೂರು ರಘು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ತಿಪಟೂರು ರಘು ಅವರಿಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಇತ್ತು.

ಕನ್ನಡದಲ್ಲಿ ಕೆಲವು ಅತ್ಯುತ್ತಮ ಸಿನಿಮಾಗಳನ್ನು ತಿಪಟೂರು ರಘು ನೀಡಿದ್ದಾರೆ. 1984ರಲ್ಲಿ ಬಿಡುಗಡೆ ಆದ ಶಂಕರ್‌ನಾಗ್-ವಿಷ್ಣುವರ್ಧನ್ ನಟನೆಯ 'ಬೆಂಕಿ-ಬಿರುಗಾಳಿ', 'ನಾಗ ಕಾಳ ಭೈರ', 'ವೀಣೆ', 'ಬೆಟ್ಟದ ಕಳ್ಳ' ಇನ್ನೂ ಕೆಲವು ಸಿನಿಮಾಗಳನ್ನು ತಿಪಟೂರು ರಘು ನಿರ್ದೇಶನ ಮಾಡಿದ್ದರು. ನಿರ್ದೇಶನ ಮಾತ್ರವೇ ಅಲ್ಲದೆ ಹಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದರು ತಿಪಟೂರು ರಘು.

ಕನ್ನಡ ಚಿತ್ರರಂಗದಲ್ಲಿ ಹಲವು ಖ್ಯಾತ ನಟ-ನಟಿಯರು ಸಾಲು-ಸಾಲಾಗಿ ನಿಧನರಾಗುತ್ತಿರುವುದು ಆತಂಕಕಾರಿ. ರಿಯ ನಟ ಬಿ.ಎಂ.ಕೃಷ್ಣೇಗೌಡ, ಆರ್.ಎಸ್.ರಾಜಾರಾಮ್, ಚಿತ್ರಸಾಹಿತಿ ಶ್ರೀರಂಗ, ಕೋಟಿ ರಾಮು, ಶಂಖನಾದ ಅರವಿಂದ್, ನಿರ್ದೇಶಕ ರೇಣುಕಾ ಶರ್ಮಾ ಇನ್ನೂ ಹಲವಾರು ಮಂದಿ ಇತ್ತೀಚಿನ ದಿನಗಳಲ್ಲಿ ಸಾವನ್ನಪ್ಪಿದ್ದಾರೆ.

(Kannada Copy of  filmbeat Kannada)